ನರಹಂತಕ ಕಾಡಾನೆ ಆಪರೆಷನ್ ಯಶಸ್ವಿ.! ನಿಟ್ಟುಸಿರು ಬಿಟ್ಟ ಅಧಿಕಾರಿಗಳು
ದಾವಣಗೆರೆ: ಹೊನ್ನಾಳಿ ತಾಲ್ಲೂಕು ಜೇನಳ್ಳಿಯ ಬಳಿಯಲ್ಲಿ ಕಾಡಾನೆಯನ್ನು ಸೆರೆಹಿಡಿಯಲಾಗಿದೆ. ಹಾಸನದ ಆಲೂರು ಕಡೆಯಿಂದ ಬಂದಿದ್ದ ಆನೆಯು ಸೂಳೆಕೆರೆಯ ಸುತ್ತಮುತ್ತ ತನ್ನ ರೌದ್ರಾವತಾರವನ್ನು ತೋರಿತ್ತು.
ಅಲ್ಲಿಂದ ಹೊನ್ನಾಳಿ ಕಡೆಗೆ ಹೋದ ಆನೆಯು ನ್ಯಾಮತಿಯ ಮೂಲಕ ಶಿಕಾರಿಪುರದತ್ತ ಹೋಗುವ ಸಾಧ್ಯತೆ ಇತ್ತು. ಸಿಕ್ಕಬಿದ್ದ ನರಹಂತಕ ಆನೆಗಾಗಿ ಹುಡುಕಾಟ ನಡೆಸಿದ್ದ ಅರಣ್ಯ ಸಿಬ್ಬಂದಿ ಹಾಗೂ ಡಾರ್ಟ್ ತಜ್ಞರು ಇವತ್ತು ಆನೆಯ ಇರುವಿಕೆಯನ್ನು ಪತ್ತೆಮಾಡಿದ್ದರು. ಅಲ್ಲದೆ ಡ್ರೋನ್ ಮೂಲಕ ಆನೆಯನ್ನು ಸೈಟ್ ಮಾಡಿ, ಅದರನ್ನ ಅರವಳಿಕೆ ಚುಚ್ಚುಮದ್ದು ಕೊಟ್ಟು ಡಾರ್ಟ್ ಮಾಡಲು ಮುಂದಾಗಿದ್ದರು.
ಡಾ.ವಿನಯ್ ಮೇಲೆ ಅಟ್ಯಾಕ್ ಈ ಮಧ್ಯೆ ಕಾಡಾನೆ ಆಪರೇಷನ್ನಲ್ಲಿ ಮುಂಚೂಣಿಯಲ್ಲಿದ್ದ ಡಾ.ವಿನಯ್ರ ಮೇಲೆ ಕಾಡಾನೆಯು ದಾಳಿ ನಡೆಸಿತ್ತು. ಅರವಳಿಕೆ ಚುಚ್ಚುಮದ್ದು ಕೊಟ್ಟ ಬೆನ್ನಲ್ಲೆ ಆನೆಯು ಏಕಾಯೇಕಿ ದಾಳಿ ನಡೆಸಿ ವಿನಯ್ರ ಮೇಲೆ ಕಾಲಿಟ್ಟಿತ್ತು. ಈ ಘಟನೆಯಲ್ಲಿ ವಿನಯ್ರವರು ಗಂಭೀರವಾಗಿ ಗಾಯಗೊಂಡಿದ್ದರು.
ಮುಂದುವರಿದ ಕಾರ್ಯಾಚರಣೆ ಈ ಘಟನೆಯ ನಂತರವೂ ಕಾರ್ಯಾಚರಣೆ ಮುಂದುವರಿದಿದೆ. ನಾಗರಹೊಳೆ, ಮೈಸೂರಿನಿಂದ ಬಂದಿದ್ದ ಡಾರ್ಟ್ ತಜ್ಞರು, ಆನೆಗೆ ಅರವಳಿಕೆ ನೀಡಿ ಪ್ರಜ್ಞೆ ತಪ್ಪಿಸುವಲ್ಲಿ ಯಶಸ್ವಿಯಾಗಿದ್ಧಾರೆ. ಇನ್ನೂ ಸಕ್ರೆಬೈಲ್ ಬಿಡಾರದಿಂದ ತೆರಳಿದ್ದ ಭಾನುಮತಿ, ಬಹದ್ದೂರ್, ಸಾಗರ್, ಸೋಮಣ್ಣ ಬಾಲಣ್ಣ ಆನೆಗಳ ಸಹಾಯದಿಂದ ಮಾವುತರು ಕಾಡಾನೆಯನ್ನ ರೋಪ್ಗಳಿಂದ ಬಿಗಿದು ಕಟ್ಟಿ ಸೆರೆ ಹಿಡಿದಿದ್ದಾರೆ. ಖುಷಿಯಾದರು ಜನ ಆನೆಗೆ ಪ್ರಜ್ಞೆ ಬರುವ ಹೊತ್ತಿಗೆ ಕಾಡಾನೆಯು ಸಕ್ರೆಬೈಲ್ ಆನೆಗಳ ನಡುವೆ ಬಂಧನಕ್ಕೊಳಗಾಗಿತ್ತು.
ಇನ್ನೂ ಆನೆಯನ್ನು ಕಾಡಿಗೆ ಬಿಡಲಾಗುತ್ತದೆಯೋ ಅಥವಾ ಬಿಡಾರದಲ್ಲಿ ಟ್ರೈನ್ ಮಾಡಲಾಗುತ್ತದೆಯೋ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.
200 ಕ್ಕೂ ಹೆಚ್ಚು ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ಈ ಆನೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಈ ಭಾಗದ ಜನರು ಕೂಡ ಆನೆಯನ್ನ ಸೆರೆಹಿಡಿದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ, ಭದ್ರಾವತಿ, ಶಿವಮೊಗ್ಗ ಅರಣ್ಯ ಇಲಾಖೆ ಅಧಿಕಾರಿಗಳು, ಹೊನ್ನಾಳಿ, ಚನ್ನಗಿರಿ, ನ್ಯಾಮತಿ ಪೊಲೀಸ್ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆಯ ಪಾಲ್ಗೊಂಡಿದ್ದರು.