ಜಿಎಂಐಟಿ: 545 ವಿದ್ಯಾರ್ಥಿಗಳು ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಆಯ್ಕೆ. ಮಧ್ಯಕರ್ನಾಟಕದಲ್ಲಿ ದಾಖಲೆಯ ನೇಮಕಾತಿ!:ತೇಜಸ್ವಿ ಕಟ್ಟಿಮನಿ ಟಿ ಆರ್
ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈ ವರ್ಷದ ಉದ್ಯೋಗ ನೇಮಕಾತಿಯಲ್ಲಿ ದಾಖಲೆಯ 545 ವಿದ್ಯಾರ್ಥಿಗಳು ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಷ್ಠಿತ ಕಂಪನಿಗಳಾದ ಟಿಸಿಎಸ್, ವಿಪ್ರೋ, ಐಬಿಎಂ, ಎಸ್ ಎಲ್ ಕೆ, ಮೈಂಡ್ ಟ್ರೀ, ಹೆಚ್ ಸಿ ಎಲ್ ಟೆಕ್ನಾಲಜೀಸ್, ಟಾಟಾ ಎಲೆಕ್ಸಿ, ರೋಬೋಸಾಫ್ಟ್ ಟೆಕ್ನೋಲಜಿಸ್, ಕ್ಯಾಪ್ ಜಿಮಿನಿ, ಟೆಕ್ ಮಹೀಂದ್ರ, ಸಿಕ್ಸಡಿ ಟೆಕ್ನೋಲಜಿಸ್, ಬೈಜೂಸ್, ಟಾರ್ಗೆಟ್ ಕಾರ್ಪೋರೇಷನ್, ಇವೈ ಟೆಕ್ನೋಲಜಿಸ್, ಎಲ್ ಜಿ ಸಾಫ್ಟ್, ಉಜ್ಜಿವನ್, ಐಸಿಐಸಿಐ ಬ್ಯಾಂಕ್, ಹೆಕ್ಸಾವೇರ್, ಕ್ವಾಲಿಟೆಸ್ಟ್ ಇನ್ನು ಮುಂತಾದ ಪ್ರತಿಷ್ಠಿತ ಕಂಪನಿಗಳಿಗೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದರು.
ಇನ್ನೂ ಹತ್ತು ಹಲವು ಕಂಪನಿಗಳು ಕ್ಯಾಂಪಸ್ ಸಂದರ್ಶನವನ್ನು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೆ ಉದ್ಯೋಗ ನೀಡುವ ಗುರಿಯನ್ನು ಹೊಂದಿದೆಯೆಂದು ಇದೇ ವೇಳೆ ತಿಳಿಸಿದರು. ಮಧ್ಯ ಕರ್ನಾಟಕ ಭಾಗದಲ್ಲಿ ಇದೊಂದು ದಾಖಲೆಯ ನೇಮಕಾತಿ ಯಾಗಿದ್ದು, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದ ಕುಮಾರಿ ಬಿಂದುಶ್ರೀ, ಅಮೆರಿಕ ಮೂಲದ ಟಾರ್ಗೆಟ್ ಕಾರ್ಪೋರೇಷನ್ ಕಂಪನಿಗೆ ಆಯ್ಕೆಯಾಗಿದ್ದು ವಾರ್ಷಿಕ 13.3 ಲಕ್ಷ ರೂಗಳನ್ನು ನೀಡುತ್ತಿದೆ. ಹಾಗೆಯೇ ಲಂಡನ್ ಮೂಲದ ಇವೈ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 32 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯು ಪ್ರಸಂಶೆ ಯನ್ನು ವ್ಯಕ್ತಪಡಿಸಿದ್ದು, ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದೆ ಎಂದು ತಿಳಿಸಿದರು.
ಇನ್ನೂ ಅನೇಕ ಪ್ರತಿಷ್ಠಿತ ಕಂಪನಿಗಳಾದ ಇನ್ಫೋಸಿಸ್, ಸಾಸ್ಕೆನ್ ಕಮ್ಯುನಿಕೇಷನ್, ಡೆಲಾಯ್ಟ್ , ಅಪ್ಸ್ಟಾಕ್ಸ್ , ಟಿ ಇ ಕನೆಕ್ಟಿವಿಟಿ, ಹರ್ಮನ್ ಕನ್ನೆಕ್ಟೆಡ್ ಸರ್ವೀಸಸ್ ಮುಂತಾದ ಕಂಪನಿಗಳು ಈಗಾಗಲೇ ಸಂದರ್ಶನ ಪ್ರಕ್ರಿಯೆ ಮುಗಿಸಿದ್ದು, ಫಲಿತಾಂಶ ಪ್ರಕಟಿಸಲಿದೆ ಎಂದು ತೇಜಸ್ವಿ ಕಟ್ಟಿಮನಿ ಟಿ ಆರ್ ಇದೇ ವೇಳೆ ತಿಳಿಸಿದರು.