ಬಂದೂಕು ಸ್ವಚ್ಛಗೊಳಿಸಲು ಹೋಗಿ ಮಿಸ್ ಫೈರಿಂಗ್.! ಪ್ರಾಣಾಪಾಯದಿಂದ ಪಾರು

ಬಂದೂಕು ಸ್ವಚ್ಛಗೊಳಿಸಲು ಹೋಗಿ ಮಿಸ್ ಫೈರಿಂಗ್.!ಪ್ರಾಣಾಪಾಯದಿಂದ ಪಾರು
ದಾವಣಗೆರೆ: ಪರವಾನಗಿ ಹೊಂದಿದ್ದ ಬಂದೂಕು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಗುಂಡು ಹಣೆಗೆ ಸಿಡಿದ ಘಟನೆ ನಗರದಲ್ಲಿ ನಡೆದ ಘಟನೆ ನಗದಲ್ಲಿ ನಡೆದಿದೆ.
ಮಂಜುನಾಥ ರೇವಣ್ಕರ್ (62) ಇವರು ಬುಧವಾರ ಸಂಜೆ ತಮ್ಮ ಬಂದೂಕು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಬಂದೂಕಿನ ಒಳಗೆ ಇದ್ದ ಗುಂಡು ಆಕಸ್ಮಿಕವಾಗಿ ಹಣೆಗೆ ತಗುಲಿದ್ದು, ಆಶ್ಟರ್ಯಕರ ರೀತಿಯಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಸಿ.ಬಿ. ರಿಷ್ಯಂತ್, ಪರವಾನಗಿ ಪಡೆದ ಎಲ್ಲರಿಗೂ ಬಂದೂಕುಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ. ಆದಾಗ್ಯೂ ಕೆಲವರು ನಿಯಮ ಅನುಸರಿಸದೆ ಬಂದೂಕು ಸ್ವಚ್ಛಗೊಳಿಸಲು ಮುಂದಾದಾಗ ಇಂತಹ ಘಟನೆಗಳು ನಡೆಯುತ್ತವೆ ಎಂದಿದ್ದಾರೆ.
ಗುಂಡುಗಳನ್ನು ಹೊರ ತೆಗೆದ ನಂತರವೇ ಬಂದೂಕು ಸ್ವಚ್ಛಗೊಳಿಸಬೇಕು. ಆದರೆ ಮಂಜುನಾಥ ರೇವಣ್ಕರ್ ಅವರು ಗುಂಡು ಇರುವಾಗಲೇ ಸ್ವಚ್ಛಗೊಳಿಸಿದ್ದಾರೆ. ಅವರು ಬದುಕಿ ಉಳಿದಿರುವುದೇ ಆಶ್ಚರ್ಯ ತರಿಸಿದೆ. ಇಂತಹ ಅನೇಕ ಪ್ರಕರಣಗಳಲ್ಲಿ ಹೆಚ್ಚಿನ ಜನ ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಆದ್ದರಿಂದ ಪರವಾನಗಿ ಪಡೆದವರು ಎಚ್ಚರಿಕೆಯಿಂದ ವೆಪನ್ಸ್ ಸ್ವಚ್ಛಗೊಳಿಸುವಂತೆ ಅವರು ಸಲಹೆ ನೀಡಿದ್ದಾರೆ.

 
                         
                       
                       
                       
                       
                       
                       
                      