govt teachers jobs; ಶಿಕ್ಷಕರ ಹುದ್ದೆಗಳ ಭರ್ತಿಗೆ ಮಾಹಿತಿ ಕೇಳಿದ ಸರ್ಕಾರ

ಬೆಂಗಳೂರು, ಆ.31: ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆ ವತಿಯಿಂದ 2023-24ನೇ ಸಾಲಿಗೆ ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು (govt teachers jobs) ಮತ್ತು ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವಂತೆ ಆದೇಶ ಹೊರಡಿಸಿದೆ.
ಇದೇ ವರ್ಷದ ಜುಲೈ 20ರಂದು ನಡೆದ ಸಭೆಯಲ್ಲಿ ತೀರ್ಮಾನಿಸಿರುವಂತೆ ಶಿಕ್ಷಣ ಇಲಾಖೆಯಿಂದ ಕೆಲವು ಮಾಹಿತಿ/ದಾಖಲೆಗಳನ್ನು ಪತ್ರದೊಂದಿಗೆ ಅನುಬಂಧಿಸಿರುವ ನಮೂನೆಯಲ್ಲಿ ದಿನಾಂಕ 06.09.2023ರ ಒಳಗಾಗಿ ಒದಗಿಸುವಂತೆ ಸಮಗ್ರ ಶಿಕ್ಷಣದ ರಾಜ್ಯ ಯೋಜನಾ ನಿರ್ದೇಶಕರಿಗೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ಪತ್ರದ ಮೂಲಕ ಹಾಗೂ ಕೆಲ ನಮೂನೆ ಮೂಲಕ ಕೋರಿದೆ.
Minority; ಅಲ್ಪಸಂಖ್ಯಾತರ ಸಮುದಾಯಗಳಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಕೋರಿರುವ ಪ್ರಮುಖ ಅಂಶಗಳು:
1. ತಮ್ಮ ಕಛೇರಿಯಲ್ಲಿ ಮಂಜೂರಾಗಿರುವ ತಾಂತ್ರಿಕ ಸಹಾಯಕ ಹುದ್ದೆಗಳ ಮಂಜೂರಾತಿ ಆದೇಶ ಮತ್ತು ಮಂಜೂರಾಗಿರುವ ತಾಂತ್ರಿಕ ಸಹಾಯಕರ ಹುದ್ದೆಗಳ ಪೈಕಿ ಪ್ರಾಥಮಿಕ/ಪ್ರೌಢಶಾಲಾ ವಿಭಾಗದ ಹುದ್ದೆಗಳ ವಿವರ, ಒಂದು ವೇಳೆ ಹುದ್ದೆ ಮಂಜೂರಾಗದೇ ಇದ್ದಲ್ಲಿ ಶೂನ್ಯ ವರದಿಯನ್ನು ನೀಡಲಾಗುವುದು.
2. ನಿರ್ದಿಷ್ಟಪಡಿಸಿದ ಹುದ್ದೆಗಳ ಲಿಖಿತ ಪರೀಕ್ಷೆಯ ಪತ್ರಿಕೆ-02ರ ಪ್ರಶ್ನೆ ಪತ್ರಿಕೆಯ ಆಯಾ ಹುದ್ದೆಯ ಕಾರ್ಯವ್ಯಾಪ್ತಿಗೆ ಸಂಬಂಧಪಟ್ಟ ವಿಷಯಗಳನ್ನು ಒಳಗೊಂಡಿರುವುದರಿಂದ ತಮ್ಮ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾಂತ್ರಿಕ ಸಹಾಯಕರ ಜಾಬ್ ಚಾರ್ಟ ಪ್ರತಿಯನ್ನು ಒದಗಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.