ನೀರು,ಅನ್ನ ಮತ್ತು ಸಂಸ್ಕತಿ ಜೀವನದ ಅಮೂಲ್ಯ ರತ್ನಗಳು:ಶ್ರೀ.ಷ.ಬ್ರ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀ*

ದಾವಣಗರೆ:  ಹಸಿವು ಇದ್ದಾಗ ಮಾತ್ರ ಊಟ ಮಾಡಿ ಹಸಿವು ಇಲ್ಲದ ವೇಳೆ ಊಟ ಮಾಡಲು ಹೋದರೆ ಅನ್ನವನ್ನು ತಟ್ಟೆಯಲ್ಲೇ ಬಿಡುವಂತ ಪರಿಸ್ಥಿತಿ ಉಂಟಾಗುತ್ತದೆ. ಅನ್ನವನ್ನು ಯಾರು ಸಹ ಬಿಸಾಕಬಾರದೆಂದು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಶ್ರೀ.ಷ.ಬ್ರ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀಗಳು ತಿಳಿಸಿದರು. ನಗರದ ಶ್ರೀ ಸೋಮೇಶ್ವರ ಶಾಲೆ ಬಳಿಯ ನೂತನವಾಗಿ ನಿರ್ಮಾಣಗೊಂಡ ನೇತ್ರಾವತಿ ಕನ್ವೇನ್ಷನ್ ಹಾಲ್ ಉದ್ಘಾಟನೆ ಮಾಡಿ ಈ ವಿಷಯ ತಿಳಿಸಿದರು.

ನೀರು,ಅನ್ನ ಮತ್ತು ಸಂಸ್ಕತಿ  ಜೀವನದ ಅಮೂಲ್ಯ ರತ್ನಗಳು ತಮ್ಮ ಜೀವನದ ಬದಲಾವಣೆಗೆ ಅವಶ್ಯಕತೆಗೆ ತಕ್ಕಂತೆ ಉಪಯೋಗಿಸಿಕೊಳ್ಳಬಾರದೆಂದು ಶ್ರಿಗಳು ಕಿವಿಮಾತು ಹೇಳಿದರು. ದಾನದಲ್ಲೇ ಅನ್ನದಾನ ಕೂಡ ಶ್ರೇಷ್ಠವಾದದ್ದು ಇತ್ತೀಚೆಗೆ ಶುಭ ಸಮಾರಂಭಗಳಲ್ಲಿ ಸಾಕಷ್ಟು ಅನ್ನವನ್ನ ಚೆಲ್ಲುತ್ತಾರೆ ಯಾರು ಸಹ ಅನ್ನವನ್ನು  ಬಿಸಕಬಾರದೆಂದು ತಿಳಿಸಿದರು. ಎಷ್ಟೋ ಜನ ಅನ್ನವಿಲ್ಲದೇ ಇದ್ದಾರೆ, ಹೀಗಾಗಿ ಹಸಿವು ಇದ್ದವರಿಗೆ ನಾವು ಅನ್ನ ಹಾಕುವ ಕೆಲಸ ಮಾಡಬೇಕು ದೇವರು ಮೆಚ್ಚುತ್ತಾನೆ ಎಂದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಾ. ಶಿವಯೋಗಿಸ್ವಾಮಿಯರು, ಶ್ರೀಸೋಮೇಶ್ವರ ವಿದ್ಯಾಲಯ. ಅಧ್ಯಕ್ಷರಾದ ಅಶೋಕ ರೆಡ್ಡಿ, ಗೌರವಕಾರ್ಯದರ್ಶಿಗಳಾದ ಕೆ.ಎಂ.ಸುರೇಶ್, ಪಾಲಿಕೆ ಸದಸ್ಯರಾದ ಕೆ.ಎಂ ವೀರೇಶ್ ಹಾಗೂ . ರುದ್ರಯ್ಯ, ಡಿ ಎಸ್. ಶಿಶಿವಶಂಕರ್, ಎನ್ ಈ ನಟರಾಜ್, ರೇಣುಕಾರಾಧ್ಯ, ಎಲ್ ಏನ್. ಕಲ್ಲೇಶ್, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!