ಡಿ ಆರ್ ಆರ್ ಪಾಲಿಟೆಕ್ನಿಕ್ ಜಮೀನನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಸ್ತಾಂತರ.! ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳು

ದಾವಣಗೆರೆ : ಡಿ.ಆರ್.ಆರ್.ಸರ್ಕಾರಿ, ಪಾಲಿಟೆಕ್ನಿಕ್, ದಾವಣಗೆರೆ ಸಂಸ್ಥೆಯ 3 ಎಕರೆ ಜಮೀನನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನೀಡಬೇಕೆಂದು ಏಕಪಕ್ಷೀಯವಾಗಿ ಸರ್ಕಾರವು ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ನೀಡಿದ ಚಕ್ಕುಬಂದಿಗೆ ಆದೇಶ ನೀಡಿರುತ್ತದೆ. ಸರ್ಕಾರದ ಆದೇಶ ನೀಡಿದ ಜಾಗದಲ್ಲಿ ಮೆಕ್ಯಾನಿಕಲ್ ವರ್ಕ್‌ ಶಾಪ್, ಮಹಿಳಾ ವಿದ್ಯಾರ್ಥಿನಿಲಯ ಹಾಗೂ ಆಟದ ಮೈದಾನ ಇರುತ್ತದೆ. ಸದರಿ ಆಟದ ಮೈದಾನದಲ್ಲಿ ಕಟ್ಟಡವನ್ನು ನಿರ್ಮಿಸಲು ಅತಿಕ್ರಮಣ ಮಾಡಿರುವ ಸಲುವಾಗಿ ವಿದ್ಯಾರ್ಥಿ ಸಂಘ ಹಾಗೂ ವಿದ್ಯಾರ್ಥಿಗಳು ಮನವಿ ಮಾಡುವುದೆನೆಂದರೆ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಪ್ರಥಮ ದರ್ಜೆ ಕಾಲೇಜಿನವರಿಗೆ ಬೇರೆ ಕಡೆ ಜಾಗ ನೀಡುವವರೆಗೆ ಮುಷ್ಕರವನ್ನು ನಡೆಸಲು ತಿರ್ಮಾನಿಸಿದ್ದು, ದಿ:10-01-2023 ರಿಂದ ಕಾಲೇಜು ಆವರಣದಲ್ಲಿ ವಿದ್ಯಾರ್ಥಿ ಸಂಘದಿಂದ ಶಾಂತಿಯುತ ಪ್ರತಿಭಟಣೆಯನ್ನು ಅನಿರ್ಧಿಷ್ಟ ಅವಧಿಯವರೆಗೂ ಹಮ್ಮಿಕೊಳ್ಳುತ್ತಿದ್ದೇವೆ. ಆದ್ದರಿಂದ ನಮಗೆ ರಕ್ಷಣೆಯನ್ನು ನೀಡಬೇಕಾಗಿ ಕೋರುತ್ತವೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ದಾವಣಗೆರೆಯ ಕ್ಷಣ ಕ್ಷಣದ ಸುದ್ದಿಗಾಗಿ ಗರುಡವಾಯ್ಸ್ ವಾಟ್ಸ್ ಅಪ್ ಸೇರಲು 👇ಕ್ಲಿಕ್ ಮಾಡಿ…

https://chat.whatsapp.com/KKoKihnFdmWGVs3kl4BVty

 

Leave a Reply

Your email address will not be published. Required fields are marked *

error: Content is protected !!