ಗೃಹ ಜ್ಯೋತಿ ವೇದಿಕೆಯಲ್ಲಿ ‘ಕೈ’ ಜೊತೆ ಬಿಜೆಪಿ ಶಾಸಕರ ಹೈ ವೊಲ್ಟೇಜ್ ಗಲಾಟೆ
ದಾವಣಗೆರೆ : ಏ ಸುಮನೆ ಕುತುಕೊಳ್ರೊ ನನಗೆ ಅಧಿಕಾರವಿದೆ ನಾನು ಕೇಳುತ್ತೇನೆ, ಮೋದಿ ಕೇಳಿ ನೀವು ಅಕ್ಕಿ ಕೊಟ್ಟಿದ್ರಾ, ಆಮಿಷ ಓಡ್ಡಿ ಅಧಿಕಾರಕ್ಕೆ ಬಂದ್ರಿ ಎಂದು ದಾವಣಗೆರೆ ಜಿಲ್ಲೆಯ ಬಿಜೆಪಿ ಏಕೈಕ ಶಾಸಕ ಹರೀಶ್ ಹೇಳುತ್ತಿದ್ದಂತೆ ವೇದಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೂ ಬಿಜೆಪಿ ಶಾಸಕರಿಗೂ ಮಾತಿನ ಚಕಮಕಿ ನಡೆಯಿತು.
ದಾವಣಗೆರೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ರಾಜ್ಯ ಸರ್ಕಾರದ ಗೃಹಜೋತಿ ಯೋಜನೆ ಚಾಲನಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆಯಿತು.
ಹರಿಹರ ಶಾಸಕ ಬಿ.ಪಿ.ಹರೀಶ್ ಮಾತನಾಡುವುದಕ್ಕೂ ಮುಂಚೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಕೇಂದ್ರ ಸರಕಾರ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡದೇ ಮೋಸ ಮಾಡಿತು, ಪ್ರಧಾನಿ ಮೋದಿ ಅಕ್ಕಿ ಕೊಡಲಿಲ್ಲ ಎಂದು ಹೇಳಿದರು..ಈ ಮಾತಿಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಹರೀಶ್ ದೇಶದಲ್ಲಿ ಮೂವತ್ತು ರಾಜ್ಯಗಳಿದ್ದು, ಮೂವತ್ತು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತದೆ. ಸಿದ್ದರಾಮಣ್ಣ ಹತ್ತು ಕೆಜಿ ಅಂತಾನೆ, ಹನುಮಣ್ಣ ಇಪ್ಪತ್ತು ಕೆಜಿ ಅಂತಾನೆ..ಇನ್ನೊಬ್ಬ ಹನುಮಣ್ಣ ಮೂವತ್ತು ಕೆಜಿ ಅಂತಾನೆ..ರಾಜಕೀಯ ಪಕ್ಷಗಳಿಗೆ ಗೊತ್ತಾಗುತ್ತೇ..ಆಮಿಷ ಒಡ್ಡಿ ಅಧಿಕಾರಕ್ಕೆ ಬರಬಹುದು ಅಂತಾ..ಎಲ್ಲ ರಾಜ್ಯಗಳಲ್ಲಿಯೂ ಚುನಾವಣೆ ನಡೆಯುತ್ತದೆ. ಅಂತೆಯೇ ಕರ್ನಾಟಕದಲ್ಲಿಯೂ ಚುನಾವಣೆ ನಡೆಯುತ್ತದೆ..ಎಲ್ಲ ರಾಜಕೀಯ ಪಕ್ಷಗಳು ಆಮಿಷ ಒಡ್ಡಿ ಅಧಿಕಾರಕ್ಕೆ ಬರಬಹುದು ಅಂತ..ಅಂತೆಯೇ ಕಾಂಗ್ರೆಸ್ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಿಸಿತು. ಅದರೆ ಮೋದಿ ಕೇಳಿ ನೀವು ಆಶ್ವಾಸನೆ ಕೊಟ್ಟಿದ್ರಾ ಎಂದು ಶಾಸಕ ಬಿ.ಪಿ.ಹರೀಶ್ ಪ್ರಶ್ನಿಸಿದರು. ಮೋದಿ ಅಕ್ಕಿ ಕೊಡುತ್ತೇನೆ ಅಂತಾ ಹೇಳಿದ್ರಾ? ಎಂದಾಗ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಕಟ್ಟೆ ಹೊಡೆಯಿತು.
ನಾ ಮಾತನಾಡುತ್ತೇನೆ, ನನಗೆ ಅಧಿಕಾರವಿದೆ. ಶಾಸಕ ಬಸವಂತಪ್ಪರ ಮಾತಿಗೆ ನಾನು ಉತ್ತರ ಕೊಟ್ಟಿದ್ದೇನೆ. ನಾನು ಹೋರಾಟ ಮಾಡಿಕೊಂಡೇ ಬಂದಿರೋದು, ಯಾಕಾಯ್ಯ ನನಗೂ ಅಧಿಕಾರ ಇದೆ. ಮಾತನಾಡಾಬಾರಾದ ಎಂದಾಗ ಕೆಳಗಿದ್ದ ಕಾಂಗ್ರೆಸ್ ಕಾರ್ಯಕರ್ತರು ವೇದಿಕೆ ಮೇಲೆ ಬರಲು ಶುರುಮಾಡಿದರು. ಆಗ ಹರಿಹರ ಮಾಜಿ ಶಾಸಕ ರಾಮಪ್ಪ ಹಾಲಿ ಶಾಸಕ ಹರೀಶ್ ರನ್ನು ಸುಮ್ಮರಿಸಲು ಪ್ರಯತ್ನಿಸಿದರು. ಆದರೂ ಗಲಾಟೆ ಜೋರಾಗಿತ್ತು..ನಂತರ ವೇದಿಕೆ ಮೇಲೆ ಬಂದ ಕಾಂಗ್ರೆಸ್ ಕಾರ್ಯಕರ್ತ ನಮ್ಮ ಸರಕಾರ ಬಂದಿದೆ ಅದಕ್ಕೆ ಮಾತನಾಡುತ್ತೇವೆ. ನಿಮ್ಮ ಪ್ರಧಾನಿ ಮೋದಿ ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ಹಾಕುತ್ತೇನೆ ಅಂದ್ರಲ್ಲ ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದರು..ಹೀಗಿರುವಾಗ ಸಾಕಷ್ಟು ಕಾರ್ಯಕರ್ತರು ವೇದಿಕೆ ಮೇಲೆ ಹೋಗಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು.
ಎಎಸ್ಪಿ ಬಸರಗಿ ಶಾಸಕ ಹರೀಶ್ ರನ್ನು ಸಮಾಧಾನಿಸಿದರು. ಆದರೆ ಗಲಾಟೆ ಜೋರಾದಂತೆ ಶಾಸಕ ಹರೀಶ್ ತನ್ನ ಪಟ್ಟು ಸಡಿಸಲಿಲ್ಲ..ನೀವು ಎಷ್ಟು ಮಾತನಾಡುತ್ತಾರೋ ಅಷ್ಟು ನಾನು ಮಾತಾನಾಡುತ್ತೇನೆ. ಸುಮ್ಮನೇ ಇರಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಿದಾಗ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕೈ ಕಾರ್ಯಕರ್ತರನ್ನು ಸುಮ್ಮನೆ ಇರಿಸಿದರು..ಒಟ್ಟಾರೆ ಗೃಹ ಜ್ಯೋತಿ ಕಾರ್ಯಕ್ರಮದಲ್ಲಿ ಅಕ್ಕಿ ಭಾಗ್ಯದ ಗಲಾಟೆ ಹೈ ವೊಲ್ಟೇಜ್ ಶಾಕ್ ರೀತಿಯಲ್ಲಿ ಜೋರಾಗಿತ್ತು.