ಮಾರ್ಚ್ ತಿಂಗಳಲ್ಲಿ ಎಷ್ಟಿವೆ ಬ್ಯಾಂಕುಗಳ ರಜಾ ದಿನಗಳು?

18

ಬೆಂಗಳೂರು : ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಪ್ರಕಟ ಮಾಡಿದೆ.
ಆರ್‌ಬಿಐ ಹಂಚಿಕೊAಡ ರಜಾ ಕ್ಯಾಲೆಂಡರ್ ಪ್ರಕಾರ, ಮಾರ್ಚ್ 2022 ರಲ್ಲಿ ಬ್ಯಾಂಕುಗಳು 13 ದಿನ ಮುಚ್ಚಲಿದೆ. ರಾಷ್ಟಿçÃಯ ರಜಾ ದಿನಗಳ ಹೊರತಾಗಿ, ಕೆಲವು ರಾಜ್ಯವಾರು ರಜಾ ದಿನಗಳು ಎಲ್ಲಾ ಭಾನುವಾರಗಳ ರಜೆ, ಎರಡನೇ ನಾಲ್ಕನೇ ಶನಿವಾರ ಇದರಲ್ಲಿ ಸೇರ್ಪಡೆ ಆಗಿದೆ. ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾ ದಿನವಿರಲಿದೆ. ಈ ಹಣಕಾಸು ವರ್ಷ ಅಂತ್ಯದ ತಿಂಗಳಾದ ಮಾರ್ಚ್ನಲ್ಲಿ ಹಲವಾರು ಬ್ಯಾಂಕ್ ವಹಿವಾಟುಗಳನ್ನು ನೀವು ಮಾಡಬೇಕಾಗಿರಬಹುದು. ಆದ್ದರಿಂದಾಗಿ ಬ್ಯಾಂಕಿಗೆ ಹೋಗುವ ಮುನ್ನ ಬ್ಯಾಂಕ್ ರಜೆ ಪಟ್ಟಿಯನ್ನು ನೀವು ನೋಡುವುದು ಮುಖ್ಯ.
ಬ್ಯಾಂಕ್ ರಜೆಗಳ ಮೂರು ವರ್ಗೀಕರಣ :
ಆರ್‌ಬಿಐ ನಿಯಮದ ಪ್ರಕಾರ ರಜಾ ದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ.
1. ವರ್ಗಾವಣೀಯ ಲಿಖಿತಗಳ ಅಧಿನಿಯಮ (ನೆಗೋಶಬಲ್ ಇನ್ಸು÷್ಟçಮೆಂಟ್ಸ್ ಆಕ್ಟ್) ಅಡಿಯಲ್ಲಿ ರಜಾದಿನ
2. ನೆಗೋಶಿಯೇಬಲ್ ಇನ್ಸು÷್ಟçಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ
3. ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಾಚಾರ ಅವಧಿ
ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ:
ಮಾರ್ಚ್ 01, ಮಹಾಶಿವರಾತ್ರಿ, ಮಾರ್ಚ್ 03, ಲೋಸರ್, ಮಾರ್ಚ್ 04, ಚಾಪ್ಚಾರ್ ಕುಟ್, ಮಾರ್ಚ್ 17, ಹೋಳಿ, ಮಾರ್ಚ್ 18, ಹೋಳಿ / ಹೋಳಿ 2ನೇ ದಿನ, ಮಾರ್ಚ್ 19, ಹೋಳಿ/ಯೋಸಾಂಗ್ 2ನೇ ದಿನ, ಮಾರ್ಚ್ 22, ಬಿಹಾರ ದಿವಸ,
ಶನಿವಾರ ಮತ್ತು ಭಾನುವಾರದ ರಜಾದಿನಗಳ ಪಟ್ಟಿ:
ಭಾನುವಾರ: ಮಾರ್ಚ್ 6, ಎರಡನೇ ಶನಿವಾರ: ಮಾರ್ಚ್ 12, ಭಾನುವಾರ: ಮಾರ್ಚ್ 13, ಭಾನುವಾರ: ಮಾರ್ಚ್ 20, ನಾಲ್ಕನೇ ಶನಿವಾರ: ಮಾರ್ಚ್ 26, ಭಾನುವಾರ: ಮಾರ್ಚ್ 27, ಇನ್ನು ಇದನ್ನು ಹೊರತುಪಡಿಸಿ ಬ್ಯಾಂಕ್ ಮುಷ್ಕರ ಹಿನ್ನೆಲೆ ಮಾರ್ಚ್ 28-29ರಂದು ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!