ಅಕ್ರಮ ಗ್ಯಾಸ್ ರಿಫಿಲ್ಲಿಂಗ್ : ಪೊಲೀಸರ ದಾಳಿ
ದಾವಣಗೆರೆ: ನಗರದ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಾ ನಗರಕ್ಕೆ ಹೋಗುವ ಮಾರ್ಗದ ಸಮೀಪದಲ್ಲಿ ಪಾಳು ಬಿದ್ದಿರುವ ಕೆ.ಎಂ.ಸಿ ಕಾಂಪೌಂಡ್ ಒಳಗಿನ ಸ್ಥಳದಲ್ಲಿ ಅಕ್ರಮವಾಗಿ ಗ್ರಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದ ಘಟಕಕ್ಕೆ ಪೊಲೀಸರು ಡಿ.12 ರಂದು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ಭಾರತ್ ಕಾಲೋನಿ ನಿವಾಸಿ ಹಾಗೂ ಆಟೋ ಚಾಲಕ ಮಲ್ಲೇಶಪ್ಪ (50), ಭಾಷಾ ನಗರದ ನಿವಾಸಿ ಹಾಗೂ ಹೆಚ್.ಪಿ ಕಂಪನಿಯಲ್ಲಿ ಡ್ರೈವರ್ ವೃತ್ತಿಯಲ್ಲಿದ್ದ ಸುಹೆಲ್ ರಜಾ (20) ಎಂಬುವವರು ಕಾನೂನು ಬಾಹಿರವಾಗಿ ಸರ್ಕಾರದ ಅನುಮತಿ ಇಲ್ಲದೇ ಗ್ಯಾಸ್ ತುಂಬಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಐಪಿಎಸ್ ರವರ ಮಾರ್ಗದರ್ಶನದಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ HP ಹೆಸರಿನ 26 ತುಂಬಿದ ಸಿಲಿಂಡರ್ ಗಳು, 12 HP ಹೆಸರಿನ ಖಾಲಿ ಸಿಲಿಂಡರ್ ಗಳು, 03 ಸಣ್ಣ ಖಾಲಿ ಸಿಲಿಂಡರ್ ಗಳು, ಗ್ಯಾಸ್ ರೀಪಿಲ್ಲಿಂಗ್ ಕಡ್ಡಿ, ಗ್ಯಾಸ್ ರಿಫಿಲ್ಲಿಂಗ್ ಯಂತ್ರ ಸೇರಿದಂತೆ ಇತರೆ ತೂಕದ ಯಂತ್ರಗಳು ಹಾಗೂ ಒಂದು ಗೊಡ್ಸ್ ಆಫೆ ಆಟೋವನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ್ 106/2023 ರಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿ ಆರೋಪಿತರನ್ನು ಪತ್ತೆಯಚ್ಚಿದ್ದಾರೆ.
ಡಿ.ಸಿ.ಆರ್.ಬಿ ಘಟಕದ ಪೊಲೀಸ್ ನಿರೀಕ್ಷಕರಾದ ರುದ್ರಪ್ಪ ಎಲ್, ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಪ್ರಭಾವತಿ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ರಾಘವೇಂದ್ರ, ಮಜೀದ್, ಅಶೋಕ್, ಬಾಲಾಜಿ, ನಟರಾಜ್, ಆಂಜನೇಯ, ಮಾರುತಿ ಇವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದ್ದಾರೆ.