ಜಿ.ಎಂ.ಐ.ಟಿ ಕಾಲೇಜಿನಲ್ಲಿ “ಸುಕಲ್ಪ” ಎರಡು ದಿನದ ರಾಜ್ಯ ಮಟ್ಟದ ಟೆಕ್ ಫೆಸ್ಟ್ ನ ಉದ್ಘಾಟನೆ

ದಾವಣಗೆರೆ: ನಗರದ ಪ್ರತಿಷ್ಠಿತ ಜಿ.ಎಂ ತಾಂತ್ರಿಕ ಮಹಾ ವಿದ್ಯಾಲಯದ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ ಸುಕಲ್ಪ ಎರಡು ದಿನದ ರಾಜ್ಯ ಮಟ್ಟದ ಟೆಕ್ ಫೆಸ್ಟ್ ತಾಂತ್ರಿಕ ಸಂಭ್ರಮ ದಿನಾಂಕ: 11/01/2022 ರಿಂದ 12/01/2022ರ ವರೆಗೆ ನಡೆಯಲಿದ್ದು, ಈ ಟೆಕ್ ಫೆಸ್ಟ್ ನಲ್ಲಿ ವಿವಿಧ ತಾಂತ್ರಿಕ ಸ್ಪರ್ದೆಗಳು ನಡೆಯಲಿದ್ದು ಅದರಲ್ಲಿ – ಪ್ರಬಂಧ ಸ್ಪರ್ದೆ, ಕೋಡಿಂಗ್ ಸ್ಪರ್ದೆ, ಪರಿಕಲ್ಪನಾ ಪ್ರಸ್ತುತಿ ಹಾಗು ಮುಂತಾದ ಸ್ಪರ್ಧೆಗಳು ನಡೆಯಲಿದ್ದು ಇದರಲ್ಲಿ ರಾಜ್ಯದ ವಿವಧ ಕಾಲೇಜಿನ ಸುಮಾರು 250 ಕ್ಕು ಹೆಚ್ಚು ವಿದ್ಯಾರ್ಥಿಗಳು ಹಾಗು ದಾವಣಗೆರೆಯ ಹಲವು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಐ.ಎಸ್.ಟಿ.ಇ ಸಹಯೋಗದಲ್ಲಿ ನಡೆಯಲಿದ್ದು ಹಾಗು ತಾಂತ್ರಿಕ ಸ್ಪರ್ಧೆಗಳು ಬಿ.ಪಿ.ಎ. ಲ್ಯಾಬ್ಸ್ ಹಾಗೂ ಸೂಕ್ಷಾö್ಮಸ್ ಬೆಂಬಲದೊಂದಿಗೆ ಆಯೋಜಿಸಲಾಗಿದೆ.

ದಿನಾಂಕ: 11/01/2022ರ ಬೆಳಿಗ್ಗೆ 10.00 ಗಂಟೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂಥಾ ಡಾ|| ಶರವಾನಿ ಜಿ.ಎಸ್, ಅಸೊಸಿಯೆಟ್ ಪ್ರೊಫೆಸರ್, ಕಂಪ್ಯೂಟರ್ ಸೈಸ್ಸ್ ವಿಭಾಗ, ಆರ್.ವಿ.ಸಿ.ಇ, ಬೆಂಗಳೂರು ಇವರು ಉದ್ಘಾಟಿಸಿ ಮಾತನಾಡಿದ ಅವರು ಸುಕಲ್ಪ ಎಂಬ ಈ ಎರಡು ದಿನದ ಟೆಕನಿಕಲ್ ಫೇಸ್ಟ್ ಒಂದು ಅದ್ಭುತವಾದ ಕಲ್ಪನೆ ಎಂದು ತಿಳಿಸಿದರು. ಹಾಗು ಈ ಒಂದು ಟೆಕ್ ಫೆಸ್ಟ್ ವಿದ್ಯಾರ್ಥಿಗಳಿಗೆ ಅವರಲ್ಲಿರು ಪ್ರತಿಭೆಯನ್ನು ತೋರಿಸಲು ಹಾಗು ಅದನ್ನು ಪೋಷಿಸಲು ಒಂದು ಉತ್ತಮವಾದ ವೇದಿಕೆಯಾಗಲಿದೆ ಎಂದು ತಿಳಿಸಿದರು ಹಾಗು ವಿದ್ಯಾಥಿಗಳು ಇಂಥಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅವರ ಆತ್ಮವಿಶ್ವಾಸವು ಹಾಗು ವಿಷಯಗಳ ಜ್ಞಾನವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಲಿದೆ ಎಂದು ತಿಳಿಸಿದರು ಮತ್ತು ಈ ಟೆಕ್ ಫೆಸ್ಟ್ನಲ್ಲಿ ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಈ ಕಾರ್ಯಕ್ರಮದಲ್ಲಿ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ|| ಸುನೀಲ್ ಕುಮಾರ್ .ಬಿ.ಎಸ್. ರವರು ಈ ಟೆಕ್ ಫೆಸ್ಟ್ ನಲ್ಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಕಂಡು ಹರ್ಷ ವ್ಯಕ್ತಪಡಿಸಿದರು ಹಾಗೂ ಸುಕಲ್ಪ ಟೆಕ್ ಫೆಸ್ಟ್ನ ವಿಷೇಶತೆಗಳು ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು ನಂತರ ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮತ್ತು ಇದೇ ಸಂದರ್ಭದಲ್ಲಿ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ವಾರ್ಷಿಕ ಪತ್ರಿಕೆಯ ಬಿಡುಗಡೆಯನ್ನು ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ಲೇಸ್‌ಮೆಂಟ್ ಹಾಗು ಟ್ರೆöÊನಿಂಗ್ ವಿಭಾಗದ ಮುಖ್ಯಸ್ಥರಾದ ಪ್ರೊ. ತೇಜಸ್ವಿ ಕಟ್ಟಿಮನಿರವರು ಮಾತನಾಡಿ ಕಾಲೇಜಿನಲ್ಲಿ ಇಲ್ಲಿಯ ವರೆಗೆ ನಡೆದ ಹಲವು ವಿದ್ಯಾರ್ಥಿಗಳ ಪ್ಲೇಸ್ಮೆಂಟ್ ಹೊಂದಿರುವ ವಿವರಣೆ ನೀಡಿದರು ಮತ್ತು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ವಿದ್ಯಾರ್ಥಿಗಳಿಗೆ ಹುದ್ದೆಗಳ ಭರ್ತಿಗಾಗಿ ಹೊಸ ಹೊಸ ಕಂಪೆನಿಗಳೂಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವುದಾಗಿ ತಿಳಿಸಿದರು ಹಾಗು ಈ ಟೆಕ್ ಫೆಸ್ಟ್ ನಲ್ಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಸ್ತುವಾರಿ ಪ್ರಾಂಶುಪಾಲರಾದ ಡಾ|| ಸಂಜಯ್ ಪಾಂಡೆ, ಅವರು ಸುಕಲ್ಪ ಟೆಕ್ ಫೆಸ್ಟ್ ನಲ್ಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಇಂಥಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾಂತ್ರಿಕ ಜ್ಞಾನವನ್ನು ಬೆಳೆಸಿಕೊಳ್ಳುವುದು ಮತ್ತು ಅದರ ಜೋತೆಗೆ ತಾಂತ್ರಿಕ ಕೌಶಲ್ಯಗಳಿಗೆ ಹೆಚ್ಚು ಒತ್ತು ಕೊಡುವುದು ಅತಿ ಅವಶ್ಯಕ ಹಾಗು ವಿದ್ಯಾರ್ಥಿಗಳು ಇಂಥಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅವರ ತಾಂತ್ರಿಕ ಕೌಶಲ್ಯಗಳು ಮತ್ತು ಜ್ಞಾನವು ವೃಧ್ದಿಸುವಲ್ಲಿ ಸಹಾಯಕವಾಗಲಿವೆ ಎಂದು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲ ವಿದ್ಯಾರ್ಥಿಗಳಿಗೆ ತಿಳಿಸಿದರು ನಂತರ ಅವರು ಸುಕಲ್ಪ ಟೆಕ್ ಫೆಸ್ಟ್ ನಲ್ಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಉದ್ಘಾಟನಾ ಸಮಾರಂಭದಲ್ಲಿ ನಿರ್ವಹಣಾ ಪ್ರತಿನಿಧಿಗಳಾದ ಶ್ರೀ ವೈ. ಯು. ಸುಭಾಶ್‌ಚಂದ್ರ, ಕಾಲೇಜಿನ ಉಸ್ತುವಾರಿ ಪ್ರಾಂಶುಪಾಲರಾದ ಡಾ|| ಸಂಜಯ್ ಪಾಂಡೇ, ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಹಾಗು ಡೀನ್ ಅಕ್ಯಾಡೆಮಿಕ್ ಡಾ|| ಸುನೀಲ್ ಕುಮಾರ್ .ಬಿ.ಎಸ್. , ಕಾಲೇಜಿನ ಪ್ಲೇಸ್‌ಮೆಂಟ್ ಹಾಗು ಟ್ರೆöÊನಿಂಗ್ ವಿಭಾಗದ ಮುಖ್ಯಸ್ಥರಾದ ಪ್ರೊ. ತೇಜಸ್ವಿ ಕಟ್ಟಿಮನಿ ಮತ್ತು ಟೆಕ್ ಫೆಸ್ಟ್ ಸಂಯೋಜಕರುಗಳಾದ ಪ್ರೊ. ನಸ್ರೀನ್ ತಾಜ್, ಪ್ರೋ. ಅಮಿತ್ ಶೇಖರ್ ಹಾಗು ಕಾಲೇಜಿನ ಭೋಧಕ ಹಾಗು ಬೊಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಉದ್ಘಾಟನಾ ಸಮಾರಂಭದಲ್ಲಿ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಕು. ಕಾವ್ಯಾ ಹಗ್ದೆ, ಪ್ರಾರ್ಥಿಸಿದರು, ಕು. ಸೌಮ್ಯಾ .ಜಿ.ಎಸ್, ಅತಿಥಿಗಳನ್ನು ಸ್ವಾಗತಿಸಿದರು, ಪ್ರೊ. ನಸ್ರೀನ್ ತಾಜ್ ಸುಕಲ್ಪದಲ್ಲಿ ನಡೆಯುವ ವಿವಿಧ ಸ್ಪರ್ಧೆಗಳ ಬಗ್ಗೆ ವಿವರಿಸಿದರು, ಪ್ರೊ. ಅಮಿತ್ ಶೇಖರ್ ಅತಿಥಿಗಳ ಪರಿಚಯ ನೀಡಿದರು, ಹಾಗು ಪ್ರೊ. ಫಿರೋಜ್ ಖಾನ್, ವಂದನಾರ್ಪಣೆಯನ್ನು ನೆರವೇರಿಸಿದರು, ಮತ್ತು ವಿದ್ಯಾರ್ಥಿಗಳಾದ ಕು. ಐಶ್ವರ್ಯ ಎಸ್. ಎಲಿ ಹಾಗು ಕು. ಜೀವಿತಾ .ಎಸ್. ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!