ಹುಟ್ಟೂರಲ್ಲಿ ಮಳೆಗೆ ಹಾನಿಯಾದ ಕುಟುಂಬಕ್ಕೆ ಇನ್‌ಸೈಟ್ ಬಿ.ಜೆ ವಿನಯ್ ಕುಮಾರ್ ನೆರವು
ದಾವಣಗೆರೆ: ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಮಳೆ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಸಂಕಷ್ಟಕ್ಕೊಳಗಾದ ಸಂತ್ರಸ್ತ ಕುಟುಂಬಕ್ಕೆ ಇನ್‌ಸೈಟ್ ಐಎಎಸ್, ಐಪಿಎಸ್ ತರಬೇತಿ ಕೇಂದ್ರದ ಸಂಸ್ಥಾಪಕ ಬಿ.ಜೆ.ವಿನಯ್ ಕುಮಾರ್ ಅವರು ಧನಸಹಾಯ ಮಾಡಿದರು.
ಕೂಡಲೇ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ನೀಡಿ ಅವರ ನೆರವಿಗೆ ತ್ವರಿತವಾಗಿ ಸ್ಪಂದಿಸಬೇಕೆದು ಕಕ್ಕರಗೊಳ್ಳಕ್ಕೆ ಆಗಮಿಸಿದ ತಹಶಿಲ್ದಾರರವರಿಗೆ ಇದೇ ವೇಳೆ ಮನವಿ ಮಾಡಿದರು.