ಜಗಳೂರು ಕ್ಷೇತ್ರದ 57 ಕೆರೆ ತುಂಬಿಸುವ ಯೋಜನೆಯ ಕೆರೆಗಳಿಗೆ ಭೇಟಿ ನೀಡಿದ ಸಿರಿಗೆರೆ ಶ್ರೀ ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿ

ದಾವಣಗೆರೆ: ಜಗಳೂರು ಕ್ಷೇತ್ರದ 57 ಕೆರೆ ತುಂಬಿಸುವ ಯೋಜನೆ ಚಟ್ನಿಹಳ್ಳಿ ಗುಡ್ದದ ಮೇಲಿನ ಕಾಮಗಾರಿ ವೀಕ್ಷಿಣೆಗೆ ಆಗಾಮಿಸಿದ ಪೂಜ್ಯ ಗುರುಗಳನ್ನ ಜಗಳೂರಿನ ಶಾಸಕರು ಹಾಗೂ ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿಯ ಅದ್ಯಕ್ಷರಾದ ಎಸ್ ವಿ ರಾಮಚಂದ್ರಪ್ಪ ಅಣಜಿ ಬಳಿ ತಮ್ಮ ಕಾರ್ಯಕರ್ತರೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಗುರುಗಳು ಮಾತನಾಡಿ ದೇಶದ ಅಭಿವೃದ್ಧಿಗೆ ಶಾಶ್ವತ ಕಾಮಗಾರಿಗಳ ಅಗತ್ಯ ಇದೆ. ತಜ್ಞರು, ಸಲಹಾ ಸಮಿತಿಗಳು ಸರಕಾರಕ್ಕೆ ಮಾಹಿತಿಗಳನ್ನು ಸಿಪಾರಸ್ಸು ಮಾಡುವಂತಾಗಬೇಕು ಎಂದರು

ಅನುದಾನ ಬಿಡುಗಡೆಗಾಗಿ ಶಾಸಕರಾದ ಎಸ್.ವಿ ರಾಮಚಂದ್ರ ಹಾಗೂ ಚಂದ್ರಪ್ಪ ಅವರು ರಾಜೀನಾಮೆಗೂ ಸಿದ್ಧಗೊಂಡಿದ್ದರು. ಆದರೆ, ಇದಕ್ಕೆ ಅವಕಾಶ ನೀಡದ ಅಂದಿನ ಮಂತ್ರಿ ಮಂಡಲದಲ್ಲಿದ್ದ ಎಸ್.ಆರ್ ಬೊಮ್ಮಾಯಿ, ಸಿ.ಟಿ ರವಿ, ಸಿ.ಸಿ ಪಾಟೀಲ್, ಗೋವಿಂದ ಕಾರಜೋಳ, ಮಾಧುಸ್ವಾಮಿ ಅವರು 1200 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆದೇಶ ಹೊರಡಿಸಿದರು.

 

ಕರ್ನಾಟಕದ ಆಡಳಿತದ ಅವಧಿಯಲ್ಲಿ ವಾರದ ಒಳಗೆ ಮಂಜೂರಾತಿ ಹಿಂಪಡೆದು ಬಹುದೊಡ್ಡ ಮೊತ್ತದ ಅನುಮೋದನೆ ನೀಡಿದ ಹೆಗ್ಗಳಿಕೆ ಕರ್ನಾಟಕ ಸರಕಾರಕ್ಕೆ ಸಲ್ಲುತ್ತದೆ ಎಂದು ಸಂತಸ ವ್ಯೆಕ್ತಪಡಿಸಿದರು.

ಶಾಸಕರು ಎಸ್.ವಿ ರಾಮಚಂದ್ರಪ್ಪ ರವರು ಮಾತನಾಡಿ 57 ಕೆರೆ ತುಂಬಿಸುವ ಯೋಜನೆ ಶೇಕಡಾವಾರು ಕಾಮಗಾರಿ ಮುಗಿದಿದ್ದು, ಡಿಸೆಂಬರ್ ತಿಂಗಳ ಒಳಗೆ ಕೆರೆಗಳಲ್ಲಿ ನೀರು ಹರಿಯಲಿದೆ. ಮಹತ್ತರವಾದ ಯೋಜನೆಗೆ ಶ್ರೀಗಳ ಶಾಶ್ವತ ಹೆಜ್ಜೆ ಗುರುತು ಸದಾಕಾಲ ಉಳಿಯಲಿದೆ ಎಂದರು.

ಈ ಸಂದರ್ಭದಲ್ಲಿ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಮಲ್ಲಪ್ಪ , ಸೇರಿದಂತೆ ಜನಪ್ರತಿನಿಧಿಗಳು, ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!