ಕಾರ್ಕಳದಲ್ಲಿ ಅಖಾಡಕ್ಕೆ ಇಳಿಯಲು ಸಿದ್ಧವಾದ ಜೈ ಹನುಮ ಸೇನೆ ರಾಜ್ಯ ಸಂಚಾಲಕ ಹನುಮಂತಪ್ಪ ಅಭ್ಯರ್ಥಿ

ಕಾರ್ಕಳದಲ್ಲಿ ಅಖಾಡಕ್ಕೆ ಇಳಿಯಲು ಸಿದ್ಧವಾದ ಜೈ ಹನುಮ ಸೇನೆ ರಾಜ್ಯ ಸಂಚಾಲಕ ಹನುಮಂತಪ್ಪ ಅಭ್ಯರ್ಥಿ

ಕಾರ್ಕಳ :ಹಿಂದೂ ಧರ್ಮವು ವಸುದೈವ ಕುಟುಂಬಕಂ ಎಂಬ ತತ್ತ್ವ ನಂಬಿಕೆ ಮೇಲೆ ನಿಂತು ವಿಶ್ವಮಟ್ಟದಲ್ಲಿ ಜ್ವಾಲಾಯಮಾನವಾಗಿ ಪ್ರಜ್ವಲಿಸುತ್ತಿದೆ. ಮನುಷ್ಯ ಜಾತಿ ಒಂದೇ ಎನ್ನುವುದು ಪ್ರಕೃತಿ ತಾಯಿಯ ಸಂದೇಶವಾಗಿದೆ. ಭೂಮಂಡಲದಲ್ಲಿ ಅದರಲ್ಲೂ ನಮ್ಮ ಭರತ ದೇಶ ಕಟ್ಟುವಲ್ಲಿ ಹಿಂದುಳಿದ ಸಮುದಾಯದ, ದುಡಿಯುವ ಜನರ ಹನಿ ಹನಿ ಬೆವರಿದೆ. ದುಡಿಯುವ ಸರ್ವ ಜನರು ಆರಾಧಿಸುವ, ಶಕ್ತಿ ದೇವನಾದ ನಮ್ಮ ಕುಲದೈವ ಹನುಮಾನ್ ಜೀ ಅವರ ಪಾತ್ರ ದೊಡ್ಡದಿದೆ. ದುಡಿಯುವ ಜನರು ಹಾಗೂ ಹಿಂದುಳಿದ ಸರ್ವ ಸಮುದಾಯಗಳನ್ನು ಪ್ರತಿನಿಧಿಸುವ ನಮ್ಮ ಕುಲದೈವ ಹನುಮಾನ್ ಜೀ ನಂಬಿಕೆಗೆ, ಭಕ್ತಿಗೆ, ವಿಶ್ವಾಸಕ್ಕೆ ಹಾಗೂ ಸ್ವಾಮಿನಿಷ್ಠೆಗೆ ಹೆಸರಾಗಿದ್ದಾರೆ ಎಂದು ಜೈ ಹನುಮ ಸೇನೆಯ ರಾಜ್ಯ ಸಂಚಾಲಕ ಹನುಮಂತಪ್ಪ ತಿಳಿಸಿದರು
ಅವರು ಕಾರ್ಕಳದ ಪ್ರಕಾಶ ಹೋಟೆಲ್ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಹನುಮ ಹುಟ್ಟಿದ ನಾಡು ಕನಾಟಕದಲ್ಲಿ, ಹನುಮನ ಶಕ್ತಿಯ ಕಾರಣ ದುಡಿಯುವ ಜನರು ಹಾಗೂ ಹಿಂದುಳಿದ ಸರ್ವ ಸಮುದಾಯಗಳು ಏನೆಲ್ಲ ಕಷ್ಟ-ಕಾರ್ಪಣ್ಯವನ್ನು ಎದುರಿಸಿಯೂ ದಿಟ್ಟತನದಿಂದ ಜೀವನ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ಆರಾಧ್ಯ ದೈವವನ್ನು ಆರಾಧಿಸುವ ಜೊತೆಗೆ ನಮ್ಮ ಹನುಮಾನ್ ಜೀ ವಿಚಾರಗಳನ್ನು ಬಲಗೊಳಿಸುವುದು, ಪರಸ್ಪರ ಸಹಕರಿಸುವುದು ಆ ಮೂಲಕ ಸಮುದಾಯಗಳ ಸರ್ವ ಏಳಿಗೆ ಬಯಸುವುದು ಸರ್ವ ಹನುಮಭಕ್ತರ ಜವಾಬ್ದಾರಿಯಾಗಿದೆ ಎಂದರು

ಈ ವಿಚಾರಗಳನ್ನು ಇಂದಿನ ದಿನಮಾನಗಳಲ್ಲಿ ಕಾಲಕಾಲಕ್ಕೂ ದುಡಿಯುತ್ತ ಬಂದಿರುವ ಜನರು ಹಾಗೂ ಹಿಂದುಳಿದ ಸಮುದಾಯದ ಜಾತಿಗಳಿಗೆ ತಲುಪಿಸುವ ಕೆಲಸವಾಗಬೇಕಿದೆ. ಈ ಕಾರ್ಯವು ನಮ್ಮ ಕರ್ತವ್ಯವಾಗಿದೆ. ಹನುಮನ ನಾಡಾಗಿರುವ ಕರ್ನಾಟಕದಲ್ಲಿ ಹನುಮನ ವಿಚಾರಗಳನ್ನು, ಹನುಮನ ಅಂತಃಕರಣದ ಹೃದಯವನ್ನು, ಹನುಮನ ಶಕ್ತಿಯನ್ನು, ಹನುಮ ಭಕ್ತರು ತೋರ್ಪಡಿಸುವ ಜೊತೆಗೆ ಸುಭಿಕ್ಷ ಸಮಾಜವನ್ನು ಕಟ್ಟಿಕೊಡುವುದು ನಮ್ಮೆಲ್ಲರ ಕಾಯಕವಾಗಿದೆ. ಇದು ನಮ್ಮ ಧರ್ಮದ ಅಂತಃರಾಳವಾಗಿದೆ. ಧರ್ಮದ ನೈಜ ಸಾರವನ್ನು ಅರಿತು. ಅದನ್ನು ಎಲ್ಲೆಡೆ ಪಸರಿಸುವುದು ನಮ್ಮ-ನಿಮ್ಮೆಲ್ಲರ ಕರ್ತವ್ಯವಾಗಿದೆ.

ಹನುಮನ ಉದಾತ್ತ ವಿಚಾರಗಳನ್ನು ಹನುಮನ ಭಕ್ತರಿಗೆ ತಲುಪಿಸುವುದು ಸೇನೆಯು ಉದಾತ್ತ ಧೈಯಗಳನ್ನಿಟ್ಟುಕೊಂಡು “ಜೈ ಹನುಮಾನ್ ಸೇನೆ”ಯ ರಚನೆಯಾಗಿದ್ದು, ನಮ್ಮದೈವ ಹನುಮನನ್ನು ಪೂಜಿಸುವ, ಆರಾಧಿಸುವ ಜನರ ರಕ್ಷಣೆ, ಅವರ ಏಳಿಗೆ ಸೇನೆಯ ಮುಖ್ಯ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಹನುಮನ ಜನ್ಮಭೂಮಿ ಅಂಜನಾದ್ರಿಯಿಂದ ಜೈ ಹನುಮಾನ್ ಸೇನೆಯ ಯಾನ ರಾಜ್ಯಾದ್ಯಂತ ಆರಂಭಗೊಂಡಿದೆ ಕರ್ನಾಟಕದ ಕರಾವಳಿಯ ಕಾರ್ಕಳ, ಮಲೆನಾಡು, ಕಲ್ಯಾಣ ಕರ್ನಾಟಕ ,ಹೈದರಬಾದ್ ಕರ್ನಾಟಕದ ಭಾಗದಲ್ಲಿ ವಿಧಾನಸಬೆಗೆ ಸ್ಪರ್ದಿಸಲು ತಯಾರಿ ನಡೆಸಿದೆ ಇದರ ಭಾಗವಾಗಿ ಕಾರ್ಕಳದಲ್ಲಿ ಸ್ವತಹ ತಾನೇ ಸ್ಪರ್ದಿಸಲಿದ್ದೇನೆ ಎಂದರು
ಸದೃಢ ಕರ್ನಾಟಕ್ಕಾಗಿ ದೆಹಲಿ ಮಾಧರಿಯಂತೆ ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾಡುವುದು. ಪಿ.ಯು.ಸಿ. ಯಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಾರಿಗೆ ಅನಾನೂಕೂಲವಿದ್ದರೆ, ವಸತಿ ನಿಲಯಗಳ ವ್ಯವಸ್ಥೆ. ಶೈಕ್ಷಣಿಕ ಭತ್ಯೆ 10ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗೆ ಎಲ್ಲಾ ವಿದ್ಯಾರ್ಥಿನಿಯರಿಗೆ ಬಸ್ ಪಾಸ್ ಉಚಿತ. ಐ.ಟಿ.ಐ.ಡಿಪ್ಲೋಮಾ, ಇಂಜನೀಯರಿಂಗ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಟೂಲ್ ಬಾಕ್ಸ್ ಮತ್ತು ಟ್ಯಾಬ್ ವಿತರಣೆ ವಿದ್ಯಾರ್ಥಿಗಳಿಗೆ ಸ್ತ್ರೀ ಕಾಸ್ಟ್‌ನಲ್ಲಿ ಮೆಡಿಕಲ್ ಶಿಕ್ಷಣ ನೀಡುವುದು.1 ರಿಂದ 10 ನೇ ತರಗತಿವರೆಗೆ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ರೂ. 2,000/- ವಿಶೇಷ, 10ನೇ ತರಗತಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಫ್ಲ್ಯಾಷ್‌ಲೈಟ್, ಶಾಲಾ ಬ್ಯಾಗ್, ಸಮ ವಸ್ತ್ರ ಸೇರಿದಂತೆ ಇತ್ಯಾದಿ ಶೈಕ್ಷಣಿಕ ವಸ್ತುಗಳನ್ನು ಕೊಡಲಾಗುವುದು. ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಜಾರಿಗೆಗೊಳಿಸಲಾಗುವುದು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ರೂ. 3,500/- ಮಾಸಿಕ ಭತ್ಯೆ, ಬಿ.ಪಿ.ಎಲ್. ಪ್ರತಿ ಕುಟುಂಬಕ್ಕೆ ವಾರ್ಷಿಕ ರೂ. 10,000/- ಕೊಡುಗೆ ದೇವದಾಸಿ ಕುಟುಂಬಕ್ಕೆ ರೂ. 5.00 ಲಕ್ಷದವರೆಗೆ ವಿಶೇಷ ಯೋಜನೆ ದೇವದಾಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ರೂ. 50,000/- ವಾರ್ಷಿಕ ಕೊಡುಗೆ ಶವ ಸಂಸ್ಕಾರಕ್ಕೆ ರೂ. 10,000/- ಮಂಜೂರಾತಿ ,ಪ್ರತಿ ಗ್ರಾಮಕ್ಕೆ ಹೈ ಟೆಕ್ ಬಸ್ ನಿರ್ಮಾಣ ,ವಿಧವಾ ವೇತನ ಮಾಸಿಕ ರೂ. 3,000/, ವಿಶೇಷ ಚೇತನರ ಭತ್ಯೆಯನ್ನು ಮಾಸಿಕ ರೂ.4,000/, ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಮಹಿಳಾ ಕೈಗಾರಿಕಾ ಘಟಕ ಸ್ಥಾಪನೆ ಪ್ರತಿ ತಾಲೂಕಿಗೆ 2 ರಂತೆ 100 ಹಾಸಿಗೆಯ ತಾಯಿ-ಮಕ್ಕಳ ವಿಶೇಷ ಆರೈಕೆ ಆಸ್ಪತ್ರೆ ,ಬಿ.ಪಿ.ಎಲ್. ಕಾರ್ಡ್ ಹೊಂದಿದ ಬಾಣಂತಿಗೆ ಹೆರಿಗೆ 15 ದಿನಗಳೊಳಗೆ ರೂ. 15,000/- ಸಹಾಯ ಧನ,ಪ್ರತಿ ತಾಲೂಕಿಗೆ ಒಂದರಂತೆ ಎಂ.ಆರ್.ಐ. ಸ್ಕ್ಯಾನಿಂಗ್ ಸೆಂಟರ್‌ ನಿರ್ಮಾಣ,ಪ್ರತಿ ಜಿಲ್ಲೆಗೊಂದರಂತೆ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ನಿರ್ಮಾಣ,ತಾಲೂಕಿಗೆ ಒಂದರಂತೆ ಮೂಳೆ-ಎಲುಬು ಶಸ್ತ್ರ ಚಿಕಿತ್ಸಾ ಆಸ್ಪತ್ರೆ ನಿರ್ಮಾಣ, ಜಿಲ್ಲೆಗೊಂದು ಹೃದಯ ಬ್ಯಾಂಕ್ ಆಸ್ಪತ್ರೆ ನಿರ್ಮಾಣ,
ಪ್ರತಿ ತಾಲೂಕ ಆಸ್ಪತ್ರೆಗಳಿಗೆ ವಿಶೇಷ ತಜ್ಞರ 24×7 ವೈದ್ಯಾಧಿಕಾರಿಗಳ ಸೇವೆ ದೊರೆಯಲು ಶಿಫ್ಟ್ ವೈಜ್ ನೇಮಕಾತಿ,ಪ್ರತಿ ಜಿಲ್ಲೆಗೊಂದು ಔಷಧ ಸಂಶೋಧನಾ ಕೇಂದ್ರ ಸ್ಥಾಪನೆ. ಪ್ರತಿ ಆರೋಗ್ಯ ಕೇಂದ್ರದಲ್ಲಿ ಎಲ್ಲಾ ತರಹದ ಔಷಧಿಗಳು ಸಾಮಾನು ರೋಗಿಗೆ ದೊರೆಯುವಂತೆ ಮಾಡುವುದು. ಜಿಲ್ಲೆಗೊಂದು ಮೂತ್ರಪಿಂಡ ಚಿಕಿತ್ಸಾ ಆಸ್ಪತ್ರೆ ನಿರ್ಮಾಣ ಮುಂತಾದ ಪ್ರಮುಖ ವಿಷಯಗಳ ಮೇಲೆ ಪ್ರಾಮುಖ್ಯತೆ ನೀಡಲಿದ್ದು ಇವುಗಳ ಅನುಷ್ಠಾನಕ್ಕಾಗಿ ನಿರಂತರ ಹೋರಾಟ ನಡೆಸಲಿದ್ದೇವೆ ಎಂದರು

Leave a Reply

Your email address will not be published. Required fields are marked *

error: Content is protected !!