ಜೆಸಿಬಿ ಚಕ್ರದ ಗುರುತು ನಾಶಮಾಡಿ ಮತ್ತೊಂದು ಎಡವಟ್ಟು ಮಾಡಿಕೊಂಡ ಬಿ ದುರ್ಗ ಪಂಚಾಯತ್.!

ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಗ್ರಾಮಪಂಚಾಯತಿಯಲ್ಲಿ ನರೇಗಾ ಯೋಜನೆಯ ನಿಯಮ ಉಲ್ಲಂಘಿಸಿ ನಡೆಸಿದ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದ್ದ ಗರುಡಾ ವಾಯ್ಸ್ ಗೆ ಬೆಚ್ಚಿಬಿದ್ದಿದ್ದ ಗ್ರಾಮ ಪಂಚಾಯತಿ ಸದಸ್ಯರು ನಡೆಸಿರುವ ಭ್ರಷ್ಟಾಚಾರಕ್ಕೆ ತಿಪ್ಪೆಸಾರಿಸಿದ್ದಾರೆ!
ಹೌದು, ಬಿ. ದುರ್ಗಾ ಗ್ರಾಮಪಂಚಾಯತ್ ಸದಸ್ಯರು ದುಡಿಯುವ ಕೈಗಳಿಗೆ ಕೆಲಸ ನೀಡಿ ಹೊಟ್ಟೆತುಂಬಿಸುವ ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಸಿ, ಹಣ ಲೂಟಿ ಹೊಡೆಯಲು ಮುಂದಾಗಿದ್ದರು. ಕಾರ್ಮಿಕರಿಗೆ ಕೆಲಸ ನೀಡುವ ಬದಲು ಜೆಸಿಬಿ ಮೂಲಕ ಕೆಲಸ ನಡೆಸಿ, ಪರಿಚಯದವರ, ಸಂಬಂಧಿಕರ ಹೆಸರಿನ ಬ್ಯಾಂಕ್ ಖಾತೆಗೆ ಹಣ ಬರುವಂತೆ ಮಾಡಿ ನಂತರ ಅದನ್ನು ಜೇಬಿಗಿಳಿಸಿಕೊಳ್ಳುತ್ತಿದ್ದರು. ಇವರ ವಿರುದ್ಧ ಗರುಡಾ ವಾಯ್ಸ್ ಸುದ್ದಿ ಬಿತ್ತರಿಸಿತ್ತು.
ಜೆಸಿಬಿ ಮೂಲಕ ನಡೆಸಿದ್ದಕ್ಕೆ ಫೋಟೊದಲ್ಲಿದ್ದ ಜೆಸಿಬಿ ವಾಹನದ ಚಕ್ರದ ಗುರುತು ಇದಕ್ಕೆ ಕೈಗನ್ನಡಿಯಂತೆ ಕಾಣುತ್ತಿತ್ತು. ಈಗ ಈ ಫೋಟೊ ಬದಲಿಗೆ ಅದನ್ನು ಸರಿಪಡಿಸಿ, ಹೊಸದೊಂದು ಫೋಟೊವನ್ನು ಅದೇ ಕಾಮಗಾರಿಗೆ ಸಂಬಂಧಿಸಿದಂತೆ ಹಾಕಲಾಗಿದೆ.
ಇದನ್ನು ಕಂಡರೆ ಗ್ರಾಮ ಪಂಚಾಯತ್ ಸದಸ್ಯರ ಮೇಲೆ ಗರುಡಾ ವಾಯ್ಸ್ ಹದ್ದಿನ ಕಣ್ಣಿಟ್ಟಿದೆ ಎಂಬುದನ್ನು ಅವರು ಎಚ್ಚೆತ್ತುಕೊಂಡಂತಿದೆ.