job; ಇಂಟೆಲಿಜೆನ್ಸ್‌ ಬ್ಯೂರೋದಲ್ಲಿ 677 ಹುದ್ದೆಗಳು : SSLC ಪಾಸ್ ಆದವರಿಗೆ ಭರ್ಜರಿ ಸಿಹಿಸುದ್ದಿ

ನವದೆಹಲಿ: ಇಂಟೆಲಿಜೆನ್ಸ್‌ ಬ್ಯೂರೋ (IB Recruitment) ದಲ್ಲಿ ಸೆಕ್ಯುರಿಟಿ ಅಸಿಸ್ಟೆಂಟ್‌/ ಮೋಟರ್ ಟ್ರಾನ್ಸ್‌ಪೋರ್ಟ್, ಎಂಟಿಎಸ್ (ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌) ಹುದ್ದೆಗಳು ಸೇರಿದಂತೆ ಖಾಲಿ ಇರುವ ವಿವಿಧ 677 ಹುದ್ದೆಗಳ (job) ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ದೇಶಾದ್ಯಂತ ಹುದ್ದೆ ಖಾಲಿ ಇದ್ದು, ಅರ್ಜಿ ಸಲ್ಲಿಸುವವರು ತಮ್ಮ ಅರ್ಜಿಯನ್ನು ನವೆಂಬರ್ 13 ರೊಳಗಾಗಿ ಅಧಿಕೃತ ವೆಬ್’ಸೈಟ್ mha.gov.in ಮೂಲಕವೇ ಅರ್ಜಿ ಸಲ್ಲಿಸಬೇಕು.

ಹುದ್ದೆ ಮತ್ತು ಶೈಕ್ಷಣಿಕ ಅರ್ಹತೆಗಳು, ವಯೋಮಿತಿಯ ವಿವರ

ಸೆಕ್ಯುರಿಟಿ ಅಸಿಸ್ಟೆಂಟ್‌/ ಮೋಟರ್‌ ಟ್ರಾನ್ಸ್‌ಪೋರ್ಟ್ ಗೆ 362 ಪೋಸ್ಟ್ ಗಳು ಖಾಲಿ ಇದ್ದು ಅರ್ಜಿ ಸಲ್ಲಿಸುವವರು 27 ವರ್ಷದಳೊಗಿರಬೇಕು ಮತ್ತು ಎಂಟಿಎಸ್ ಗೆ 315 ಪೋಸ್ಟ್ ಗಳು ಖಾಲಿಯಿದ್ದು 18-25 ವರ್ಷ ಮೀರಿರಬಾರದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ರಿಯಾಯಿತಿ ಲಭ್ಯವಿದ್ದು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ. ಅಧಿಚೂಚನೆ ಪ್ರಕಾರ ಅಂಗೀಕೃತ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ 10ನೇ ತರಗತಿ ತೇರ್ಗಡೆಯಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

KUWJ; ಕೆಯುಡಬ್ಯುಜೆ ವಾರ್ಷಿಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ ಎಷ್ಟು?

1. ಎಂಟಿಎಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ/ ಒಬಿಸಿ/ ಇಡಬ್ಲ್ಯುಎಸ್‌ ಪುರುಷ ಅಭ್ಯರ್ಥಿಗಳು – ₹500
2. ಪಿಡಬ್ಲ್ಯುಡಿ ಅಭ್ಯರ್ಥಿಗಳು – ₹450
3. ಸೆಕ್ಯುರಿಟಿ ಅಸಿಸ್ಟೆಂಟ್‌/ ಮೋಟರ್‌ ಟ್ರಾನ್ಸ್‌ಪೋರ್ಟ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರತಿಯೋರ್ವ ಅಭ್ಯರ್ಥಿಗಳು – ₹500
ಆನ್‌ಲೈನ್‌ ಮತ್ತು ಆಫ್‌ಲೈಫ್‌ ಎರಡರಲ್ಲೂ ಶುಲ್ಕ ಪಾವತಿಸುವ ಅವಕಾಶವಿದೆ.

ಆಯ್ಕೆ ವಿಧಾನ ಮತ್ತು ವೇತನ ವಿವರ

ಆನ್‌ಲೈನ್‌ ಪರೀಕ್ಷೆ, ಮೋಟರ್‌ ಮೆಕ್ಯಾನಿಸಮ್‌, ಡ್ರೈವಿಂಗ್‌ ಟೆಸ್ಟ್‌, ವಿವರಣಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಸೆಕ್ಯುರಿಟಿ ಅಸಿಸ್ಟೆಂಟ್‌/ ಮೋಟರ್‌ ಟ್ರಾನ್ಸ್‌ಪೋರ್ಟ್‌ ಹುದ್ದೆಗಳಿಗೆ 21,700-69,100 ರೂ. ಮಾಸಿಕ ವೇತನ ಇದೆ. ಎಂಟಿಎಸ್‌ ಹುದ್ದೆಗೆ ಆಯ್ಕೆಯಾಗುವವರಿಗೆ ಮಾಸಿಕ 18,000-56,900 ರೂ. ವೇತನ ಸಿಗಲಿದೆ.

KSOU; ಕ.ರಾ.ಮು.ವಿ ಯಿಂದ ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ವಿಧಾನ

• ಅರ್ಜಿ ಸಲ್ಲಿಸುವ ಮುನ್ನ ಕೇಳಿರುವ ಎಲ್ಲ ಅರ್ಹತೆ ಇರುವುದನ್ನು ಖಚಿತಪಡಿಸಿಕೊಳ್ಳಿ
• ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಸಂವಹನಕ್ಕೆ ಅಗತ್ಯವಾದ, ಸರಿಯಾದ ಫೋನ್ ನಂಬರ್, ಇಮೇಲ್ ಐಡಿ ನಮೂದಿಸಿ. ಐಡಿ ಪ್ರೂಫ್, ವಯಸ್ಸಿನ ದಾಖಲಾತಿ, ಶೈಕ್ಷಣಿಕ ಅರ್ಹತೆಯ ದಾಖಲಾತಿ, ರೆಸ್ಯೂಮ್ ಇತ್ಯಾದಿ ರೆಡಿ ಮಾಡಿಟ್ಟುಕೊಳ್ಳಿ.
• ಸೆಕ್ಯುರಿಟಿ ಅಸಿಸ್ಟೆಂಟ್/ ಮೋಟರ್ ಟ್ರಾನ್ಸ್ಪೋರ್ಟ್, ಎಂಟಿಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
• ಅಗತ್ಯವಾದ ಎಲ್ಲ ಮಾಹಿತಿಗಳನ್ನು ತುಂಬಿ. ಡಾಕ್ಯುಮೆಂಟ್ನ ಸ್ಕ್ಯಾನ್ ಪ್ರತಿ, ನಿಮ್ಮ ಫೋಟೊ (ಅಗತ್ಯವಿದ್ದರೆ ಮಾತ್ರ) ಅಪ್ಲೋಡ್ ಮಾಡಿ
• ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ
• ಎಲ್ಲ ಮಾಹಿತಿ ಸರಿಯಾಗಿದೆ ಎನ್ನುವುದನ್ನು ಖಚಿತಪಡಿಸಿದ ಬಳಿಕ Intelligence Bureau Recruitment 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು Submit ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ನಂಬರ್ ಅಥವಾ ರಿಕ್ವೆಸ್ಟ್ ನಂಬರ್ ತೆಗೆದಿಡಿ.

Leave a Reply

Your email address will not be published. Required fields are marked *

error: Content is protected !!