ಜೆಡಿಎಸ್ ಪಕ್ಷ ಸೇರಲಿರುವ ಪತ್ರಕರ್ತ ಮುಸ್ತಫಾ
ಹುಬ್ಬಳ್ಳಿ : ಎರಡು ದಶಕಗಳ ಕಾಲ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ಪತ್ರಕರ್ತ ಮುಸ್ತಫಾ ಕುನ್ನಿಭಾವಿ ನಾಳೆ ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ. ನವಲಗುಂದದಲ್ಲಿ ಸಂಜೆ ನಡೆಯುವ ಬಹಿರಂಗ ಸಭೆಯಲ್ಲಿ ಮುಸ್ತಫಾ ಕುನ್ನಿಭಾವಿ ತೆನೆ ಹೊರಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆ ಸಂಜೆ ನವಲಗುಂದ ತಲುಪಲಿದ್ದು, ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಸೇರ್ಪಡೆಯಾಗಲಿದ್ದಾರೆ. ಉಚಿತ ಸಾಮೊಹಿಕ ಮದುವೆ ಸೇರಿದಂತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಮುಸ್ತಫಾ ಕುನ್ನಿಭಾವಿ, ತಮ್ಮ ಬೆಂಬಲಿಗರ ಜೊತೆ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ ಕಾಂಗ್ರೇಸ್ ಸೇರಿದ ಬಳಿಕ ಪಕ್ಷ ಸಂಘಟನೆಯ ಜವಾಬ್ದಾರಿ ಹೊರಲಿದ್ದಾರೆಂದು ಹೇಳಲಾಗಿದೆ.