ಕರ್ನಾಟಕ ರಕ್ಷಣಾ ವೇದಿಕೆಯಿಂದ ಜ್ಞಾನಕಾಶಿ ಪ್ರಶಸ್ತಿ ಪ್ರದಾನ ಸಮಾರಂಭ.

ದಾವಣಗೆರೆ: ಕರ್ನಾಟಕ ರಕ್ಷಣಾ ವೇದಿಕೆಯಿಂದ ಜ್ಞಾನಕಾಶಿ ಪ್ರಶಸ್ತಿ ಪ್ರದಾನ ಸಮಾರಂಭ ಅ.24ರಂದು ಬೆಳಗ್ಗೆ 11 ಗಂಟೆಗೆ ನಗರದ ಗುರುಭವನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಮಾತನಾಡಿ, ಕಾರ್ಯಕ್ರಮವನ್ನು ಜಗಳೂರು ಶಾಸಕ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ.ರಾಮಚಂದ್ರ
ಉದ್ಘಾಟಿಸುವರು. ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಶಿವಾನಂದ ಗುಂಡನವರ್
ಉಪನ್ಯಾಸ ನೀಡುವರು. ಕರವೇ ಜಿಲ್ಲಾ ಗೌರವಾಧ್ಯಕ್ಷ ವಾಸುದೇವ ರಾಯ್ಕರ್
ಅಧ್ಯಕ್ಷತೆ ವಹಿಸುವರು. ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ,
ಕಸಾಪ ಮಾಜಿ ತಾಲೂಕು ಅಧ್ಯಕ್ಷ ಬಿ.ವಾಮದೇವಪ್ಪ ಮತ್ತಿತರರು ಮುಖ್ಯ
ಅತಿಥಿಗಳಾಗಿ ಭಾಗವಹಿಸುವರು. 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಕನ್ನಡ
ವಿಷಯದಲ್ಲಿ 125ಕ್ಕೆ 125 ಪರಿಪೂರ್ಣ ಅಂಕ ಗಳಿಸಿದ ದಾವಣಗೆರೆ ವಿದ್ಯಾರ್ಥಿಗಳಿಗೆ
ಕಾರ್ಯಕ್ರಮದಲ್ಲಿ ಜ್ಞಾನಕಾಶಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು‌.

ಸಂಘಟನೆ ಮುಖಂಡರಾದ ಬಸಮ್ಮ, ಮಲ್ಲಿಕಾರ್ಜುನ, ಕೆ.ಜಿ.ಬಸವರಾಜ,
ದೇವರಮನಿ ಗೋಪಾಲ್, ಲೋಕೇಶ, ಜಬೀವುಲ್ಲಾ, ಖಾದರ್ ಇತರರು
ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!