ಕೋಡಿಹಳ್ಳಿ ವೀರ ಮಹಾಸತಿ ಕಲ್ಲು ಸ್ವಚ್ಛ ಗೊಳಿಸಿ ವಿಶ್ವ ಪಾರಂಪರಿಕ ದಿನಾಚರಣೆ
ದಾವಣಗೆರೆ : ವಿಶ್ವ ಪಾರಂಪರಿಕ ದಿನಾಚಾರಣೆ ಪ್ರಯುಕ್ತ ಇತಿಹಾಸ ಸಂಶೋಧಕ ಡಾ.ಬುರುಡೇಕಟ್ಟೆ ಮಂಜಪ್ಪ ,ಪತ್ರಕರ್ತ ಪುರಂದರ ಅವರು ಲೋಕಿಕೆರೆ ಶ್ರೀಮತಿ ಚಂದ್ರಮ್ಮ ಬಿ ಆರ್ ಇವರ ನೆರವಿನೊಂದಿಗೆ ಕೋಡಿಹಳ್ಳಿ ಗ್ರಾಮಸ್ಥರು ಜೋಪಾನವಾಗಿ ಸುರಕ್ಷಿತವಾಗಿ ಇಟ್ಟಿರುವ ಸುಂದರವಾದ ವೀರಮಹಾಸತಿ ಶಿಲ್ಪವನ್ನು ಶುಭ್ರಗೊಳಿಸಿ ಶಿಲ್ಪದ ಬಗ್ಗೆ ಮಹತ್ವನ್ನು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಆಚರಿಸಲಾಯಿತು.
18 ರೇ ಇಂದು ಬೆಳಿಗ್ಗೆ ಕೋಡಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪ್ರತಿನಿತ್ಯ ಪೂಜೆ ನಡೆಯುತ್ತಿರುವ ಸ್ಥಳೀಯರು ನಿತ್ಯ ಪೂಜಿಸುವ ಮಾಸ್ತ್ಯವ್ವ ಗುಡಿಗೆ ತೆರಳಿದ ಇತಿಹಾಸ ಸಂಶೋಧಕರು. ಸ್ಥಳೀಯ ಮಹಿಳೆಯರಿಗೆ ಮೂರ್ತಿಯನ್ನು ಶುದ್ಧ ಜಲದಿಂದ ತೊಳೆಯುವಂತೆ ವಿನಂತಿಸಿ.ಸ್ಥಳೀಯ ಕೋಡಿಹಳ್ಳಿ ಗ್ರಾಮದ ಜಯಮ್ಮ ,ಕು.ಮೊನೀಕಾ ಸೇರಿದಂತೆ ಹಲವು ಮಹಿಳೆಯರು ಶ್ರದ್ಧಾ ಪೂರ್ವ ಕ ಶುಭ್ರಗೊಳಿಸಿದರು,ಅಲ್ಲಿ ಸೇರಿದ್ಧ ಗ್ರಾಮಸ್ಥರಿಗೆ ಈ ಶಿಲ್ಪದ ಮಹತ್ವದ ಬಗ್ಗೆ ಇತಿಹಾಸ ಸಂಶೋಧಕ ಬುರುಡೆ ಕಟ್ಟೆ ಡಾ ಮಂಜಪ್ಪನವರು. ಶಿಲ್ಪಕ್ಕೆ ಅತ್ಯುತ್ತಮವಾಗಿ ಆಧುನಿಕತೆಯ ಮೇಲ್ಚ್ಚಾವಣಿ ನಿರ್ಮಿಸಿ ಕಟ್ಟೆ ಕಟ್ಟಿ ಕಲ್ಲು ಹಾಸಿದ್ದಾರೆ. ಈ ಮಹತ್ವಪೂರ್ಣ ಸಂರಕ್ಷಣಾ ಕಾರ್ಯ ಮಾಡಿದ್ದಕ್ಕಾಗಿ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು..ನಿಜಕ್ಕೂ ಕೋಡಿಹಳ್ಳಿ ಗ್ರಾಮಸ್ಥರ ಐತಿಹಾಸಿಕ ಸಂರಕ್ಷಣಾ ಪ್ರಜ್ಞೆ ಇಡೀ ರಾಜ್ಯದ ಜನತೆಗೆ ಮಾರ್ಗದರ್ಶಿಯಾಗಿದೆ.
ಶಿಲ್ಪದ ಲಕ್ಷಣ;- ವೀರಮಹಾಸತಿ ಶಿಲ್ಪವು ಸು.5 ಅಡಿ ಎತ್ತರ 3 ಅಡಿ ಅಗಲ ಕಪ್ಪು ಕಲ್ಲಿನಲ್ಲಿ ಸುಂದರವಾಗಿ ಕೆತ್ತಲಾಗಿದೆ.ಕುದುರೆಯ ಮೇಲೆ ಕುಳಿತು ಕಾಯಲ್ಲಿ ಬಾಕು ಹಿಡಿದು ಯುದ್ಧಕ್ಕೆ ಹೊರಟಿರುವ ವೀರ/ವೀರರಣಿ ವೀರಗಚ್ಛೇ ಹಾಕಿಕೊಂಡು ಕುಳಿತಿರುವಂತೆ ಕೆತ್ತಲಾಗಿದೆ.ಕುದುರೆ ಮೇಲೆ ಕುಳಿತ ವೀರ ರಾಣಿ ಅಥವಾ ರಾಜನಿಗೆ ಛತ್ರಿ ಅಥವಾ ಬೆಳಗೋಡೆ ಹಿಡಿದಿದ್ದಾನೆ.ಈ ವೀರ ಅಥವಾ ರಾಣಿ ಯುದ್ಧದಲ್ಲಿ ಹೋರಾಡಿ ಕೈಲಾಸಕ್ಕೆ ಹೋದಂತೆ ಮೇಲೆ ಮಂಟಪದಲ್ಲಿ ಈಶ್ವರ ಲಿಂಗ ಅಲಂಕಾರ ಭೂಷಿತ ರುದ್ರಾಕ್ಷಿ ಮಾಲೆಯೊಂದಿಗೆ ಇದೆ.
ಸತಿ ಹೋದ ರಾಣಿಯ ಸಕಲ ಮಂಗಲಾಭರಣ ಮಂಗಳ ದ್ರಾವಳ್ಯಾಭೂಷಿತಳಾಗಿದ್ದಾಳೆ.ಸಿಂಹಕಟಿ ಸೊಂಟಕ್ಕೆ ಪಟ್ಟಿ ತೋಳುಬಂಧಿ ಮಾಂಗಲ್ಯ ಹಾರ ಕಂಠಅಭರಣ,ಓಲೆ ಬಲೆ ಇತ್ಯಾದಿ ಸಕಲಾಭರಣ ಧರಿಸಿದ್ದಾಳೆ.ತನ್ನ ಎಡಭಾಗದ ಕೈಯಲ್ಲಿ ತುಪ್ಪದ ಗಿಂಡಿ ತಲೆಯಲ್ಲಿ ಕೇದಿಗೆ ಹೂವು ಮುಡಿದಿದ್ದಾಳೆ,ವಿಶೇಷವೆಂದರೆ ಶಿಲ್ಪದ ಹಿಂಭಾಗದಲ್ಲಿ ಸುಂದರ ಜಡೆ ಕೆತ್ತಲಾಗಿದೆ.ಶಿಲ್ಪದ ಎಡಭಾಗದಲ್ಲಿ ಸುಂದರವಾದ ಪೂರ್ಣಕುಂಭದ ಕಲಸವಿದೆ.ಬಲ ಕೈ ಅಕಾಶದಕಡೆ ಎತ್ತಿ ಇಡೀ ಮಾನವ ಕುಲಕ್ಕೆ ಆಶೀರ್ವಾದ ಮಾಡುತ್ತಿದ್ದಾಳೆ.ಲೋಕಿಕೆರೆಯಲ್ಲೂ ಸುಂದರವಾದ ವೀರಮಹಾಸತಿ ಶಿಲ್ಪಗಳಿವೆ.ಕೋಡಿಹಳ್ಳಿ ಯಲ್ಲಿ ವೀರಗಲ್ಲುಗಳು ಕಂಡುಬಂದಿವೆ ಅಧ್ಯಯನ ನಡೆಯುತ್ತಿದೆ.
ವರದಿ: ಪುರಂದರ ಲೋಕಿ ಕೆರೆ