ಕೊಂಬಿರೋ ಕುದುರೆ ಏರಿದ ಉಪ್ಪಿ.! ಚಿತ್ರದ ಟೈಟಲ್ ಏನು ಗೊತ್ತಾ.? ಹೊಸ ಚಿತ್ರದ ಉಪ್ಪಿ ಫಸ್ಟ್ ಲುಕ್.!
ಬೆಂಗಳೂರು : ಉಪೇಂದ್ರ ಅವರ ನಟನೆಗಿಂತಲೂ ಅವರ ನಿರ್ದೇಶನಕ್ಕೆ (Upendra direction) ಅಭಿಮಾನಿಗಳು ಜಾಸ್ತಿ ಎಂದರೆ ತಪ್ಪಿಲ್ಲ. ‘ಉಪ್ಪಿ 2’ ಸಿನಿಮಾ ಬಳಿಕ ಅವರು ನಿರ್ದೇಶನದಿಂದ ಕೊಂಚ ದೂರ ಉಳಿದುಕೊಂಡಿದ್ದರು. ಹಾಗಾಗಿ ಅವರು ಆದಷ್ಟು ಬೇಗ ಡೈರೆಕ್ಟರ್ ಕ್ಯಾಪ್ ಧರಿಸಲಿ ಎಂಬುದು ಎಲ್ಲ ಅಭಿಮಾನಿಗಳ ಆಸೆ ಆಗಿತ್ತು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಹೊಸ ಚಿತ್ರವನ್ನು ಉಪೇಂದ್ರ ನಿರ್ದೇಶನ ಮಾಡುವುದರ ಜೊತೆಗೆ ಹೀರೋ ಆಗಿ ನಟಿಸುತ್ತಿದ್ದಾರೆ. ಹೊಸ ಪೋಸ್ಟರ್ ಮೂಲಕ ಹಲವು ವಿಚಾರಗಳನ್ನು ಬಹಿರಂಗಪಡಿಸಲಾಗಿದೆ.
ಈ ಫಸ್ಟ್ ಲುಕ್ ಪೋಸ್ಟರ್ ಜೊತೆ ಉಪೇಂದ್ರ ಬರೆದುಕೊಂಡಿರುವ ಸಾಲುಗಳು ಕೂಡ ಗಮನ ಸೆಳೆಯುತ್ತಿವೆ. ‘ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ 33 ವರ್ಷದ ಚಿತ್ರಕಥೆಯಲ್ಲಿ ಸಂಭಾಷಣೆ ಹೇಳಿಸಿ, ಶಿಳ್ಳೆ ಚಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಪೋಸ್ಟರ್ನಲ್ಲಿ ಉಪೇಂದ್ರ ಅವರ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಮೆಂಟ್ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ವಿಶೇಷವಾಗಿ ವಿನ್ಯಾಸಗೊಂಡಿರುವ ಈ ಪೋಸ್ಟರ್ ಸದ್ಯ ವೈರಲ್ ಆಗುತ್ತಿದೆ. ಹಿನ್ನೆಲೆಯಲ್ಲಿ ಉಪಗ್ರಹ ಕಾಣಿಸಿದೆ. ಈ ಎಲ್ಲ ಕಾರಣದಿಂದ ಸಿನಿಮಾ ಬಗ್ಗೆ ಕೌತುಕ ಹೆಚ್ಚಿದೆ. ಈ ಸಿನಿಮಾಗೆ ‘ಲಹರಿ ಫಿಲ್ಮ್ಸ್’ ಮತ್ತು ‘ವೀನಸ್ ಎಂಟರ್ಟೇನರ್ಸ್’ ಸಂಸ್ಥೆಗಳು ಬಂಡವಾಳ ಹೂಡುತ್ತಿವೆ. ಜಿ. ಮನೋಹರನ್ ಮತ್ತು ಶ್ರೀಕಾಂತ್ ಕೆ.ಪಿ. ಜೊತೆಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಅದ್ದೂರಿಯಾಗಿ ಸಿನಿಮಾ ಮೂಡಿಬರಲಿದೆ.
ಉಪೇಂದ್ರ (Upendra) ಅಭಿನಯ ಮತ್ತು ನಿರ್ದೇಶನದ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ನಿರೀಕ್ಷೆಯಂತೆಯೇ ಉಪೇಂದ್ರ ಅವರು ಟೈಟಲ್ ಅನಾವರಣ ಮಾಡಿದ್ದಾರೆ. ಭಿನ್ನ-ವಿಭಿನ್ನವಾದ ಶೀರ್ಷಿಕೆಗಳನ್ನು ಇಡುವುದರಲ್ಲಿ ಅವರು ಫೇಮಸ್. ಈ ಬಾರಿ ಕೂಡ ಅಂಥದ್ದೇ ಒಂದು ಹೊಸ ಟೈಟಲ್ ಇಟ್ಟಿದ್ದಾರೆ. ಅದನ್ನು ಕುದುರೆ ಲಾಳ ಎನ್ನಬೇಕೋ, ಮೂರು ನಾಮ ಎನ್ನಬೇಕೋ, ಉಗುರಿನ ಮೇಲೆ ಮತದಾನದ ಇಂಕು ಹತ್ತಿರುವ ಗುರುತು ಎನ್ನಬೇಕೋ ಎಂಬುದು ಇನ್ನೂ ಬಗೆಹರಿದಿಲ್ಲ. ಸದ್ಯಕ್ಕೆ ಈ ಪೋಸ್ಟರ್ (Upendra New Movie First Look Poster) ಗಮನ ಸೆಳೆಯುತ್ತಿದೆ. ಕೊಂಬು ಇರುವ ಕುದುರೆಯನ್ನು ಏರಿ ಉಪೇಂದ್ರ ಬಂದಿದ್ದಾರೆ. ಅವರ ಲುಕ್ ಕೂಡ ಗಮನ ಸೆಳೆಯುತ್ತಿದೆ.