ಸೆಲ್ಫಿ ತೆಗೆಯಲು ಹೋಗಿ ಆಯತಪ್ಪಿ ಬಿದ್ದ ಪತ್ನಿ ರಕ್ಷಿಸಲು ನದಿಗೆ ಹಾರಿದ ಪತಿ

  • ಮಂಡ್ಯ : ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಮ್ ಮೇಲೆ ನಿಂತು ಸೆಲ್ಸಿ ತೆಗೆಯಲು ಹೋಗಿ ಮಹಿಳೆಯೊಬ್ಬರು ನದಿಗೆ ಬಿದ್ದ ಘಟನೆ ನಡೆದಿದೆ . ಪತ್ನಿಯನ್ನು ರಕ್ಷಿಸಲು ಹೋಗಿ ಪತಿಯೂ ನದಿಗೆ ಹಾರಿದ್ದಾರೆ .

ಕೆಆರ್‌ಎಸ್‌ನ ಕೆಳ ಸೇತುವೆ ಬಳಿ ನಡೆದಿದ್ದು ಸೇತುವೆ ಮೇಲೆ ನಿಂತು ಮೇಲೆ ಮೈಸೂರಿನ ಕೂರ್ಗಳ್ಳಿ ನಿವಾಸಿ ಆಶಾ ಸೆಲ್ಸಿ ತೆಗೆಯಲು ಹೋಗಿದ್ದರು . ಈ ವೇಳೆ ಆಯ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ . ಪತಿ ಗಣೇಶ್ ಜೊತೆಗೆ ಡ್ಯಾಂ ವೀಕ್ಷಣೆಗೆ ಇವರು ಆಗಮಿಸಿದ್ದರು . ಪತ್ನಿಯನ್ನ ರಕ್ಷಿಸಲು ನದಿಗೆ ಹಾರಿದರು ಪತಿ ಗಣೇಶ್ .

ಆದರೆ ಇಬ್ಬರ ಸಮಯ ಚೆನ್ನಾಗಿತ್ತು . ಇಬ್ಬರೂ ಹಾರಿದ್ದನ್ನು ಅಲ್ಲಿದ್ದ ಸ್ಥಳೀಯ ಮೀನುಗಾರರು ನೋಡಿ ಇಬ್ಬರನ್ನೂ ರಕ್ಷಿಸಿದ್ದಾರೆ . ಸುಮಾರು 50 ಅಡಿ ಆಳಕ್ಕೆ ಬಿದ್ದ ಇಬ್ಬರಿಗೂ ಅಲ್ಪಪ್ರಮಾಣದ ಗಾಯಗಳಾಗಿವೆ . ಮೀನುಗಾರರು ಇಲ್ಲದಿದ್ದರೆ ಸ್ಥಿತಿ ಏನಾಗುತ್ತಿತ್ತೋ ತಿಳಿಯದು .

Leave a Reply

Your email address will not be published. Required fields are marked *

error: Content is protected !!