ಡೀಸೆಲ್ ಗಾಗಿ ಕೆ ಎಸ್ ಆರ್ ಟಿ ಸಿ ಬಸ್ಸನ್ನು ಕದ್ದ ಖದೀಮರು!!

ತುಮಕೂರು : ಇಷ್ಟು ದಿನ ಸಾರ್ವಜನಿಕರು ತಮ್ಮ ಬೈಕು ಕಾರು ವಾಹನ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡುತ್ತಿದ್ದರು . ಆದರೆ ಈಗ ಸಾರ್ವಜನಿಕರ ಆಸ್ತಿ ಕೆಎಸ್‌ಆರ್‌ಟಿಸಿ ಬಸ್ಸನ್ನೇ ಖದೀಮರು ಕದ್ದಿರುವ ಘಟನೆ ಗುಬ್ಬಿ ಬಸ್ ನಿಲ್ದಾಣದಲ್ಲಿ ನಡೆದಿದೆ . ಗುಬ್ಬಿ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅನ್ನು ಕದ್ದ ಕಳ್ಳರು , ಸಿಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜನ್ನೇನಹಳ್ಳಿ ಗ್ರಾಮದ ಬಳಿ ಬಿಟ್ಟು ಹೋಗಿದ್ದಾರೆ . ಈ ವೇಳೆ ಕಳ್ಳರು ಬಸ್ಸಿನಿಂದ ಡೀಸೆಲ್ ಕದ್ದ ಬಳಿಕ ಇಲ್ಲಿ ಬಿಟ್ಟು ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಎಡೆಯೂರು , ಕುಣಿಗಲ್ , ಜನ್ನೆನಹಳ್ಳಿ ಬಳಿ ಬಸ್‌ನ್ನು ಬಿಟ್ಟಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ . ಗುಬ್ಬಿ ಬಸ್ ನಿಲ್ದಾಣದಲ್ಲಿ ಈ ರೀತಿಯ ಘಟನೆ ಪದೇ ಪದೇ ನಡೆಯುತ್ತಿದ್ದು , ಈ ಕುರಿತು ಅಧಿಕಾರಿಗಳು ಯಾವ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ . ಪ್ರಕರಣ ನಡೆಯುತ್ತಿದ್ದರೂ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳು ಸಿಸಿಟಿವಿಯನ್ನು ಸಹ ಅಳವಡಿಸಿಲ್ಲ . ಈ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!