KSRTC ವಿಶಿಷ್ಠ ಪ್ರಯೋಗ.. ಪ್ರಯಾಣಿಕರಿಗಾಗಿ ‘ಅಂಬಾರಿ ಉತ್ಸವ’
ಬೆಂಗಳೂರು: ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಪರಿಪೂರ್ಣತೆಗೆ ಹೆಸರಾಗಿರುವ KSRTC (ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಇದೀಗ ಹೊಸತನಕ್ಕೆ ಮುನ್ನುಡಿ ಬರೆದಿದೆ. ಪ್ರಯಾಣಿಕರಿಗೆ ಇನ್ನು ಮುಂದೆ ನಿತ್ಯವೂ ‘ಅಂಬಾರಿ ಉತ್ಸವ’.
‘ಅಂಬಾರಿ ಉತ್ಸವ – ಸಂಭ್ರಮದ ಪ್ರಯಾಣ’ ಎಂಬ ಘೋಷಣೆಯು ಕೆಎಸ್ಸಾರ್ಟಿಸಿ ಅಂಗಳದಿಂದ ಪ್ರತಿಧ್ವನಿಸಿದೆ. ಮಹತ್ವಾಕಾಂಕ್ಷೆಯ ವೋಲ್ವೋ ಅಂಬಾರಿ ಬಸ್ ಸೇವೆ ಫೆಬ್ರವರಿ 21 ರಿಂದ ಆರಂಭವಾಗಲಿದೆ.
ಸಾರಿಗೆ ವ್ಯವಸ್ಥೆಯಲ್ಲಿ ಕುತೂಹಲದ ಕೇಂದ್ರಬಿಂದುವಾಗಿರುವ ಈ ‘ಅಂಬಾರಿ’ ಬಸ್ ಯಾನಕ್ಕೆ ಆಡಳಿತ ಶಕ್ತಿಸೌಧವಾಗಿರುವ ಬೆಂಗಳೂರಿನ ವಿಧಾನಸೌಧ ಬಳಿ ಇಂದು ಬೆಳಿಗ್ಗೆ ಚಾಲನೆ ಸಿಗಲಿದೆ. ಈ ಸನ್ನಿವೇಶವನ್ನು ‘ಅಂಬಾರಿ ಉತ್ಸವ’ ಎಂದು ಪರಿಗಣಿಸಿರುವ ಸಾರಿಗೆ ಸಂಸ್ಥೆ, ಈ ಬಸ್ ಯಾನ ಮೂಲಕ ಪ್ರಯಾಣಿಕರಿಗೆ ಪ್ರತಿನಿತ್ಯವೂ ‘ಅಂಬಾರಿ ಉತ್ಸವ’ ಗೌರವ ಯಾನ ಸೌಲಬ್ಯ ಕಲ್ಪಿಸಲಿದೆಯಂತೆ.
https://twitter.com/unsocial2023/status/1627329368975609861?t=HKLlejoGACPmuz__S2YBQQ&s=19
‘ಅಂಬಾರಿ ಉತ್ವವ’ ವೈಶಿಷ್ಟ್ಯಪೂರ್ಣ..!
‘ಅಂಬಾರಿ ಉತ್ಸವ’ ನಿಜಕ್ಕೂ ವೈಶಿಷ್ಟ್ಯ ಪೂರ್ಣ. ಈಗಾಗಲೇ ರಾಜಹಂಸ, ಐರಾವತ, ಮಲ್ಟಿ ಆಕ್ಸಲ್.. ಹೀಗೆ ಹೊಸ ಸೌಲಭ್ಯದ ಬಸ್ಸುಗಳನ್ನು ಸಾರಿಗೆ ಕ್ಷೇತ್ರಕ್ಕೆ ಎಲ್ಲರಿಗಿಂತ ಮೊದಲು ಪರಿಚಯಿಸಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ‘ಅಂಬಾರಿ ಉತ್ಸವ’ ಮೂಲಕ ಮತ್ತಷ್ಟು ಸುಖಯಾನದ ರಥವನ್ನು ಪರಿಚಯಿಸುತ್ತಿದೆ. ಇದೀಗ ರಸ್ತೆಗಿಳಿಯಲಿರುವ ‘ಅಂಬಾರಿ…’ ಪರಿಪೂರ್ಣ ಯೂರೋಪಿಯನ್ ತಂತ್ರಜ್ಞಾನದ ಸ್ಪರ್ಶವಿರುವ ವಿಶಿಷ್ಟ ಸೌಲಭ್ಯವುಳ್ಳ ಆಧುನಿಕ ಬಸ್. ‘ವೋಲ್ವೋ 9600s ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ಸು’ಗಳಾದ ‘ಅಂಬಾರಿ ಉತ್ಸವ’ ಇಡೀ ಸಾರಿಗೆ ಕ್ಷೇತ್ರದ ಗಮನಸೆಳೆದಿದೆ.
ಈ ಬಸ್‌ಗಳ ಉದ್ಘಾಟನೆಯು ಮುಖ್ಯಮಂತ್ರಿಯಿಂದಲೇ ನೆರವೇರುತ್ತಿರುವುದು ವಿಶೇಷ. ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಹೊಳಲ್ಕೆರೆ ಶಾಸಕರೂ ಅಗಿರುವ ಕೆಎಸ್ಸಾರ್ಟಿಸಿ ಅಧ್ಯಕ್ಷ ಚಂದ್ರಪ್ಪ ಸಹಿತ ಗಣ್ರನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.