ಕುಂದವಾಡ ಕೆರೆ ಕಾಮಗಾರಿ: ಸ್ಮಾರ್ಟ್ ಸಿಟಿ ಕಾಮಗಾರಿಗಳ ರೀತಿಯ ದಾರಿ ಹಿಡಿಯದಿರಲಿ – ಹರೀಶ್ ಬಸಾಪುರ
ದಾವಣಗೆರೆ: ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ರವರ ದೂರದೃಷ್ಟಿಯ ಚಿಂತನೆಯಿಂದ ನಿರ್ಮಾಣಗೊಂಡ ಕೆರೆಯೇ ಕುಂದವಾಡ ಕೆರೆ.
ಸುಮಾರು 265 ಎಕ್ಕರೆ ವಿಸ್ತೀರ್ಣದ ವಿಶಾಲವಾದ ಹಾಗೂ ವ್ಯವಸ್ಥಿತವಾಗಿ ಕಡಿಮೆ ವೆಚ್ಚದಲ್ಲಿ ದಾವಣಗೆರೆ ನಗರದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡಲೆಂದು ನಿರ್ಮಾಣಗೊಂಡಿದ್ದ ಅಂತಹ ಈ ಕೆರೆ ಇಂದು ಅಭಿವೃದ್ಧಿಪಡಿಸುವ ಅಥವಾ ಮೇಲ್ದರ್ಜೆಗೇರಿಸುವ ಎಂಬ ಕಾರಣ ನೀಡಿ ನಡೆಸುತ್ತಿರುವ ಕಾಮಗಾರಿ ನೋಡಿದರೆ ಈ ಕಾಮಗಾರಿ ಮುಗಿದು ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ದಶಕಗಳೇ ಬೇಕಾಗಬಹುದು ಎಂಬ ಅನುಮಾನ ಬಾರದೇ ಇರದು.
ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಯಾವ ಮಟ್ಟಿಗೆ ಕಳಪೆಯಾಗಿದೆ ಎಂದರೆ ಸುಮಾರು ವರ್ಷಗಳ ಹಿಂದೆ ಕೆಲಸ ಮಾಡದೆ ಬಿಲ್ ಬರೆಸಿಕೊಳ್ಳುವ ಅಥವಾ ನಾಮಕವಸ್ತೆ ಕೆಲಸಮಾಡಿ ಅಧಿಕಾರಿಗಳಿಂದ ದರ್ಪದಿಂದ ಬಿಲ್ ಬರೆಸಿ ಕೊಳ್ಳುತಿದ್ದ ಕಾಮಗಾರಿ ಗಳಿಗಿಂತ ಕಳಪೆಯಾಗಿದೆ.
ಸ್ಮಾರ್ಟ್ ಸಿಟಿ ಯೋಜನೆ ಅಡಿ ಕಾಮಗಾರಿಗಳು ಪ್ರಾರಂಭ ವಾಗುವುದು ಮಾತ್ರ ಸತ್ಯ, ಮುಕ್ತಾಯವಾಗುವುದು ಮಾತ್ರ ಕಾಲಮಿತಿ ಇಲ್ಲದೆ ಜನರ ವಿರೋಧದ ಆಕ್ರೋಶದ ನಂತರವೇ.
ಈಗ ನಡೆಯುತ್ತಿರುವ ಕುಂದುವಾಡ ಕೆರೆ ಯ ಕಾಮಗಾರಿಯು ಸಹ ಇದೇ ದಾರಿಯಲ್ಲಿ ಇದೆಯೇ ಎಂದು ಅನುಮಾನ ಬಾರದೇ ಇರದು ಏಕೆಂದರೆ ಈಗ ನಡೆಯುತ್ತಿರುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ಇದೆ ರೀತಿ ನಡದರೆ, ಈ ಕಾಮಗಾರಿ ಮುಗಿಯಲು ದಶಕಗಳೇ ಆದರೂ ಆಶ್ಚರ್ಯವಿಲ್ಲ…..
ಒಬ್ಬ ರಾಜಕಾರಣಿಗೆ ಜನರ ಬಗ್ಗೆ ಇರುವ ಕಾಳಜಿಯಿಂದ ಒಂದು ಯೋಚನೆಯನ್ನು ಕಡಿಮೆ ವೆಚ್ಚದಲ್ಲಿ, ಸೀಮಿತ ಅವಧಿಯಲ್ಲಿ ಹಾಗೂ ಉತ್ತಮ ದರ್ಜೆಯಲ್ಲಿ ಹೇಗೆ ಮಾಡಬಹುದು ಎಂಬುದಕ್ಕೆ ಮತ್ತು ಇನ್ನೊಬ್ಬ ರಾಜಕಾರಣಿ ಅಭಿವೃದ್ಧಿಪಡಿಸುವ ನೆಪದಲ್ಲಿ ಸಾರ್ವಜನಿಕರ ಹಣವನ್ನು ಪೋಲು ಮಾಡಿ, ಸಾರ್ವಜನಿಕರಿಗೆ ಹೇಗೆ ತೊಂದರೆ ನೀಡಬಹುದು ಎಂಬು ಎರಡು ಕಾರಣಗಳಿಗೂ ಒಂದೇ ಸಾಕ್ಷಿ ಅದೇ “ಕುಂದವಾಡ ಕೆರೆ”
ಕೆ.ಎಲ್.ಹರೀಶ್ ಬಸಾಪುರ