ಮೈಸೂರು ಕನ್ನಡ ಪಂಡಿತ ಪರಂಪರೆಯ ಕೊನೆಯ ಕೊಂಡಿ, 95ರ ಹರೆಯದ ಶ್ರೀ ರುದ್ರಮುನಿ ಅಯ್ಯ ಅವರಿಗೆ ಸನ್ಮಾನ ಸಮಾರಂಭ
ದಾವಣಗೆರೆ: 95ರ ಹರೆಯದ ಶ್ರೀ ರುದ್ರಮುನಿ ಅಯ್ಯ ಇವರು ಮೈಸೂರು ಕನ್ನಡ ಪಂಡಿತ ಪರಂಪರೆಯ ಕೊನೆಯ ಕೊಂಡಿ. ವಿಜಯನಗರ ಜಿಲ್ಲೆಯನ್ನು ತಮ್ಮ ಸೇವಾ ಕ್ಷೇತ್ರ ಮಾಡಿಕೊಂಡು ಶ್ರೀಯುತರು ಶಿಕ್ಷಕ ವೃತ್ತಿಯನ್ನು ಆರಾಧಿಸಿದವರು. ಕನ್ನಡದ ಎಲ್ಲ ಪ್ರಕಾರಳಲ್ಲಿ ಸಾಹಿತ್ಯ ರಚನೆ ಮಾಡಿದ್ದು, ಚಂಪು, ಷಟ್ಪದಿ ,ಕಾದಂಬರಿ, ಶಿಶು ಗೀತೆ, ನಾಟಕ, ಕಿರು ಕಥೆಗಳು, ಕಥಾಂದರಗಳು ,ರಚನೆಯಲ್ಲಿ ಶ್ರೀಯುತರು ಶ್ರೇಷ್ಠರು. ಸಂಸ್ಕೃತ ಮತ್ತು ಕನ್ನಡವನ್ನು ಸಮಪಾತಳಿಯಲ್ಲಿ ಅಧ್ಯಯನ ಮಾಡಿದವರು.
ಕೊಟ್ಟೂರಿನ ಪಂಡಿತರೆಂದರೆ ಕೊಟ್ಟೂರಲ್ಲಿ ಬಳ್ಳಾರಿ ವಿಜಯನಗರ ಜಿಲ್ಲೆಯಲ್ಲಿ ಗೌರವ ಪಡೆಯುವ ವ್ಯಕ್ತಿತ್ವವುಳ್ಳವರು. ಇವರ ಶಿಷ್ಯ ವರ್ಗವು ತಾವು ಇವರು ಶಿಷ್ಯರಾಗಿದ್ದೆ ಭಾಗ್ಯಶಾಲಿಗಳೆಂದು ಆನಂದ ಪಡುತ್ತಾರೆ. ಇವರು ಮಾಡಿದ ಪಾಠಗಳನ್ನು ಇಂದಿಗೂ ಇವರ ಶಿಷ್ಯವರ್ಗ ಇವರಿಗೆ ಒಪ್ಪಿಸುತ್ತಿರುವುದು ಸೋಜಿಗ ಮತ್ತು ಸಂತೋಷದಾಯಕ. 95ರ ಹರೆಯದರಲ್ಲಿ ತಮ್ಮ ಹಳೆ ಶಿಷ್ಯರನ್ನು ಹೆಸರಿಡಿದು ಕರೆಯುತ್ತಿರುವ ಇವರ ನೆನಪಿನ ಶಕ್ತಿ ಅಗಾಧವಾದದ್ದು. ಇವರು ಒಟ್ಟಾರೆಯಾಗಿ 32 ಕೃತಿ ರಚಿಸಿದ್ದಾರೆ .ಭಕ್ತಿ ಇವರ ಸಾಹಿತ್ಯದ ಸಾರ. ಸಾಮಾಜಿಕ ತಿಳುವಳಿಕೆ, ನೈತಿಕತೆ, ಸಾಮಾಜಿಕ ಸಮಾನತೆ, ಕರ್ತವ್ಯ ಪ್ರಜ್ಞೆ ಇವರ ಸಾಹಿತ್ಯದ ಧ್ಯೇಯ ವಾಕ್ಯಗಳು. ಕೊಟ್ಟೂರು ಶ್ರೀ ಗುರುಬಸವ ರಾಜೀಯಂ , ಕೊಡದ ಗುಡ್ಡದ ಶ್ರೀ ವೀರಭದ್ರೇಶ್ವರ ಪುರಾಣ, ಶ್ರೀ ಗೋಣಿಬಸವೇಶ್ವರ ಪುರಾಣ, ಶ್ರೀ ಉಜ್ಜಯಿನಿ ಜಗದ್ಗುರು ಸಿದ್ದಲಿಂಗೇಶ್ವರ ಶತಕ, ಶ್ರೀ ಮೂಗಬಸವೇಶ್ವರ ಲೀಲಾವಳಿ, ದಂಡಿನ ಭೀಮವ್ವ, ಭಾವದ ಮರೆಯ ಬ್ರಹ್ಮ, ಶ್ರೀ ಚಿಕ್ಕೇನು ಕೊಪ್ಪದ ಚನ್ನವೀರ ಶರಣರ ಚಂಪು, ಕಥಾ ಶೋಡಸಿ ,ಗಿರಿಜಾ ಕಲ್ಯಾಣ, ಕೊಡದ ಗುಡ್ಡದ ಶ್ರೀ ವೀರಭದ್ರೇಶ್ವರ ಲೀಲಾ ತರಂಗಿಣಿ, ಅನಿರೀಕ್ಷಿತ, ಕೊಟ್ಟೂರು ಗುರುಬಸವರಾಜ ಕಥಾ ತರಂಗಿಣಿ , ಬಾನಿನ್ನ ಸ್ಕೂಲು . ಬಿಲ್ವವನದಲ್ಲಿ ,ಸದ್ಧರ್ಮ, ಕೊಟ್ಟೂರು ಬಸವರಾಜ ಚಾರಿತ್ರ , ಕೊಟ್ಟೂರು ಶ್ರೀ ಗುರುಬಸವರಾಜ ನಾಮಾವಳಿ, ಯೋಗಿ ಯೊ ಬ್ಬನ ಭವಾಯಾನ , ಹಗಲು ಕಂಡ ಸಂಜೆ ಕನಸುಗಳು, ಶ್ರೀ ನಗರಗಡ್ಡಿ ಶಾತಲಿಂಗೇಶ್ವರ ಸುಪ್ರಭಾತ, ಶ್ರೀ ಕೊಟ್ಟುರೇಶ್ವರ ಸುಪ್ರಭಾತ, ಶ್ರೀ ಕೊಡದಗುಡ್ಡದ ವೀರಭದ್ರೇಶ್ವರ ಸುಪ್ರಭಾತ, ಮಿಂಚಿದ ಮೋಡ, ಇವರ ಕೃತಿಗಳು. ಪ್ರಖ್ಯಾತ ಜ್ಯೋತಿಷಿಗಳು, ಉತ್ತಮ ವಾಗ್ಮಿಗಳು, ಬಸವ ತತ್ವಾಚರಣೆ ಮತ್ತು ಗಾಂಧಿ ತತ್ವ ಆಚರಣೆ ಮೈಗೂಡಿಸಿಕೊಂಡು ತಮ್ಮ ಕೆಲಸಗಳನ್ನೆಲ್ಲ ತಾವೇ ಮಾಡಿಕೊಳ್ಳುವರು, ತ್ರಿಕಾಲ ಪೂಜಾ ನಿಷ್ಠರು .ಇಷ್ಟ ಲಿಂಗವೇ ಪರಮ ದೇವರೆಂದು ನಂಬಿದವರು. ಶ್ರೀಯುತರು 2013 ರಿಂದ ದಾವಣಗೆರೆ ವಾಸಿಗಳಾಗಿದ್ದು ಈಗಲೂ ಸಾಹಿತ್ಯದ ಕೃಷಿಯನ್ನು ಮಾಡುತ್ತಿರುವುದು ಸಂತೋಷ .ಪ್ರಚಾರ ಪ್ರಶಸ್ತಿಗಳಿಂದ ದೂರವಿದ್ದು ಆತ್ಮ ಸಂತೋಷವೇ ಜೀವನದ ಪರಮ ಗುರಿ ಎಂದು ನಂಬಿದವರು.
ಆತ್ಮೀಯ ಸ್ನೇಹಿತರೆ , ಇದೇ ಭಾನುವಾರ ದಾವಣಗೆರೆಯ ರೋಟರಿ ಭಾಲಭವನದಲ್ಲಿ 95ವರ್ಷದ ನಮ್ಮ ತಂದೆಯವರಿಗೆ ಸನ್ಮಾನ ಸಮಾರಂಭ ಇರುತ್ತದೆ. ದಯವಿಟ್ಟು ಆಗಮಿಸಲು ಕೋರಿದ್ದೇನೆ ಇಂತಿ ತಮ್ಮಗಳ ವೀರಭದ್ರಯ್ಯ. ದಾವಣಗೆರೆ.