ಅಬಕಾರಿ ಇಲಾಖೆಯಿಂದ ಅವದಿ ಮೀರಿದ ರೂ.10 ಲಕ್ಷ ಮೌಲ್ಯದ ಮದ್ಯ ನಾಶ

Liquor worth Rs.10 lakh overdue was destroyed by Excise Department

ದಾವಣಗೆರೆ :ದಾವಣಗೆರೆ ಮತ್ತು ಹರಿಹರ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಲ್ಲಿ ಮಾರಾಟವಾಗದೇ ಬಾಕಿ ಉಳಿದಿದ್ದ ಅವದಿ ಮೀರಿದ ಮಾನವನ ಸೇವೆಗೆ ಯೋಗ್ಯವಲ್ಲದ  ರೂ.10.89 ಲಕ್ಷ ಮೊತ್ತದ ಮದ್ಯ ಮತ್ತು ಬಿಯರ್‍ಯನ್ನು ನಾಶಪಡಿಸಲಾಗಿದ ಎಂದು ದಾವಣಗೆರೆ ಜಿಲ್ಲಾ ಅಬಕಾರಿ ಇಲಾಖಾ ಅಧೀಕ್ಷಕರಾದ ಬಿ.ಶಿವಪ್ರಸಾದ ಅವರು ತಿಳಿಸಿದ್ದಾರೆ.
ದಾವಣಗೆರೆ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಲ್ಲಿದ್ದ  ರೂ.1,62,113 ಮೊತ್ತದ 38.288 ಲೀಟರ್ ಮದ್ಯ ಮತ್ತು 479.160 ಲೀಟರ್ ಬಿಯರ್  ಹಾಗೂ ಹರಿಹರ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಲ್ಲಿದ್ದ ರೂ.9,26,912 ಮೊತ್ತದ 86.400 ಲೀಟರ್ ಮದ್ಯ ಮತ್ತು 3615 ಲೀಟರ್ ಬಿಯರ್ ನಾಶ ಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಬಕಾರಿ ಉಪ ಆಯುಕ್ತರಾದ ರವಿ ಎಂ.ಮರಿಗೌಡ್ರ ಒಳಗೊಂಡಂತೆ ಇಲಾಖೆಯ ವಿವಿಧ ಅಧಿಕಾರಿಗಳು  ಉಪಸ್ಥಿಯಲ್ಲಿ ಜನವರಿ 18 ರಂದು  ದಾವಣಗೆರೆ ಮತ್ತು ಹರಿಹರ ಡಿಪೋದಲ್ಲಿ ದಾಸ್ತಾನು ಮಾಡಲಾಗಿದ್ದ ನಿರುಪಯುಕ್ತ 124.680 ಲೀಟರ್ ಮದ್ಯ ಹಾಗೂ 4094.160 ಬಿಯರ್ ಒಳಗೊಂಡಂತೆ ರೂ.10,89,025 ಮೊತ್ತದ ಮದ್ಯವನ್ನು ನಾಶಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!