ಸ್ಯಾಂಟ್ರೋ ರವಿ ಪ್ರಕರಣ ಮುಚ್ಚಿಹಾಕಲು ಯತ್ನ: ಸಿದ್ದರಾಮಯ್ಯ ಆರೋಪ
ಬಾಗಲಕೋಟೆ: ಪೊಲೀಸರು ಸ್ಯಾಂಟ್ರೊ ರವಿಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಬೇಕಿತ್ತು. ಕಸ್ಟಡಿಗೆ ಕೇಳದಿರುವುದನ್ನು ನೋಡಿದರೆ ಪ್ರಕರಣ ಮುಚ್ಚಿ ಹಾಕಲು ಮುಂದಾಗಿರುವುದು ಗೊತ್ತಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೊ ರವಿ ನಟೋರಿಯಸ್ ಕ್ರಿಮಿನಲ್ ಆಗಿದ್ದು, ಬಿಜೆಪಿ ಸಚಿವರ ಹುಳುಕು ಬಯಲಾಗಬಾರದು ಎಂದು ಪ್ರಕರಣ ಮುಚ್ಚಿ ಹಾಕಲಾಗುತ್ತಿದೆ ಹೇಳಿದ್ದಾರೆ. ಪೊಲೀಸ್ ವರ್ಗಾವಣೆ ಮಾಡಿಸಿದ್ದೇನೆ ಎಂದು ರವಿ ಹೇಳಿದ್ದಾನೆ. ಸಚಿವರು, ಮುಖಂಡರ ಜತೆಗೆ ಉತ್ತಮ ಸಂಬಂಧವಿದ್ದಾಗಲೇ ವರ್ಗಾವಣೆ ಸಾಧ್ಯ ಎಂದರು.