ಲೋಕಸಭಾ ಚುನಾವಣೆ-2024 ಜಿಲ್ಲೆಯಲ್ಲಿ 32 ಚೆಕ್ ಪೋಸ್ಟ್ ಸ್ಥಾಪನೆ; ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ
ದಾವಣಗೆರೆ: ಸಾರ್ವತ್ರಿಕ ಚುನಾವಣೆಯನ್ನು ಪಾರದರ್ಶಕವಾಗಿ ಹಾಗೂ ಮುಕ್ತ, ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲೆಯ ಗಡಿಭಾಗ ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲಿ 32 ಕಡೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಪ್ರತಿ ಚೆಕ್ಪೋಸ್ಟ್ಗಳಲ್ಲಿ ಮೂರು ಜನ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ದಿನದ 24 ಗಂಟೆಯು ಕಾವಲು ನಡೆಸುವ ಮೂಲಕ ಅಕ್ರಮವಾಗಿ ಸಾಗಣೆ ಮಾಡುವ ವಸ್ತುಗಳು, ಮದ್ಯ, ನಗದು ಮತ್ತು ಇನ್ನಿತರೆ ಬಂಗಾರದ ವಸ್ತುಗಳ ಮೇಲೆ ನಿಗಾ ಇಡುವರು. ಆ ಮಾರ್ಗದಲ್ಲಿ ಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡುವ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ಯಾವುದೇ ವಸ್ತುಗಳನ್ನು ಸಾಗಣೆ ಮಾಡಲು ಅಭ್ಯಂತರ ಇರುವುದಿಲ್ಲ, ಆದರೆ ಸಂಬಂಧಿಸಿದ ವಸ್ತುಗಳು, ಹಣ, ಯಾವುದೇ ಇದ್ದಲ್ಲಿ ದಾಖಲೆಗಳು ಅತ್ಯವಶ್ಯಕವಾಗಿದ್ದು ವಾಹನ ಸವಾರರು, ಸಾರ್ವಜನಿಕರು ಚೆಕ್ಪೋಸ್ಟ್ಗಳಲ್ಲಿ ಹಾಜರುಪಡಿಸುವ ಮೂಲಕ ಸಿಬ್ಬಂದಿಗಳಿಗೆ ಸಹಕರಿಸಬೇಕು.
ಚೆಕ್ಪೋಸ್ಟ್ಗಳ ವಿವರ; 103-ಜಗಳೂರು ವಿಧಾನಸಭಾ ಕ್ಷೇತ್ರ: ಬಿದರಕೆರೆ ಹತ್ತಿರ, ಗಡಿಮಾಕುಂಟೆ, ಅರಸೀಕೆರೆ ಠಾಣೆ ವ್ಯಾಪ್ತಿಯ ಕುರೆಮಾಗನಹಳ್ಳಿ ಹತ್ತಿರ, ಚಳ್ಳಕೆರೆ ರಸ್ತೆ ಮುಸ್ಟೂರು ಹತ್ತಿರ, ಬಿಳಿಚೋಡು ವ್ಯಾಪ್ತಿಯ ಕನಾನಕಟ್ಟೆ ಎನ್.ಹೆಚ್.13 ಹತ್ತಿರ. 105-ಹರಿಹರ ವಿಧಾನಸಭಾ ಕ್ಷೇತ್ರ: ಹರಿಹರ ರಾಘವೇಂದ್ರ ಮಠದ ಹತ್ತಿರ, ಹಲಸಬಾಳು ಕ್ರಾಸ್, ಕುರುಬರಹಳ್ಳಿ ಹತ್ತಿರ, ನಂದಿಗುಡಿಯಲ್ಲಿ ಚೆಕ್ ಪೆÇೀಸ್ಟ್ ನಿರ್ಮಾಣ ಮಾಡಲಾಗಿದೆ.
106-ದಾವಣಗೆರೆ ಉತ್ತರ ವಿಧಾನಸÀಭಾ ಕ್ಷೇತ್ರ: ಭೂಮಿಕ ನಗರ, ಲೋಕಿಕೆರೆ ಕ್ರಾಸ್, ಕಲ್ಪನಹಳ್ಳಿ ಸರ್ಕಲ್(ಮಾಗಾನಹಳ್ಳಿ), ಎನ್.ಹೆಚ್-4 ಶಾಮನೂರು ಕ್ರಾಸ್, ವಿದ್ಯಾನಗರ ಲಾಸ್ಟ್ ಬಸ್ ಸ್ಟಾಪ್ ಹತ್ತಿರ. 107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಬಾಡ ಕ್ರಾಸ್, ಬೇತೂರು ರೋಡ್, ಕೊಂಡಜ್ಜಿ ರಸ್ತೆ, ಸಾಯಿ ಇಂಟರ್ ನ್ಯಾಷನಲ್ ಹೊಟೇಲ್ ಬಳಿ. 108-ಮಾಯಕೊಂಡ ವಿಧಾನಸಭಾ ಕ್ಷೇತ್ರ: ಹೆಬ್ಬಾಳ್ ಟೋಲ್ ಗೇಟ್, ಕಾರಿಗನೂರು ಕ್ರಾಸ್, ಹೆಚ್.ಬಸಾಪುರ.
109-ಚನ್ನಗಿರಿ ವಿಧಾನಸಭಾ ಕ್ಷೇತ್ರ: ಜೋಳದಾಳ್, ಮಾವಿನಕಟ್ಟೆ, ತಾವರೆಕೆರೆ, ಮಾದಾಪುರ, ಸಂತೇಬೆನ್ನೂರು. 110-ಹೊನ್ನಾಳಿ ವಿಧಾನಸಭಾ ಕ್ಷೇತ್ರ: ನ್ಯಾಮತಿ ಪೆÇಲೀಸ್ ಠಾಣೆಯ ಟಿ.ಜಿ.ಹಳ್ಳಿ ಕ್ರಾಸ್, ಸವಳಂಗ, ಹೊಳೆಹರಳಹಳ್ಳಿ ಕ್ರಾಸ್, ಹೊನ್ನಾಳಿ ಪೆÇಲೀಸ್ ಠಾಣೆಯ ಗೊಲ್ಲರಹಳ್ಳಿ ಕ್ರಾಸ್, ಕುಳಗಟ್ಟೆ ಕ್ರಾಸ್, ಜೀನಹಳ್ಳಿ ಕ್ರಾಸ್ ಬಳಿ ಚೆಕ್ ಪೆÇೀಸ್ಟ್ ನಿರ್ಮಾಣ ಮಾಡಲಾಗಿದೆ.
ಚೆಕ್ಪೋಸ್ಟ್ಗಳಿಗೆ ಭೇಟಿ ಪರಿಶೀಲನೆ; ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಅವರು ಭಾನುವಾರ ಹೆಬ್ಬಾಳ್, ಶಾಮನೂರು ಕ್ರಾಸ್ ಚೆಕ್ಪೋಸ್ಟ್, ಹರಿಹರ ಸೇರಿದಂತೆ ವಿವಿಧ ಚೆಕ್ಪೋಸ್ಟ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಪ್ರಯುಕ್ತ ಕಣ್ಗಾವಲಿಗಾಗಿ ಸ್ಥಾಪಿಸಿರುವ ಚೆಕ್ಪೋಸ್ಟ್ಗಳಲ್ಲಿ ಸಿಬ್ಬಂದಿಗಳು ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯವನ್ನು ನಿರ್ವಹಿಸುವುದರೊಂದಿಗೆ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಂಡು ಎಲ್ಲಾ ವಾಹನಗಳ ತಪಾಸಣೆ ಮಾಡುವ ಮೂಲಕ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಸೂಚನೆ ನೀಡಿದರು.