ಹರಿಹರ ಇಓ ರವಿ, ಸಾರಥಿ ಪಿಡಿಓ ಲೋಕಾಯುಕ್ತ ವಶಕ್ಕೆ; ದಾವಣಗೆರೆ ಪಾಲಿಕೆ ಸದಸ್ಯೆ ಮನೆಯಲ್ಲಿ ಲೋಕಾಯುಕ್ತ.!
ದಾವಣಗೆರೆ : ಹರಿಹರದಲ್ಲಿ ನಿವೇಶನ ನಿರ್ಮಾಣ ಸಂಬಂಧಿಸಿದಂತೆ ಪ್ಲಾನ್ ಅಪ್ರೂವಲ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹರಿಹರ ಇಓ ಎನ್ ರವಿ ಹಾಗೂ ಸಾರಥಿ ಗ್ರಾಮ ಪಂಚಾಯತಿ ಪಿಡಿಒ ರಾಘವೇಂದ್ರ ಇಬ್ಬರನ್ನು ದಾವಣಗೆರೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆಯ 42 ನೇ ವಾರ್ಡ್ ಬಿಜೆಪಿ ಸದಸ್ಯೆ ಗೌರಮ್ಮ ಗಿರೀಶ್ ಮನೆಯಲ್ಲಿ ಹರಿಹರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್ ರವಿ ಇದ್ದ ಹಿನ್ನೆಲೆಯಲ್ಲಿ ದಾಳಿ ನಡೆದಿದ್ದು. ಶ್ರೀರಾಮ ಸೇನೆಯ ಕಾರ್ಯಕರ್ತ ಶ್ರೀನಿವಾಸ ರಿಂದ 1.60 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಇಂದು 1.50 ಲಕ್ಷ ಹಣವನ್ನ ಹರಿಹರದಲ್ಲಿ ಪಿಡಿಓ ರಾಘವೇಂದ್ರ ಮನೆಯಲ್ಲಿ ಹಣ ಸ್ವೀಕಾರ ಮಾಡಿದ ನಂತರ ಎ2 ಆದ ಇಓ ಎನ್ ರವಿ ಅವರಿದ್ದ ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯೆ ಗೌರಮ್ಮ ಗಿರೀಶ್ ಮನೆಗೆ ಬರುವಂತೆ ಹೇಳಿದ್ದಾರೆ. ಅಂತೆಯೇ ಶ್ರೀ ರಾಮ ಸೇನೆ ಕಾರ್ಯಕರ್ತ ಶ್ರೀನಿವಾಸ ಇವರು ಮನೆಗೆ ಬಂದು ಹಣ ಕೊಡುವ ವೇಳೆ ಸಿಕ್ಕಿ ಬಿದ್ದಿದ್ದಾರೆ.
ಇಓ ಎನ್ ರವಿ ಪಾಲಿಕೆ ಸದಸ್ಯೆ ಗೌರಮ್ಮ ಗಿರೀಶ್ ಪುತ್ರಿಯ ಪತಿಯಾಗಿದ್ದಾರೆ. ಇನ್ನು ಸಾರಥಿ ಗ್ರಾಮ ಪಂಚಾಯತಿ ಪಿಡಿಒ ರಾಘವೇಂದ್ರ ಕೂಡ ಬಲೆಗೆ ಬಿದ್ದಿದ್ದಾರೆ ಶ್ರೀರಾಮ ಸೇನೆಯ ಜಿಲ್ಲಾದ್ಯಕ್ಷ ಮಣಿ ಸರ್ಕಾರ ನೇತೃತ್ವದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಶೀಘ್ರವೇ ದೂರು ದಾಖಲಿಸಿಕೊಂಡ ಎಸ್ಪಿ ಕೌಲಾಪುರೆ ಅಲರ್ಟ್ ಆಗಿದ್ದು, ಲಂಚ ಸ್ವೀಕಾರದ ವೇಳೆ ದಾಳಿ ನಡೆದಿದೆ. ಹರಿಹರದಲ್ಲಿನ ತಾಲ್ಲೂಕು ಪಂಚಾಯತಿ ಕಛೇರಿಯಲ್ಲಿ ಲೋಕಾಯುಕ್ತರಿಂದ ಪರಿಶೀಲನೆ ನಡೆಯುತ್ತಿದೆ.