ಲಿಂಗಾಯಿತ ಅಧಿಕಾರಿಗಳನ್ನು ಕಾಂಗ್ರೆಸ್ ಕಡೆಗಣಿಸಿದೆ : ದಾವಣಗೆರೆಯಲ್ಲಿ ಅಸಮಾಧಾನ‌ವ್ಯಕ್ತಪಡಿಸಿದ ಶಾಮನೂರು ಶಿವಶಂಕರಪ್ಪ

ದಾವಣಗೆರೆ ; ಕಾಂಗ್ರೆಸ್ ಸರಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗುತ್ತಿದೆ ಎಂದು ಶಾಸಕ, ಅಖಿಲ ಭಾರತ ವೀರಶೈವ ಮಹಾ ಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಕೊಡುವ ಕೆಲಸದಲ್ಲಿ ಕಾಂಗ್ರೆಸ್ ಸರಕಾರ ವಿಪಲಗೊಂಡಿದೆ ಎಂದು ಬೆಂಗಳೂರಿನಲ್ಲಿ ಹೇಳಿದ್ದೇನೆ. ಆ ಮಾತಿಗೆ ನಾನು ಈಗಲೂ ಬದ್ಧನಿದ್ದೇನೆ. ಅಧಿಕಾರಿಗಳ ಕಡೆಗಣನೆ ಬಗ್ಗೆ ಸಿಎಂ ಹತ್ತಿರ ಮಾತನಾಡುತ್ತೆನೆ ನನಗೆ ಯಾರ ಭಯವಿಲ್ಲ ನಾನು ಯಾರಿಗೂ ಹೆದರುವುದಿಲ್ಲ. ಗೃಹ ಸಚಿವ ಪರಮೇಶ್ವರ್ ಲಿಂಗಾಯಿತರನ್ನು ಕಡೆಗಣಿಸಿಲ್ಲ ಎಂದು ಹೇಳಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಶಾಸಕ ಶಾಮನೂರು, ಸರಕಾರದಲ್ಲಿ ಇದ್ದಾರೆ ಅದಕ್ಕೆ ಆ ರೀತಿ ಹೇಳ್ತಾರೆ, ಹೋರಗೆ ಬರಲಿ ಆಗ ಏನು ಹೇಳ್ತಾರೆ.

ಸರಕಾರದಲ್ಲಿ ಸರಿಯಿಲ್ಲ ಅಂತಾ ನಾನು ಹೇಳ್ತಾ ಇಲ್ಲ. ಸರಕಾರದ ವಿರುದ್ದದಲ್ಲಿ ಇರುವವರು ಸತ್ಯ ಹೇಳ್ತಾ ಇದ್ದಾರೆ. ನಮ್ಮ ಸಮುದಾಯದವರನ್ನು ಕಡೆಗಣಿಸಿದ್ದಾರೆ, ಅನ್ಯಾಯವಾಗಿದೆ, ಅದಕ್ಕೆ ಸರ್ಕಾರದ ವಿರುದ್ದ ಅಸಮಾಧಾನವಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರೋದು ವೀರಶೈವ ಲಿಂಗಾಯತರು, ನಮ್ಮ ಅಧಿಕಾರಿಗಳಿಗೆ ತೊಂದರೆ ಮಾಡುತ್ತಿದ್ದಾರೆ, ನಮಗೇನೂ ಮಾಡ್ತಾರೆ ಆವರು,ನಮ್ಮ ಆದಿಕಾರಿಗಳಿಗೆ ಸರಿಯಾದ ಸ್ಥಾನ ನೀಡಿಲ್ಲ ಅದಕ್ಕೆ ನಮಗೆ ಅಸಮಾಧಾನವಿದೆ ಎಂದು ಶಾಸಕ ಶಾಮನೂರು ಹೇಳಿದರು.

ಒಂದೊಂದು ಸರ್ಕಾರ ಬಂದಾಗ ಒಂದೊಂದು ರೀತಿ ಇರುತ್ತದೆ. ಈ ಸರಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗುತ್ತಿರುವುದು ನಿಜ. ಅದೇ ಕಾರಣಕ್ಕೆ ಈ ವಿಚಾರ ಹೊರಗೆ ಬಂದಿದೆ ಎಂದಿದ್ದಾರೆ.

7 ಜನ ಲಿಂಗಾಯತ ಸಮುದಾಯದವರನ್ನ ಸಚಿವರನ್ನಾಗಿ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಶಾಮನೂರು ಟಾಂಗ್ ನೀಡಿ, ನಾವು ಎರಡೂ ಪಕ್ಷಗಳಿಂದ 74 ಜನ ಇದ್ದೇವೆ ಶೇಕಡವಾರು ಲೆಕ್ಕಹಾಕಿದ್ರೆ ಇನ್ನೂ ಜಾಸ್ತಿ ಬರುತ್ತೆ, ಬೇರೆ ಇನ್ನೊಬ್ಬರನ್ನ ಯಾರದ್ರೂ ಹಿಡಿದುಕೊಂಡ್ರೆ ಹೊಸ ಸರಕಾರ ಮಾಡಬಹುದು.

ಸಚಿವರನ್ನು ಕಡೆಗಣಿಸಲಾಗಿದೆ ಎಂದು ನಾನು ಹೇಳಿಲ್ಲ, ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಕೊಡುವ ಕೆಲಸದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಕಡೆಗಣಿಸಲಾಗಿದೆ ಎಂದು ಹೇಳಿದ್ದೇನೆ. ಒಟ್ಟಾರೆ ಶಾಸಕ ಶಾಮನೂರು ಆಡಿದ ಮಾತಿನಿಂದ ಕಾಂಗ್ರೆಸ್ ಸರಕಾರದಲ್ಲಿ ಒಂದಿಷ್ಟು ನಡುಕ ಉಂಟಾಗಿದ್ದು, ಕ್ಯಾಬಿನೆಟ್ ಸಚಿವರು ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ.

ಈ ಹಿಂದೆ ದಾವಣಗೆರೆಯಿಂದಲೇ ಪ್ರತ್ಯೇಕ ಲಿಂಗಾಯಿತ ಹೋರಾಟಕ್ಕೆ ಚಾಲನೆ ಸಿಕ್ಕಿದ್ದು, ಇಡೀ ರಾಜ್ಯದಲ್ಲಿ ಕೋಲಾಹಲಾ ಉಂಟಾಗಿತ್ತು. ಅಲ್ಲದೇ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿರಲಿಲ್ಲ. ಈಗ ಲಿಂಗಾಯಿತ ಅಧಿಕಾರಿಗಳನ್ನು ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಶಾಸಕ ಶಾಮನೂರು ಆಡಿರುವ ಮಾತು ಕಾಂಗ್ರೆಸ್ ನಾಯಕರಲ್ಲಿ ತಳಮಳ ಉಂಟು ಮಾಡಿದ್ದು, ಪ್ರತಿಪಕ್ಷದವರಿಗೆ ಆಹಾರವಾಗಿದೆ.

Leave a Reply

Your email address will not be published. Required fields are marked *

error: Content is protected !!