ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಯಾಗಿ ಲೋಕಿಕೆರೆ ಪಿಟಿ ಹನುಮಂತಪ್ಪ ಆಯ್ಕೆ

ದಾವಣಗೆರೆ :ಲೋಕಿ ಕೆರೆ ಪೂಜಾರ ವಂಶದ .ಪಿಟಿ ಹನುಮಂತಪ್ಪ ಆನಂದ್ ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಯಾಗಿ ಆಯ್ಕೆಯಾದರು.
ಸರಳ ಸೌಮ್ಯಾ ಸ್ವಭಾವದ ಎಲ್ಲರನ್ನು ಸಮಾನ, ಸಮಚಿತ್ತದಿಂದ ಕಾಣುವ ಸ್ವಭಾವ ಹೊಂದಿರುವ ಯುವ ಮುಖಂಡ ಈ ಹಿಂದೆ ಮಾಯಾಕೊಂಡ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಾಗಿ, ಜಿಲ್ಲೆ ಕುರುಬರ ವಿದ್ಯಾವರ್ಧಕ ಸಂಘದ ನಿರ್ದೇಶಕ ರಾಗಿ, ಲೋಕಿ ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಸಾಮಾಜಿಕ ಕಳಕಳಿ ಮಾನವೀಯ ಮೌಲ್ಯಗಳ ವ್ಯಕ್ತಿತ್ವ ಶಿಸ್ತಿನ ಜೀವನ.
ಶ್ರೀ ಬೀರಲಿಂಗೇಶ್ವರ ದೇವಾಸ್ಥಾನದ ಟ್ರಸ್ಟ್ ನಲ್ಲೂ ನಿಷ್ಠೆ ಪ್ರಾಮಾಣಿಕತೆ ಪ್ರಬುದ್ಧತೆ ಯುವ ಸಂಘಟನೆ ಚತುರತೆ ಯಿಂದ ಕಾರ್ಯ ನಿರ್ವಹಿಸುತ್ತಿರುವ ಹನುಮಂತಪ್ಪ ನವರ ಗಣನೀಯ ಸೇವೆ ಗುರುತಿಸಿ.
ಮಾಜಿ ಸಚಿವ ಜನಪ್ರಿಯ ನಾಯಕ ಎಸ್ ಎಸ್ ಮಲ್ಲಿಕಾರ್ಜುನ ರವರ ಆದೇಶದ ಮೇರೆಗೆ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಹೆಚ್ ಬಿ ಮಂಜಪ್ಪ ನವಿರು ಹನುಮಂತಪ್ಪ ನವರನ್ನ ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಉತ್ಸಾಹಿ ಯುವ ಮುಖಂಡ ಹನುಮಂತಪ್ಪ ನವರ ನೇಮಕ ಸೂಕ್ತ ವಾಗಿದೆ ಎಂದು ಸಮಾಜದ ಮುಖಂಡರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಗ್ರಾಮದ ಹಿರಿಯರು ಯುವಕರು ಹರ್ಷ ವ್ಯಕ್ತಪಡಿಸಿ ಶುಭಹಾರೈಸಿದ್ದಾರೆ.