ಲೊಕಾಯುಕ್ತ ಬಲೆಗೆ ರಾಣೆಬೆನ್ನೂರು ನಗರ ಠಾಣೆ ಪಿಎಸ್ಐ ಸುನೀಲ್ ತೇಲಿ ಹಾಗೂ ಪೇದೆ

ದಾವಣಗೆರೆ: ಮನೆ ಬಾಡಿಗೆ ವಸೂಲಿ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಪಿಎಸ್ಐ ಮತ್ತು ಪೇದೆಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಣೇಬೆನ್ನೂರು ಶಹರ ಪೊಲೀಸ್ ಠಾಣೆಯ ಪಿಎಸ್ಐ ಸುನಿಲ್ ತೇಲಿ ಹಾಗೂ ಆತನ ವಾಹನ ಚಾಲಕ ಸಚಿನ್ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ.
ಇವರು ವ್ಯಕ್ತಿಯೊಬ್ಬರಿಂದ ಮನೆ ಬಾಡಿಗೆ ವಸೂಲಿ ಮಾಡಿಕೊಡಲು ಐವತ್ತು ಸಾವಿರ ರೂಪಾಯಿಗಳಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಖಚಿತ ಮಾಹಿತಿ ಮೇರೆಗೆ ದಾವಣಗೆರೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಸುನೀಲ್ ತೇಲಿ ಈ ಹಿಂದೆ ದಾವಣಗೆರೆ ಜಿಲ್ಲೆಯ ಹರಿಹರ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು, ಹರಿಹರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಆರೋಪದಲ್ಲಿ ಹೇಸರು ತಳಕು ಹಾಕಿಕೊಂಡಿತ್ತು.
ರಾಣೆಬೆನ್ನೂರು ನಗರ ವ್ಯಾಪ್ತಿಯಲ್ಲಿ ಕೆಲವು ದಿನಗಳಲ್ಲಿ ಅಕ್ರಮ ಮಟ್ಕಾ ದಂಧೆ, ಮರಳು ಮಾಫಿಯಾ, ಇಸ್ಪೀಟು ದಂಧೆ, ಅಕ್ರಮ ಪಡಿತರ ಅಕ್ಕಿ ಸಾಗಾಟಕ್ಕೆ ಬ್ರೇಕ್ ಹಾಕಿದ್ದರು, ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಹೆಸರು ಗಳಿಸಿದ್ದ ತೇಲಿಯವರು. ಕೆಲ ತಿಂಗಳ ನಂತರ ಎಲ್ಲಾ ಅಕ್ರಮ ದಂಗೆಕೋರರ ಜೊತೆ ಶಾಮೀಲಾಗಿದ್ದರು ಎಂಬ ಆರೋಪ ದಂಧೆಕೋರರೆ ಎಳೆ ಎಳೆಯಾಗಿ ವಿವರಿಸಿದ್ದಾರೆ.
ತಪ್ಪು ಮಾಡಿದವರಿಗೆ ಶಿಕ್ಷೆ ಗ್ಯಾರೆಂಟಿ ಎಂಬ ವಾಕ್ಯ ಸತ್ಯವಾಗಿದೆ ಎನ್ನುತ್ತಿದ್ದಾರೆ ರಾಣೆಬೆನ್ನೂರಿನ ನೊಂದವರು.