‘ನನ್ನ ಸಾವಿಗೆ ನಾನು ಪ್ರೀತಿಸಿದ ಹುಡುಗಿ ಕಾರಣ’.! ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಹಾಕಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕ
ದಾವಣಗೆರೆ: ಪ್ರೇಮ ವೈಫಲ್ಯ ಕಾರಣಕ್ಕಾಗಿ ವಾಟ್ಸಪ್ ನಲ್ಲಿ ತಾನು ಪ್ರೀತಿಸಿದವಳೇ ಕಾರಣ ಎಂದು ಸ್ಟೇಟಸ್ ಹಾಕಿ ಯುವಕನೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗರ ಶರಣಾಗಿರುವ ಘಟನೆ ನಗರದ ಕರೂರು ಕೈಗಾರಿಕಾ ಪ್ರದೇಶದ ಬಳಿ ಇರುವ ರೈಲ್ವೆ ಟ್ರಾಕ್ ಬಳಿ ನಡೆದಿದೆ.
ಎಚ್‌ಕೆಆರ್ ಸರ್ಕಲ್ ಬಳಿಯ ಹೊಸ ಲೆನಿನ್‌ನಗರದ ನಿವಾಸಿ ಮಹಾಂತೇಶ್ (24) ಮೃತ ಯುವಕ.
ಕರೂರು ಕೈಗಾರಿಕಾ ಪ್ರದೇಶದಲ್ಲಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಈತ ಅಲ್ಲೇ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳನ್ನು ಪ್ತೀತಿಸುತ್ತಿದ್ದ. ಆದರೆ, ಅವರಿಬ್ಬರ ಮಧ್ಯೆ ಅದೇನು ಅವಾಂತರವಾಯಿತೋ ಏನೋ ಇದ್ದಕ್ಕಿದ್ದಂತೆ ತನ್ನ ಸಾವಿಗೆ ಪ್ರೀತಿಸಿದ ಹುಡುಗಿಯೇ ಕಾರಣ ಎಂದು ವಾಟ್ಸಪ್ ಸ್ಟೇಟಸ್‌ಗೆ ಹಾಕಿ ಗಾರ್ಮೆಂಟ್ಸ್ ಬಳಿಯೇ ಇದ್ದ ರೈಲ್ವೇ ಟ್ರ್ಯಾಕ್‌ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆಗೆ ಅವನೇ ಆಧಾರಸ್ಥಂಭವಾಗಿದ್ದ. ಯಾವುದೋ ಹುಡುಗಿಗೋಸ್ಕರ ರೈಲಿಗೆ ತಲೆಕೊಟ್ಟು ಜೀವ ಕಳೆದುಕೊಂಡಿದ್ದಾನೆ. ಈಗ ನಮಗೆ ಯಾರು ಹೊಣೆ ಎಂದು ಆತನ ಅತ್ತೆ ಲತಾ ಅಳಲು ತೋಡಿಕೊಂಡಿದ್ದಾರೆ.
ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.