ಮಹಾನಗರ ಪಾಲಿಕೆಯಿಂದ 30 ಕಡೆ ಗಣೇಶ ವಿಸರ್ಜನೆಗೆ ಟ್ರಾಕ್ಟರ್ ಬಳಕೆ.! ಎಲ್ಲೆಲ್ಲಿ ಅಂತಾ ಇಲ್ಲಿದೆ ಮಾಹಿತಿ 👇

 

ದಾವಣಗೆರೆ: ಗೌರಿ ಗಣೇಶ ಚತುರ್ಥಿಯ ಅಂಗವಾಗಿ ಗಣೇಶ ಮೂರ್ತಿ ವಿಸರ್ಜನೆಗೆ ಪಾಲಿಕೆ ವತಿಯಿಂದ ಸೆ. 10, 12 ಮತ್ತು 14 ರಂದು ನಗರದ 30 ಸ್ಥಳಗಳಲ್ಲಿ ಟ್ರ್ಯಾಕ್ಟರ್ ಟ್ರೇಲರ್ ನಿಲ್ಲಿಸುವ ವ್ಯವಸ್ಥೆ ಹಾಗೂ ಬಾತಿ ಕೆರೆ ಹಾಗೂ ಹದಡಿ ರಸ್ತೆ ಭದ್ರಾ ಚಾನಲ್ ಬಳಿ ಕೃತಕ ಹೊಂಡ ನಿರ್ಮಿಸಲಾಗಿದೆ.

ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ನಿಗದಿತ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು ಎಂದು ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ತಿಳಿಸಿದ್ದಾರೆ.

ಟ್ರ್ಯಾಕ್ಟರ್ ಟ್ರೇಲರ್ ನಿಲ್ಲಿಸಲಾಗುವ ಸ್ಥಳಗಳು: ಬೇತೂರು ರಸ್ತೆ ವೆಂಕಟೇಶ್ವರ ವೃತ್ತ, ಬಂಬೂ ಬಜಾರ್ ಗಣೇಶ ಹೋಟೆಲ್ ಬಳಿ, ಹಗೆದಿಬ್ಬ ವೃತ್ತಣ ದುಗಾಂಬಿಕ ದೇವಸ್ಥಾನ ( ಶಿವಾಜಿ ವೃತ್ತ) ಹೊಂಡದ ವೃತ್, ಕಾಯಿಪೇಟೆಯ ಬಸವೇಶ್ವರ ವೃತ್ತ, ಕುರುಬರ ಕೇರಿ, ಡಾಂಗೆ ಪಾರ್ಕ್, ರಾಮ್ ಅಂಡ್ ಕೋ ಸರ್ಕಲ್, ಗಣೇಶ ದೇವಸ್ಥಾನ ಹತ್ತಿರ ಬಾಪೂಜಿ ಶಾಲೆ, ಆಂಜನೇಯ ಬಡಾವಣೆ ಆಂಜನೇಯ ದೇವಸ್ಥಾನ, ವಿದ್ಯಾನಗರದ ಈಶ್ವರ ಪಾರ್ವತಿ ದೇವಸ್ಥಾನ, ವಿನೋಬನಗರ 3 ನೇ ಮುಖ್ಯ ರಸ್ತೆ, ಮಹಾರಾಜಪೇಟೆ ವಿಠಲಮಂದಿರ, ಆವರಗೆರೆ , ಗುಂಡಿ ಮಹದೇವಪ್ಪ ಸರ್ಕಲ್, ನಿಟ್ಟುವಳ್ಳಿ ದುರ್ಗಾಂಬಿಕ ದೇವಸ್ಥಾನ, ಹೆಚ್‌ಕೆಆರ್ ಸರ್ಕಲ್, ಶಿವಕುಮಾರ ಸ್ವಾಮಿ ಬಡಾವಣೆ 1 ನೇ ಹಂತದ ಸಂಜೀವಿನಿ ಆಂಜನೇಯ ದೇವಸ್ಥಾನ, ಕೊಂಡಜ್ಜಿ ರಸ್ತೆ ಶಿಬಾರ) ಮೈಲಾರಲಿಂಗೇಶ್ವರ ದೇವಸ್ಥಾನ, ಎಸ್‌ಎಸ್ ಲೇಔಟ್ ಬನ್ನಿಮರದ ಹತ್ತಿರ ರಿಂಗ್ ರಸ್ತೆ, ಜಯದೇವ ವೃತ್ತ, ಎಂಸಿಸಿ ಎ ಬ್ಲಾಕ್ ಬಕ್ಕೇಶ್ವರ ಸ್ಕೂಲ್ ಮುಂಭಾಗ ಗಣೇಶ ದೇವಸ್ಥಾನ, ಸರಸ್ವತಿ ಬಡಾವಣೆ ಪಂಚಮುಖಿ ಆಂಜನೇಯ ದೇವಸ್ಥಾನ, ದೇವರಾಜ ಅರಸ್ ಬಡಾವಣೆ ಕೋರ್ಟ್ ಹಿಂಭಾಗ, ಆಂಜನೇಯ ಬಡಾವಣೆ ಬಿಐಇಟಿ ರಸ್ತೆ ಬಾಪೂಜಿ ಬ್ಯಾಂಕ್ ಹತ್ತಿರ, ಡಿಸಿಎಂ ಲೇಔಟ್ ಸರ್ಕಲ್ ಹತ್ತಿರ, ಹಳೇ ಕುಂದುವಾಡ, ಹಾಸಬಾವಿ ವೃತ್ತ, ಶಾಮನೂರು, ಸಾರ್ವಜನಿಕರು ಮಹಾನಗರಪಾಲಿಕೆ ವತಿಯಿಂದ ನಿಗದಿಪಡಿಸಲಾದ ಸ್ಥಳಗಳಲ್ಲಿಯೇ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಮೂಲಕ ಜಲ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಸಹಕರಿಸಬೇಕು ಎಂದು ಮನವಿ ಮಾಡಿರುವ ಆಯುಕ್ತರು, ಯಾವುದೇ ಸಾರ್ವಜನಿಕ, ಖಾಸಗಿ ಬಾವಿ, ಕೆರೆ, ಕಾಲುವೆ, ಹಳ್ಳ, ಕೊಳ್ಳಗಳಲ್ಲಿ ಗಣೇಶ ಮೂರ್ತಿ ವಿಸರ್ಜಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!