ಮಾನವೀಯತೆಗೆ ಇನ್ನೊಂದು ಹೆಸರೇ ರೇಣುಕಾಚಾರ್ಯ ಯಾಕೆ ಗೊತ್ತಾ.?

ದಾವಣಗೆರೆ: ಬೈಕ್ ನಿಯಂತ್ರಣಕ್ಕೆ ಸಿಗದೇ ರಸ್ತೆಯ ಪಕ್ಕದ ಗುಂಡಿಗೆ ಬಿದ್ದು ಗಾಯಗೊಂಡ ವ್ಯಕ್ತಿಯನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ತಮ್ಮ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.
ಹೊನ್ನಾಳಿ ತಾಲ್ಲೂಕಿನ ಕುಂದೂರು ಕುಂಬಳೂರು ಮಾರ್ಗ ಮಧ್ಯೆ ಈ ಘಟನೆ ಸಂಭವಿಸಿದ್ದು, ಬೈಕ್ ನಿಯಂತ್ರಣಕ್ಕೆ ಸಿಗದೇ ರಸ್ತೆ ಪಕ್ಕದ ಗುಂಡಿಗೆ ಬೈಕ್ ಸವಾರ ಬಿದ್ದಿದ್ದಾನೆ.
ರೇಣುಕಾಚಾರ್ಯ ಅದೇ ದಾರಿಯಲ್ಲಿ ಲಸಿಕೋತ್ಸವಕ್ಕೆ ತೆರಳುವ ಮಾರ್ಗ ಮಧ್ಯೆ ಆಗಿರುವ ಅಪಘಾತ ಕಂಡು ಗಾಯಾಳುವನ್ನು ತಮ್ಮ ಬೆಂಗಾವಲು ವಾಹನದ ಮೂಲಕ ಕೂಲಂಬಿ ಆಸ್ಪತ್ರೆಗೆ ಗಾಯಾಳುವನ್ನು ಸಾಗಿಸಲು ಅನುವು ಮಾಡಿಕೊಟ್ಟು ಔದಾರ್ಯ ಮೆರೆದಿದ್ದಾರೆ.
