ಚಿತ್ರದುರ್ಗ ಮುರುಘಾಮಠಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ: ಮೂರನೇ ಅಲೆ ಬಗ್ಗೆ ಸ್ವಾಮೀಜಿ ಜೊತೆ ಚರ್ಚೆ

ಚಿತ್ರದುರ್ಗ: ಚಿತ್ರದುರ್ಗ ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠಕ್ಕೆ ಇಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಮತ್ತು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರು ಭೇಟಿ ನೀಡಿ ಡಾ. ಶಿವಮೂರ್ತಿ ಮುರುಘಾ ಶರಣರಿಂದ ಆಶೀರ್ವಾದ ಪಡೆದರು. ಇಂದು ಬೆಂಗಳೂರಿನಿಂದ ದಾವಣಗೆರೆಗೆ ಹೋಗುವ ಮಾರ್ಗ ಮಧ್ಯೆ ಮಠಕ್ಕೆ ಭೇಟಿ ನೀಡಿದರು. ಕೋವಿಡ್ ಮೂರನೇ ಅಲೆ ಬರುವ ಸಾದ್ಯತೆ ಬಗ್ಗೆ ಮುರುಘಾ ಶರಣರ ಜೊತೆ ಮಾತುಕತೆ ನಡೆಸಿದ್ರು, ಸರ್ಕಾರ ಮೂರನೇ ಆಲೆಯಲ್ಲಿ ಮಕ್ಕಳಿಗೆ ತೊಂದರೆಯಾಗುವ ಸಂಭವವಿದೆ ಎಂದು ಹೇಳಿರುವುದರಿಂದ ಎಂತಹ ಪರಿಸ್ಥಿತಿ ಬಂಧರು ಎದುರಿಸಲು ಸಿದ್ದವಿದ್ದೆವೆ ಎಂದು ಸ್ವಾಮೀಜಿಗಳಿ ತಿಳಿಸಿರು.