” ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ ” ವಿಶ್ವದರ್ಜೆಯ ಶಸ್ತ್ರಚಿಕಿತ್ಸೆ ಇದೊಂದು ಅಪೂರ್ವವಾದ ವೈದ್ಯಕೀಯಸಾಧನೆ

ದಾವಣಗೆರೆ :  ಕಳೆದ 20 ವರ್ಷಗಳಿಂದ ಕೇಂದ್ರ ಕರ್ನಾಟಕದ ‘ ದಾವಣಗೆರೆಯಲ್ಲಿ ‘ ಕಾರ್ಯನಿರ್ವಹಿಸುತ್ತಿರುವ ಸಿಟಿಸೆಂಟ್ರಲ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ದಾವಣಗೆರೆ ಪಕ್ಕದ ಜಿಲ್ಲೆ ಶಿವಮೊಗ್ಗದ ಪಾಲಿಟೆಕ್ನಿಕ್ಕಾಲೇಜಿನಲ್ಲಿ ಇಂಜಿನಿಯರ್ ಆಗಿ ಕೆಲಸನಿರ್ವಹಿಸುತ್ತಿರುವ 52 ವರ್ಷವಯಸ್ಸಿನವ್ಯಕ್ತಿಯೊಬ್ಬರು ಕಳೆದ 4 ವರ್ಷಗಳಿಂದ ಅಸ್ತಮಾ ರೀತಿಯ ತೊಂದರೆಯಿಂದ ಬಳಲುತ್ತಿದ್ದರು.ಹೊರಗಡೆಯ ಲ್ಯಾಬೋರೇಟರಿ,ಇಮೇಜಿಂಗ್ ಸರ್ವಿಸ್ ಸೆಂಟರ್ ಗಳಲ್ಲಿ  ನೆಡೆಸಿದ ಸ್ಥೂಲಪರೀಕ್ಷೆಯ ನಂತರ ಇದೊಂದು, ” CHRONIC PULMONARY THROMO EMBOLISM ” ( ಪುಪ್ಪಸದ ರಕ್ತಹೆಪ್ಪುಗಟ್ಟುವುದು )ಖಾಯಿಲೆಯೆಂದು ದೃಢಪಟ್ಟಿತು.ಶ್ವಾಸಕೋಶದ ARTERY(ಧಮನಿ)ಗಳಲ್ಲಿರಕ್ತಹೆಪ್ಪುಗಟ್ಟಿ, ಬಲಗಡೆಯ ಹೃದಯದ ಹಿಂದೆ ಉಂಟಾಗುವ ಅತೀವ ಒತ್ತಡದ ಪರಿಣಾಮ, ಹೃದಯ ಉಬ್ಬುವುದರಿಂದ ನಿರಂತರ ಉಸಿರಾಟದ ತೊಂದರೆ ಹಾಗೂ ಅವರು(OXYGEN)ಆಮ್ಲಜನಕದ ಅವಲಂಬಿತರಾಗುವುದು ಅನಿವಾರ್ಯವಾಗುತ್ತದೆ.  ಶ್ವಾಸಕೋಶ ಮತ್ತು PULMANARY ARTRY ಮೇಲಿನ ಒತ್ತಡವನ್ನುಕಡಿಮೆಮಾಡಲು ಅವರು ಹಲವು ಬಾರಿ ಔಷಧಿಗಳ ಮೊರೆಹೋಗಿದ್ದರು.

ಈ ತೊಂದರೆಯ ನಿವಾರಣಿಗಾಗಿ ಸದರಿಯವರು ರಾಜ್ಯದ ಮತ್ತು ಹೊರ ರಾಜ್ಯದ ಹಲವು ಆಸ್ಪತ್ರೆಗಳಿಗೆ ಭೇಟಿನೀಡಿದ್ದರು. ಈ ತರಹದ ಹೃದಯದ ತೊಂದರೆಯ ಶಸ್ತ್ರಚಿಕಿತ್ಸೆಗೆ ನುರಿತ ನೈಪುಣ್ಯತೆ ಅಗತ್ಯ ಹಾಗೂ ಇದು ಪ್ರಪಂಚದ ಕೇವಲ 50 ಕಿಂತ ಕಡಿಮೆ ಆಸ್ಪತ್ರೆಗಳಲ್ಲಿ ನೆಡೆಯುತ್ತದೆ. ಸ್ವತಹ,ನಾಡಿನ ಪ್ರಖ್ಯಾತ ಹೃದಯ ತಜ್ಞರಾದ ಡಾ .ದೇವಿಶೆಟ್ಟಿಯವರು ಸದ್ಗುರು ಜಗ್ಗಿವಾಸುದೇವರೊಂದಿಗಿನ ಸಂಭಾಷಣೆಯಲ್ಲಿ ಹಂಚಿಕೊಂಡಿದ್ದಾರೆ.

ಸಿಟಿಸೆಂಟ್ರಲ್ಆಸ್ಪತ್ರೆಯಲ್ಲಿನೆಡೆಸಿದCTPulmonary Agiography, ನಂತರ ಎಡಗಡೆಯ ಪುಪ್ಪಸದ ಮುಖ್ಯರಕ್ತನಾಳ (LAP) ಸಂಪೂರ್ಣವಾಗಿ BLOCK ಆಗಿದ್ದು ಹಾಗೂ ಬಲಗಡೆಯ ಪುಪ್ಪಸದ Perfusion ಸಾಕಷ್ಟುಇದ್ದು ಯಾವುದೇ vessel occlusion ಇದ್ದಿರಲಿಲ್ಲ
ಮಾರ್ಚ್ 23 ರಂದು, ಡಾ. ಹೆಚ್.ಲ್.ಸುಬ್ಬರಾವ್ ಮತ್ತು ಅವರ ತಂಡ ಈ ಹೃದಯದ ಶಸ್ತ್ರಚಿಕಿತ್ಸೆಯನ್ನು , ನಿರಂತರ 7 ಗಂಟೆಗಳ ಕಾಲ ಯಶಸ್ವಿಯಾಗಿ ನೆಡೆಸಿತು. ಈಸಂದರ್ಭದಲ್ಲಿ ದೇಹದ ತಾಪಮಾನ 18 ಡಿಗ್ರಿಗಿಂತ ಕಡಿಮೆ ಇರುವಂತೆ ನೋಡಿಕೊಳ್ಳುವುದು ಮತ್ತು ದೇಹದಲ್ಲಿ ರಕ್ತಸಂಚಾರ 10 ರಿಂದ 30 ನಿಮಿಷಗಳ ಕಾಲ HEART LUNG ಯಂತ್ರದ ಮೂಲಕ ಸ್ಥಬ್ಧವಾಗುವಂತೆ ನೋಡಿಕೊಳ್ಳಬೇಕಾದ್ದು ಅತ್ಯಂತ ಅವಶ್ಯವಾಗಿತ್ತು.

ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಮೆದುಳಿನ ಚಟುವಟಿಕೆಯ ಮೇಲೆ ತೀವ್ರ ನಿಗಾ ಇರಿಸುವುದು ರಕ್ತದ PH ನಿಗಾವಣೆ , ತಾಪಮಾನದ ನಿಯಂತ್ರಣ ಇವೆಲ್ಲವೂ ಕೂಡ ಏಕಕಾಲದಲ್ಲಿ ಸಾಧ್ಯವಾಗಿದ್ದು ಒಂದು ತಂಡವಾಗಿ ಕೆಲಸಮಾಡಿದ್ದರ ಪರಿಣಾಮ. ಈ ತರನಾದ(DHCA) Deep hypothermia circulatory arrest ಜಗತ್ತಿನ ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ನೆಡೆಯುತ್ತದೆ.ಶಸ್ತ್ರ ಚಿಕಿತ್ಸೆ ಯನಂತರ ಹೃದಯಕ್ಕೆ ಅದರ ಕೆಲಸ ಮರಳಿಸಿ , ಅದು ಹೇಗೆ ಮುಂದುವರಿಯುತ್ತದೆ , ಮತ್ತು ಮೆದುಳಿನ ಕೆಲಸಗಳ ಪುನರ್ ನವೀಕರಣದ ವಿಧಾನ ತುಂಬಾ ಸವಾಲಿನಕೆ ಲಸ.ಶಸ್ತ್ರಚಿಕಿತ್ಸೆಯ ನಂತರ , ರೋಗಿಯನ್ನು ಮೂರುದಿನಗಳ ಕಾಲಕೃತಕ ಉಸಿರಾಟ ಯಂತ್ರಕ್ಕೆ ( VENTILATOR ) ಅಳವಡಿಸಲಾಗಿತ್ತು. ಶಸ್ತ್ರಚಿಕಿತ್ಸೆ ನಂತರ ರೋಗಿಯ ಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುತ್ತಾ ಬಂದು ಏಪ್ರಿಲ್  24 ರಂದು ಆಸ್ಪತ್ರೆಯಿಂದ ಬಿಡುಗಡೆ ( DISCHARGE) ಗೊಂಡು ಇದೀಗ ಸ್ವಗೃಹದಲ್ಲಿ ವಿಶ್ರಾಂತಿಯಿಂದ ಆಗೂಆರೋಗ್ಯವಾಗಿ ಇರುತ್ತಿದ್ದಾರೆ. ಈ ಅಪರೂಪದ ಶಸ್ತ್ರಚಿಕಿತ್ಸೆಯ ಯಶಸ್ವಿಗೆ ಕಾರಣರಾದ Cardiac anesthetist ಡಾ. ಮಧುಸೂದನ್, ಸಹಾಯಕರಾದ ರಮೇಶ್, ನಾಗರಾಜ್ , ಅತ್ಯಂತ ದಕ್ಷತೆಯಿಂದ, ಕೌಶಲ್ಯದಿಂದ Per fusionist ಕೆಲಸನಿರ್ವಹಿಸಿದರಮೇಶ್ ಮತ್ತಿತರರ ತಂಡ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *

error: Content is protected !!