ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಆಪ್ತ ಶಿವನಹಳ್ಳಿ ರಮೇಶ್ ಬಿಜೆಪಿ ಸೇರ್ಪಡೆ

t

ದಾವಣಗೆರೆ: ಲಿಂಗಾಯತ ಸಮಾಜದ ಮುಖಂಡ, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ, ಮಹಾನಗರ ಪಾಲಿಕೆ ಕಾಂಗ್ರೆಸ್ ನ ಮಾಜಿ ಸದಸ್ಯ, ಶಿವನಹಳ್ಳಿ ರಮೇಶ್ ಬಿಜೆಪಿ ಸೇರ್ಪಡೆ ಸುದ್ದಿ ಆಗುತ್ತಿದ್ದಂತೆ ಕಾಂಗ್ರೆಸ್ ಪಾರ್ಟಿಗೆ ತಳಮಳ ಶುರುವಾಗಿದೆ.

ಮಹಾನಗರ ಪಾಲಿಕೆ ಸದಸ್ಯರಾಗಿದ್ದಾಗ ಶಿವನಹಳ್ಳಿ ರಮೇಶ್ ಉತ್ತಮವಾದ ಕೆಲಸಗಳನ್ನು ಮೂಲಕ ಜನಸಾಮಾನ್ಯರ ಗಮನ ಸೆಳೆದಿದ್ದರು, ಜೊತೆಗೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ರಮೇಶ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಜವಾಬ್ದಾರಿಯುತವಾಗಿ ಕೆಲಸಗಳನ್ನು ಮಾಡಿದವರು.

ಆದರೆ ಕಾಂಗ್ರೇಸ್‌ ಪಾರ್ಟಿ ಶಿವನಹಳ್ಳಿ ರಮೇಶ್ ಅವರನ್ನ ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವ ಆರೋಪ ಇದೆ, ಮತ್ತೊಂದು ಅವಧಿಗೆ ಮೇಯರ್ ಆಗುವ ಅವಕಾಶ ಇದ್ದರೂ ಸಹ ಪಕ್ಷದ ಜೊತೆಗಿನ ಮುನಿಸಿನಿಂದ ಅವಕಾಶ ಕೈ ತಪ್ಪಿ ಹೋಗಿತ್ತು, ಜೊತೆಗೆ ಪಕ್ಷದಲ್ಲೂ ಉನ್ನತ ಸ್ಥಾನಮಾನ ಸಿಗದೇ ಮೂಲೆ ಗುಂಪು ಮಾಡುವ ಪಿತೂರಿ ನಡೆದಿತ್ತು ಎನ್ನಲಾಗಿದೆ.

ಈ ಎಲ್ಲಾ ಕಾರಣಗಳಿಂದ ಕಾಂಗ್ರೆಸ್ ಪಕ್ಷದ ನಡೆಗೆ ಬೇಸತ್ತು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರ್ಪಡೆ ಆಗಲು ರಮೇಶ್ ನಿರ್ಧರಿಸಿದ್ದರು. ಇಂದು ಬೆಳಿಗ್ಗೆ ಬಿಜೆಪಿ ಅಭ್ಯರ್ಥಿ ಚುನಾವಣಾ ಕಚೇರಿಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುವುದು ಗ್ಯಾರಂಟಿ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!