identity card; ರೈತರು ಗುರುತಿನ ಚೀಟಿ ಮಾಡಿಸಿಕೊಳ್ಳಲು ಶಾಸಕ ಕರೆ
ಚನ್ನಗಿರಿ, ನ.೦8: ರೈತರು ತಮ್ಮ ಗುರುತಿನ ಚೀಟಿ (identity cards) ಮಾಡಿಸಿಕೊಳ್ಳಬೇಕೆಂದು ಶಾಸಕ ಬಸವರಾಜು ವಿ ಶಿವಗಂಗಾ ರೈತರಿಗೆ ಕೆರೆ ನೀಡಿದ್ದಾರೆ.
ಈಗಾಗಲೇ ಗುರುತಿನ ಚೀಟಿ (fruit identity) ಮಾಡಿಸಿಕೊಂಡಿದ್ದ ರೈತರು ಹೊಲದ ಸರ್ವೇ ನಂಬರ್ ಜೋಡಣೆ ಆಗಿದ್ದೀಯಾ ಅಥವಾ ಇಲ್ಲವೇ ಎಂಬುದನ್ನ ಪರಿಶೀಲಿಸಿಕೊಳ್ಳಬೇಕು. ಇಲ್ಲವಾದರೆ ಕೂಡಲೇ ಹೊಲದ ಸರ್ವೇ ನಂಬರ್ ಜೋಡಣೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
Janata Darshan; ಕಂಚಿಗನಾಳ್ ಗ್ರಾಪಂ ವ್ಯಾಪ್ತಿಯಲ್ಲಿ ಜನತಾ ದರ್ಶನ
ಜಂಟಿ ಖಾತೆ ಹೊಂದಿದ್ದರೆ ಪ್ರತ್ಯೇಕವಾಗಿ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು. ಇದಕ್ಕೆ ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ನಂಬರ್ ಹಾಗೂ ಇತ್ತೀಚಿನ ಭಾವಚಿತ್ರ ಗುರುತಿನ ಚೀಟಿ ಮಾಡಿಸಲು ದಾಖಲೆಬೇಕಾಗುತ್ತದೆ, ಹೆಚ್ಚಿನ ಮಾಹಿತಿಗಾಗಿ ಗ್ರಾಮ ಆಡಳಿತಾಧಿಕಾರಿಗಳು ಮತ್ತು ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆದುಕೊಳ್ಳಬಹುದೆಂದು ಶಾಸಕ ಬಸವರಾಜು ವಿ ಶಿವಗಂಗಾ ತಿಳಿಸಿದ್ದಾರೆ.
ಗುರುತಿನ ಚೀಟಿ ಇಲ್ಲದಿದ್ದರೆ ಸರ್ಕಾರದಿಂದ ಯೋಜನೆ ಹಾಗೂ ಹಣ ಖಾತೆಗೆ ಜಮಾ ಆಗುವುದಿಲ್ಲ, ಎಲ್ಲಾ ರೈತರು ಗುರುತಿನ ಚೀಟಿ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ.