Janata Darshan; ಕಂಚಿಗನಾಳ್ ಗ್ರಾಪಂ ವ್ಯಾಪ್ತಿಯಲ್ಲಿ ಜನತಾ ದರ್ಶನ
ಚನ್ನಗಿರಿ, ನ.08: ಚನ್ನಗಿರಿ ತಾಲ್ಲೂಕು ಆಡಳಿತ ಹಾಗೂ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಚನ್ನಗಿರಿ ಶಾಸಕ ಬಸವರಾಜು ವಿ ಶಿವಗಂಗಾ ಅವರು ಇಂದು ಕಂಚಿಗನಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಜನತಾ ದರ್ಶನ (Janata Darshan) ಕೈಗೊಂಡರು.
ಈ ವ್ಯಾಪ್ತಿಯ ವಿ.ಬನ್ನಿಹಟ್ಟಿ, ಹರಳಘಟ್ಟ,ವಿ ಕುಮಾರನಹಳ್ಳಿ,ಕಂಚಿಗನಹಾಳು, ವಡ್ನಾಳು,,ಬೆಟ್ಟಕಡೂರು, ಪೆನ್ನಸಮುದ್ರ, ಮಲಹಾಳು ಗ್ರಾಮಗಳಲ್ಲಿ ಸಾರ್ವಜನಿಕರ ಸಮಸ್ಯೆಗಳ ಅಹವಾಲುಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ, ಸಾಧ್ಯವಾದಷ್ಟು ಸ್ಥಳಿಯವಾಗಿ ಪರಿಹರಿಸಲು ಅನಕೂಲವಾಗುವಂತೆ ಎಲ್ಲ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲಾಗುವುದು ಮತ್ತು ಸರಕಾರದ ಹಂತದಲ್ಲಿ ಆಗಬೇಕಾದ ಕಾರ್ಯಾದೇಶಗಳಿಗಾಗಿ ಸರಕಾರಕ್ಕೆ ಕಳುಹಿಸಲಾಗುವುದು.
ತಾಲ್ಲೂಕಿನ ಆಡಳಿತ ನಿರಂತರವಾಗಿ ಸಾರ್ವಜನಿಕರ ಅಹವಾಲು, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಪರಿಹರಿಸಲು ಕ್ರಮವಹಿಸುತ್ತಿದೆ. ಸಾರ್ವಜನಿಕರ ಆಶಯಗಳಿಗೆ ತಕ್ಷಣ ಪ್ರತಿಕ್ರಿಯಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ .
ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಮೂಲಭೂತವಾಗಿ ತಮ್ಮ ಇಲಾಖೆಯಿಂದ ನೀಡಬೇಕಾದ ಸೇವೆ, ಸೌಲಭ್ಯಗಳನ್ನು ದೊರಕಿಸಬೇಕು. ಇವುಗಳ ನೀಡುವಿಕೆಯಲ್ಲಿನ ವಿಫಲತೆ, ವಿಳಂಬಗಳು ಸಾರ್ವಜನಿಕರಿಗೆ ಸಮಸ್ಯೆಯಾಗಿ ರೂಪುಗೊಳ್ಳುತ್ತವೆ. ಆದ್ದರಿಂದ ತಮ್ಮ ಇಲಾಖೆ ಸೇವೆ, ಕರ್ತವ್ಯಗಳನ್ನು ಸಕಾಲಕ್ಕೆ ನಿಯಮಾನುಸಾರ ವಿಳಂಬವಿಲ್ಲದೆ ನೀಡಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
city rounds; ಜನತೆಯ ಸಂಕಷ್ಟ ಆಲಿಸಿದ ಚನ್ನಗಿರಿ ಶಾಸಕ ಬಸವರಾಜು ವಿ ಶಿವಗಂಗಾ