ಮೊಬೈಲ್ ಸ್ಫೋಟ-3ನೇ ತರಗತಿ ಬಾಲಕಿ ಸಾವು

ತ್ರಿಶೂರ್: ಮೊಬೈಲ್ ಫೋನ್ ಸ್ಫೋಟಗೊಂಡು 3ನೇ ತರಗತಿ ಓದುತ್ತಿದ್ದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ.
ತಿರುವಿಲ್ವಾಮಲ ನಿವಾಸಿ ಆದಿತ್ಯಶ್ರೀ ಎಂಬ ಬಾಲಕಿ ಬಳಸುತ್ತಿದ್ದ ಮೊಬೈಲ್ ಫೋನ್ ಸೋಮವಾರ ರಾತ್ರಿ 10.30 ರ ಸುಮಾರಿಗೆ ಏಕಾಏಕಿ ಸ್ಫೋಟಗೊಂಡಿದೆ ಎಂದು ಪೊಲೀಸರು ಳಿಸಿದ್ದಾರೆ.
ಎಂಟು ವರ್ಷದ ಬಾಲಕಿ ಆದಿತ್ಯಶ್ರೀ ಸಮೀಪದ ಶಾಲೆಯೊಂದರಲ್ಲಿ ಮೂರನೇ ತರಗತಿ ಓದುತ್ತಿದ್ದಳು.