ದೇಶದ ಉತ್ತಮ ಆಡಳಿತಕ್ಕಾಗಿ ತಪ್ಪದೇ ಮತದಾನ ಮಾಡಿ.

ದೇಶದ ಉತ್ತಮ ಆಡಳಿತಕ್ಕಾಗಿ ತಪ್ಪದೇ ಮತದಾನ ಮಾಡಿ.

ದಾವಣಗೆರೆ : ದೇಶದಲ್ಲಿ ಉತ್ತಮ ಆಡಳಿತವನ್ನು ಬಯಸುವ ನಾವುಗಳು ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು ಎಂದು ದಾವಣಗೆರೆ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಶ್ರೀ ಶ್ರೀನಿವಾಸ್ ರವರು ಹೇಳಿದರು. ಅವರು ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತದಾನ ಜಾಗೃತಿ ವೇದಿಕೆ ಅಡಿಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಸಂವಿಧಾನವು ನೀಡಿರುವ ಮುಖ್ಯವಾದ ಸಂವಿಧಾನಿಕ ಹಕ್ಕು
ಮತದಾನ. ವಿದ್ಯಾರ್ಥಿಗಳು ಯುವ ಸಮೂಹವೂ ಚುನಾವಣಾ ಸಂದರ್ಭದಲ್ಲಿ ಮತದಾನವನ್ನು ಆಲಸ್ಯ ಮಾಡದೆ ಪ್ರತಿಯೊಬ್ಬರು ತಪ್ಪದೆ ಮತದಾನವನ್ನು ಮಾಡಬೇಕು. ಪ್ರತಿಯೊಬ್ಬರು ಚಲಾಯಿಸುವ ಮತದಿಂದ ಉತ್ತಮ ನಾಯಕರನ್ನು ಆಯ್ಕೆ ಮಾಡಿದಾಗ ಅವರಿಂದ ದೇಶದ ಭವಿಷ್ಯವೂ ಉತ್ತಮಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಚುನಾವಣೆಗಳಲ್ಲಿ ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೆ ಮತದಾನ ಮಾಡುತ್ತೇವೆ ಎಂದು ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧ ಪ್ರಾಂಶುಪಾಲರಾದ ಪ್ರೊ ಅಂಜನಪ್ಪನವರು ಮಾತನಾಡುತ್ತಾ ಚುನಾವಣೆಯನ್ನು ಹಬ್ಬದಂತೆ ಪ್ರತಿಯೊಬ್ಬರೂ ಆಚರಿಸಬೇಕು. ಮತದಾನ ನಮ್ಮ ಹಕ್ಕು ಎಂಬುದು ಎಲ್ಲರಲ್ಲೂ ಅರಿವು ಇರಬೇಕು ಹಾಗೂ ಇತರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂ ಎಸಿ ಸಂಚಾಲಕರಾದ ಪ್ರೊನಾರಾಯಣಸ್ವಾಮಿ ಕೆ ಜಿಲ್ಲಾ ನೋಡಲು ಅಧಿಕಾರಿಗಳಾದ ಪ್ರೊ ಸೋಮಶೇಖರಪ್ಪ ಕಾಲೇಜು ಸಂಚಾಲಕರಾದ ಶಂಭುಲಿಂಗಪ್ಪ ನಲ್ಲನವರ್ ಶ್ರೀಮತಿ ಗೀತಾ ದೇವಿ ವೆಂಕಟೇಶ್ ಬಾಬು ಎಸ್ ಹಾಗೂ ಎಲ್ಲಾ ಬೋಧಕ ವರ್ಗದವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಪ್ರೊ ಯಶೋಧ ಪ್ರಾರ್ಥಿಸಿದರು ಪ್ರೊ ಗೌರಮ್ಮ ಅವರು ನಿರೂಪಿಸಿದರೆ ಡಾ ಸುರೇಶ ರವರು ಅತಿಥಿಗಳನ್ನು ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!