ಪೌರಕಾರ್ಮಿಕರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಮಾದರಿ ಕಾರ್ಪೊರೇಟರ್ ಪ್ರಸನ್ನ ಕುಮಾರ್

ಪೌರಕಾರ್ಮಿಕರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಮಾದರಿ ಕಾರ್ಪೊರೇಟರ್ ಪ್ರಸನ್ನ ಕುಮಾರ್

ದಾವಣಗೆರೆ: ಇತರರಿಗೆ ಮಾದರಿಯಾಗುವಂತೆ ಪೌರ ಕಾರ್ಮಿಕರೊಂದಿಗೆ ಈ ವರ್ಷವೂ ಸಹ ವಿನೂತನವಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡ 24 ನೇ ವಾರ್ಡಿನ ಕಾರ್ಪರೇಟರ್ ಪ್ರಸನ್ನ ಕುಮಾರ್.

ನಗರದಲ್ಲಿ‌ ಖಾಲಿ ಜಾಗದಲ್ಲಿ ಕಸ ಹಾಕುವ ಸಮಸ್ಯೆ ನಿನ್ನೆ ಮೊನ್ನೆಯದ್ದಲ್ಲ, ಎಂ.ಸಿ.ಸಿ ಎ ಬ್ಲಾಕ್ ಅನ್ನು ಬ್ಲಾಕ್ ಸ್ಪಾಟ್ ಮುಕ್ತ ವಾರ್ಡನ್ನಾಗಿ ಮಾಡಲು, ಇಂದು ಮೋದಿ ರಸ್ತೆಯಲ್ಲಿ ಬ್ಲಾಕ್ ಸ್ಪಾಟ್ ಸ್ವಚ್ಚಗೊಳಿಸಿ, ಆ ಜಾಗದಲ್ಲಿ ದೊಡ್ಡದಾದ ಕುಂಡಗಳನ್ನು ಇಟ್ಟು, ಅದರಲ್ಲಿ ಗಿಡಗಳನ್ನು ನೆಡುವ ಮೂಲಕ, ಆ ಸ್ಥಳದಲ್ಲಿ ಕಸ ಹಾಕದಂತೆ ಸುತ್ತಮುತ್ತಲಿನ ಮನೆಗಳಿಗೆ ತೆರಳಿ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಸನ್ನ ಕುಮಾರ್, ಇಂದಿನ ಈ ಕಾರ್ಯಕ್ರಮದ ಮುಖ್ಯ ರೋವಾರಿಗಳೇ ಪೌರಕಾರ್ಮಿಕರು, ಆಡಂಬರದ ಸಂಭ್ರಮ ಬೇಡ, ಬದಲಾಗಿ ವಾರ್ಡಿನ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸೋಣ ಎಂದಾಗ ಎಲ್ಲರೂ ಸಹಕರಿಸಿ ನಿನ್ನೆ ಶ್ರಮವಹಿಸಿ ಇಷ್ಟು ದೊಡ್ಡ ಕುಂಡಲಗಳನ್ನು ಈ ಸ್ಥಳಕ್ಕೆ ತಂದೆವು, ಗಿಡಗಳನ್ನು ತಂದು, ಅದ್ಭುತವಾಗಿ ಗೋಡೆ ಬರಹ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿದೆ.

ಈ ಹಿಂದೆ, ವಾರ್ಡಿನಲ್ಲಿ ಸುಮಾರು 15 ಬ್ಲಾಕ್ ಸ್ಪಾಟ್ ಗಳಿದ್ದವು, ಜನರಲ್ಲಿ ಜಾಗೃತಿ ಮೂಡಿಸಿ, ರಾತ್ರಿ ಹೊತ್ತು ಕಸ ಹಾಕುವವರಿಗೆ ಹಿಡಿದು ದಂಡ ವಿಧಿಸಿದ ನಂತರ ಇಂದು ಸುಮಾರು 5-7 ಬ್ಲಾಕ್ ಸ್ಪಾಟ್ ಮಾತ್ರ ಉಳಿದುಕೊಂಡಿವೆ.

ಜನರು‌ ಸಹಕರಿಸಬೇಕು, ಕಸ ಹಾಕುವವರಿಗೆ ತರಾಟೆ ತೆಗೆದುಕೊಂಡರೆ ಮಾತ್ರ, ಮುಂದಿನ ದಿನಗಳಲ್ಲಿ ಬ್ಲಾಕ್ ಸ್ಪಾಟ್ ಮುಕ್ತ ವಾರ್ಡ್ ಮಾಡುವ ಸಂಕಲ್ಪ ಈಡೇರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಸಚೇತಕರಾದ ಡಾ. ಶಿವಯೋಗಿ ಸ್ವಾಮಿ, ಮಾಜಿ ಮಹಾ ಪೌರರಾದ ಶ್ರೀಮತಿ ಸುಧಾ ಜಯರುದ್ರೇಶ್, ಪದ್ಮನಾಬ ಶೆಟ್ರು, ಉಶಾ, ಸಚಿನ್ ವೆರಣೇಕರ್, ವಿವೇಕ್, ಕಾರ್ತಿಕ, ಸಚಿನ್, ಕಿರಣ್, ಶಂಕರ್, ಸುನಿಲ್, ದಫೇದಾರ್ ಹನುಮಂತಪ್ಪ, ಪೌರಕಾರ್ಮಿಕರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!