ಅಂಡರ್ ಪಾಸ್‌ನಲ್ಲಿ ನೀರು ತೆಗೆದಿದ್ದರೆ ಸಾಯುತ್ತಿರಲಿಲ್ಲ ನನ್ನ ಪುತ್ರಿ: ಮೃತ ಅಕ್ಷಯಾ ತಂದೆ ಕಣ್ಣೀರು
ಬೆಂಗಳೂರು: ಹೆಬ್ಬಾಳ ಠಾಣೆ ಮುಂಭಾಗದ ಅಂಡರ್‌ಪಾಸ್‌ನಲ್ಲಿ ನೀರು ನಿಂತಿದ್ದರಿAದಲೇ ಪುತ್ರಿ ಅಸುನೀಗಿದ್ದಾಳೆ ಎಂದು, ಬಿಬಿಎಂಪಿ ಲಾರಿ ಡಿಕ್ಕಿಯಾಗಿ ಸಾವನ್ನಪ್ಪಿದ ಬಾಲಕಿ ಅಕ್ಷಯಾ ತಂದೆ ನರಸಿಂಹಮೂರ್ತಿ ಕಣ್ಣೀರು ಹಾಕಿದ್ದಾರೆ. ಅಂಡರ್‌ಪಾಸ್‌ನಲ್ಲಿ ನೀರು ತೆಗೆದಿದ್ದರೇ ಪುತ್ರಿ ಸಾಯುತ್ತಿರಲಿಲ್ಲ. ಪುತ್ರಿ ಅಕ್ಷಯಾಗೆ ಪೈಲಟ್ ಆಗಬೇಕೆಂಬ ಕನಸು ಇತ್ತು. ತುಂಬಾ ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಿದ್ದೆ ಎಂದು ದುಃಖಿತರಾಗಿದ್ದಾರೆ. ಅಕ್ಷಯಾಳ ತಂದೆ ನರಸಿಂಹಮೂರ್ತಿ ಬಿಎಂಟಿಸಿನಲ್ಲಿ ಡ್ರೈವರ್ ಕಂ ಕಂಡಕ್ಟರ್ ಆಗಿದ್ದಾರೆ. ಅವರಿಗೆ ಮೂರು ಜನ ಮಕ್ಕಳು, ಅಕ್ಷಯಾ ಹಿರಿಯ ಮಗಳೆಂದು ತಿಳಿದು ಬಂದಿದೆ.