ಮೈಸೂರು ಅತ್ಯಾಚಾರ ಹಾಗೂ ಜನಪ್ರತಿನಿಧಿಗಳ ಅಸಂಬದ್ಧ ಹೇಳಿಕೆ ಖಂಡಿಸಿ ಪ್ರತಿಭಟನೆ

ದಾವಣಗೆರೆ: ದಾವಣಗೆರೆ ನಗರದ ಜೆ.ಹೆಚ್.ಪಟೇಲ್ ಕಾಲೇಜ್ ಮುಂಭಾಗ ಜೆ.ಹೆಚ್.ಪಟೇಲ್ ಕಾಲೇಜ್ ಹಾಗೂ ಪ್ರಗತಿಪರ ಚಿಂತಕರು ಇಂದು ಪ್ರತಿಭಟನೆ ನೆಡಸಿ ವಕೀಲರದ ಅನಿಫ್ ಭಾಷಾ ಮಾತನಾಡಿ ವಿಕೃತ ಕಾಮುಕರಿಂದ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ . ಇದರಿಂದ ಹೆಣ್ಣು ಮಕ್ಕಳು ಭಯಭೀತರಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ . ಇನ್ನೊಂದೆಡೆ ನಮ್ಮ ಒಳಿತನ್ನು ಬಯಸಬೇಕಾಗಿದ್ದ ಹೆಣ್ಣುಮಕ್ಕಳ ರಕ್ಷಣೆ ಕಾಪಾಡುವ ಹೊಣೆಹೊತ್ತಿರುವಂತಹ ಪ್ರಜಾ ಪ್ರತಿನಿಧಿಗಳು ಬಾಯಿಗೆ ಬಂದಂತಹ ರೀತಿಯಲ್ಲಿ ಮಾತನಾಡಿ ಜನಸಾಮಾನ್ಯರಲ್ಲಿ ಆತಂಕವನ್ನು ಸೃಷ್ಟಿ ಮಾಡುತ್ತಿದ್ದಾರೆ . ಸಂಸದರಾದ ಜಿ.ಎಂ ಸಿದ್ದೇಶ್ ಮಾಧ್ಯಮ ಮಿತ್ರರ ಪ್ರಶ್ನೆಗೆ ಉತ್ತರಿಸುತ್ತ ಮೈಸೂರಿನಲ್ಲಿ ಅತ್ಯಾಚಾರ ನಡೆದರೆ ನನ್ನನ್ನು ಯಾಕೆ ಕೇಳುತ್ತೀರಿ ನಾನೇನು ನೋಡಿದ್ದೀನ , ಮಾಡಿದ್ದೀನ ಅಲ್ಲಿ ಅತ್ಯಾಚಾರ ನಡೆದಿರುವುದು ನನಗೆ ಗೊತ್ತಿಲ್ಲ ಎಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದು , ಒಂದು ಹೆಣ್ಣಿಗೆ ಅನ್ಯಾಯವಾಗಿದೆ ಆ ಹೆಣ್ಣಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಮಾತನಾಡುವುದು ಬಿಟ್ಟು ಉಡಾಫೆಯ ಹೇಳಿಕೆ ನೀಡಿರುವುದು ಖಂಡನೀಯವಾಗಿದೆ ಹಾಗೂ ಇಡೀ ಹೆಣ್ಣು ಕುಲಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಹೇಳಿದರು . ಜೆ.ಹೆಚ್ ಪಟೇಲ್ ಕಾಲೇಜಿನ ಪ್ರಾಂಶುಪಾಲರಾದ ಪ್ರತಿಭಾ.ಪಿ ದೊಡ್ಡಳ್ಳಿರವರು ಮಾತನಾಡಿ ಅತ್ಯಾಚಾರ ವೆಸಗಿರುವಂತಹ ಆರೋಪಿಗಳಿಗೆ ಹೆಚ್ಚಿನ ಘೋರ ಶಿಕ್ಷೆಗೆ ಒಳಪಡಿಸಬೇಕು ಅಲ್ಲದೆ ಇಂತಹ ಸಮಾಜ ಘಾತುಕ ಘಟನೆಯ ಬಗ್ಗೆ ಗೃಹ ಸಚಿವರು ಮತ್ತು ಇತರೆ ಮಹಿಳಾ ಪ್ರಜಾ ಪ್ರತಿನಿಧಿಗಳು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ . ಹೆಣ್ಣು ಮಕ್ಕಳು ಸಾಯಂಕಾಲ ಆ ಜಾಗಕ್ಕೆ ಹೋಗಬಾರದಿತ್ತು ಎಂದು ಹೆಣ್ಣು ಮಕ್ಕಳಿಗೆ ನಿರ್ಭಂಧ ಹಾಕಿ ಆಮೇಲೆ ಕ್ಷಮೆ ಕೇಳಿದ್ದು ಗಮನಿಸಿದರೆ ಇವರ ಮನಸ್ಥಿತಿ ಎಂತಹದು ಎಂದು ಮೇಲ್ನೋಟಕ್ಕೆ ಕಾಣುತ್ತದೆ . ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಕೂಡ ಹೆಣ್ಣು ಮಕ್ಕಳು ನಿರ್ಭೀತವಾಗಿ ಓಡಾಡುವ ಪರಿಸ್ಥಿತಿಯಲ್ಲಿಲ್ಲ ಎಂದು ಹೇಳಿದರು . ಈ ಸಂದರ್ಭದಲ್ಲಿ ಹಾಜರಿದ್ದ ವಕೀಲರಾದ ಸುಧಾ , ಉಪನ್ಯಾಸಕರಾದ ಅಶ್ವಿನಿ , ಚೈತ್ರ , ಖಾಜಾ ಕೊಪ್ಪಳ , ಕರಿಬಸಪ್ಪ , ರಾಜೇಶ್ವರಿ ಇನ್ನಿತರರು ಇದ್ದರು