nation; ಒಂದು ರಾಷ್ಟ್ರ; ಒಂದು ವಿದ್ಯಾರ್ಥಿ ಏನಿದು APAAR ID ಕಾರ್ಡ್ ಹಾಗೂ ಇದರ ಉದ್ದೇಶ?

ಹೊಸದೆಹಲಿ: ದೇಶದ nation  ಎಲ್ಲಾ ನಾಗರೀಕರು ತಮ್ಮ ಗುರುತಿನ ಪುರಾವೆಗಾಗಿ ಹೇಗೆ ಆಧಾರ್ ಕಾರ್ಡ್ ಅನ್ನು ಬಳಸುತ್ತಿದ್ದಾರೋ ಹಾಗೆಯೇ ದೇಶದಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಐಡಿ ಕಾರ್ಡ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

NEP-2020 ರ ಅಡಿಯಲ್ಲಿ ಪೂರ್ವ ಪ್ರಾರ್ಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಒಂದೇ ಐಡಿ ಇರುವಂತೆ ಪ್ರತಿಯೊಬ್ಬ ವಿದ್ಯಾರ್ಥಿಗೂ ನೂತನ ನಂಬರ್ ನೀಡಲಾಗುತ್ತಿದ್ದು, ಈ ಐಡಿಯನ್ನು ಸ್ವಯಂಚಾಲಿತ ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿ (APPAR – Automated Permanent Academic Account Registry) ಎಂದು ಕರೆಯಲಾಗುತ್ತದೆ. ಹಾಗಾದರೆ ಏನಿದು ಅಪಾರ್ ಐಡಿ? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದರ ವೈಶಿಷ್ಟ್ಯಗಳೇನು? ಎಂಬುದರ ಕುರಿತು ಇಲ್ಲಿ ನೋಡೋಣ.

 

APAAR ID ಎಂದರೇನು?
ಮೊದಲೇ ಹೇಳಿದಂತೆ, APAAR ಎಂದರೆ ಸ್ವಯಂಚಾಲಿತ ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿ. ಭಾರತದ ಎಲ್ಲಾ ನಾಗರೀಕರಿಗೆ ಹೇಗೆ ಆಧಾರ್ ಕಾರ್ಡ್ ಬಹುಮುಖ್ಯವಾಗಿ ಕಾರ್ಯನಿರ್ವಹಿಸುತ್ತದೋ ಹಾಗೆಯೇ ಕೇಂದ್ರ ಸರ್ಕಾರ ಭಾರತದ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಒಂದು ಅನನ್ಯ ಗುರುತಿನ ಸಂಖ್ಯೆಯನ್ನು ನೀಡುವ ಮೂಲಕ ತನ್ನ Lifelong student ID ಅಂತ consider ಮಾಡಲಿದ್ದು, ವಿದ್ಯಾರ್ಥಿಗಳ Academic Journey ಹಾಗೂ ಸಾಧನೆಗಳನ್ನ ಟ್ರ್ಯಾಕ್ ಮಾಡಲು ಸುಲಭವಾಗಲಿದೆ. ಇನ್ನು ಈಗಾಗಲೇ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ APPAR ID create ಮಾಡಲು ಕೇಂದ್ರ ಶಿಕ್ಷಣ ಸಚಿವಾಲಯ ನಿರ್ದೇಶನ ನೀಡಿದೆ.

ಈ ಕಾರ್ಡಿಗೆ ಪಾಲಕರ ಒಪ್ಪಿಗೆ ಕಡ್ಡಾಯ!
ಈ ಹೊಸ ಗುರುತಿನ ಸಂಖ್ಯೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪೋಷಕರೊಂದಿಗೆ ಮಾತನಾಡಲು ಮತ್ತು ಅದಕ್ಕೆ ಅವರ ಒಪ್ಪಿಗೆಯನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವು ಶಾಲೆಗಳಿಗೆ ತಿಳಿಸಿದೆ. ಕೇಂದ್ರ ಸರ್ಕಾರ ಪ್ರಾರಂಭಿಸಿರುವ ‘ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ’ ಯೋಜನೆಯಡಿ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಬಿಡುಗಡೆ ಮಾಡಲಾಗುವುದು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಸಾಧನೆಗಳನ್ನು ಟ್ರ್ಯಾಕ್ ಮಾಡಲು ಸುಲಭವಾಗುತ್ತದೆ.

ಎಐಸಿಟಿಇ ಅಧ್ಯಕ್ಷರಾದ ಟಿಜಿ ಸೀತಾರಾಮನ್ ಅವರ ಪ್ರಕಾರ, “ಎಪಿಎಎಆರ್ ಮತ್ತು ನ್ಯಾಷನಲ್ ಕ್ರೆಡಿಟ್ ಫ್ರೇಮ್ವರ್ಕ್ ಭಾರತದಾದ್ಯಂತ ಕಲಿಯುವವರಿಗೆ ಕ್ಯೂಆರ್ ಕೋಡ್ ಆಗಿರುತ್ತದೆ. ಅವರು ತೆಗೆದುಕೊಳ್ಳುವ ಪ್ರತಿಯೊಂದು ಕೌಶಲ್ಯವನ್ನು ಪರಿಗಣಿಸುವ ಮೂಲಕ ಮನ್ನಣೆ ಮಾಡಲಾಗುತ್ತದೆ”

ಪೋಷಕರು ಮತ್ತು ಶಿಕ್ಷಕರ ಸಭೆ ಆಯೋಜಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದಿಂದ ಕರೆ
ರಾಜ್ಯ ಶಿಕ್ಷಣ ಇಲಾಖೆಗಳಿಂದ ವಿದ್ಯಾರ್ಥಿಗಳಿಗೆ APAAR ID ರಚಿಸುವ ಪ್ರಾಮುಖ್ಯತೆಯ ಕುರಿತು ಮುಕ್ತವಾಗಿ ಚರ್ಚಿಸಲು ಹಾಗೂ ಮಾಹಿತಿ ಒದಗಿಸಲು ಅಕ್ಟೋಬರ್ 16 ರಿಂದ 18 ರೊಳಗಾಗಿ ಶಿಕ್ಷಕರು ಹಾಗೂ ಪೋಷಕರೊಂದಿಗೆ ಸಭೆ ನಡೆಸುವಂತೆ ಕೇಂದ್ರ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ತಿಳಿಸಿದೆ.

ಏಕೆಂದರೆ, ವಿದ್ಯಾರ್ಥಿಗಳ ರಕ್ತದ ಗುಂಪು, ಎತ್ತರ, ತೂಕ ಹೀಗೆ ಮಾಹಿತಿಗಳನ್ನು ಎಪಿಪಿಆರ್ ಕಾರ್ಡ್ ಗೆ ನವೀಕರಿಸಬೇಕಾಗುತ್ತದೆ. ಈ ಮಾಹಿತಿಗಳು ಸರ್ಕಾರದ ವ್ಯಾಪ್ತಿಯಡಿ ಗೌಪ್ಯವಾಗಿಡಲಾಗುವುದು. ಅಗತ್ಯವಿದ್ದಾಗ ಮಾತ್ರ ಸಂಬಂಧಪಟ್ಟ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳಲಾಗುವುದು. ಈ ಕುರಿತು ಒಪ್ಪಿಗೆ ನೀಡುವ ಯಾವುದೇ ಪೋಷಕರು ಹಾಗೂ ಶಿಕ್ಷಕರು ಯಾವುದೇ ಸಂದರ್ಭದಲ್ಲಿ ತಮ್ಮ ಒಪ್ಪಿಗೆಯನ್ನು ಹಿಂಪಡೆಯಬಹುದಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟೀಕರಿಸಿದೆ.

 

Leave a Reply

Your email address will not be published. Required fields are marked *

error: Content is protected !!