taralabalu; ಪಲ್ಲಾಗಟ್ಟೆಯ ಗುರುವಂದನಾ ಸಮಾರಂಭದಲ್ಲಿ ಆಜೀವ ದೇಣಿಗೆ ಘೋಷಿಸಿದ ಮಹದೇವಪ್ಪ ದಿದ್ದಿಗೆ

ದಾವಣಗೆರೆ;  taralabalu ಜಗಳೂರು ತಾಲ್ಲೂಕು ಪಲ್ಲಾಗಟ್ಟೆ ಗ್ರಾಮದಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀಮತಿ ಸಿದ್ದಮ್ಮ ಗ್ರಾಮೀಣ ಫ್ರೌಡಶಾಲೆಯಲ್ಲಿ ವಿದ್ಯಾಥಿ೯ಗಳಿಂದಕಾಯ೯ಕ್ರಮವನ್ನು ಗುರುಗಳೆಲ್ಲರೂ ಸೇರಿ ಉದ್ಛಾಟಿಸಿದರು, ನಮ್ಮನ್ನಗಲಿದ ಗುರುವಗ೯ ಹಾಗು ವಿದ್ಯಾಥಿ೯ಮಿತ್ರರನ್ನು ಶ್ರದ್ದಾಂಜಲಿ ಸಲ್ಲಿಸುವ ಮೂಲಕ ನೆನಪಿಸಿಕೊಂಡರು 29 ವಷ೯ಗಳ ನಂತರ ಎಲ್ಲಾ ಸ್ನೆಹಿತರು ತಮ್ಮಗಳ ಪರಿಚಯ ಮಾಡಿಕೊಂಡರು ನಮ್ಮ ಮಕ್ಕಳಿಗೆ ಈ ಸಂಸ್ಕಾರವನ್ನು ಮುಂದುವರಿಸುವ ಕುರಿತು ಹಾಗು ಮುಂದಿನ ಫೀಳಿಗೆಗೆ ಮಾದರಿಯಾಗಬೇಕು ಎನ್ನುವ ಉದ್ದೇಶದಿಂದ ಗ್ರಾಮಸ್ಥರೂ ಹಾಗು ನಮ್ಮ ಸುತ್ತಮುತ್ತಲ ಗ್ರಾಮಗಳ ಹಳೆಯ ವಿದ್ಯಾಥಿ೯ಗಳು ಹಾಗು ಪೋಷಕರು , ವಿದ್ಯಾಥಿಗಳು ಭಾಗವಹಿಸಿದ್ದರು ವಿದ್ಯಾಥಿ೯ಗಳು ಸಾಂಸ್ಕೃತಿಕ ಕಾಯ೯ಕ್ರಮ ನಡೆಸಿಕೊಟ್ಟರು, ಮಹದೇವಪ್ಪ ದಿದ್ದಿಗೆ ಇವರು ಆಜೀವ ಪಯ೯ಂತ ತಮ್ಮ ತಂದೆ ಹಾಗು ತಾಯಿಯ ಹೆಸರಿನಲ್ಲಿ ಶೇಕಡ 90% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾಥಿ೯ಗೆ 5001/- ರೂಪಾಯಿಗಳನ್ನು ನೀಡುತ್ತೇನೆಂದು ಗುರುಗಳ ಸಮ್ಮುಖದಲ್ಲಿ ತಿಳಿಸಿದರು.

ಪಲ್ಲಾಗಟ್ಟೆ ಸಿದ್ದಮ್ಮ ಗ್ರಾಮೀಣ ಶಾಲೆಯಲ್ಲಿ ಹಳೆವಿದ್ಯಾಥಿ೯ಗಳಿಂದ ಗುರುವಂದನೆ ಹಾಗು ಸ್ನೇಹಸಮ್ಮಿಲನದಲ್ಲಿ ರೀಟಾ ಪ್ರಾಥ೯ನೆ, ಮಾಡಿದರು ಸ್ವಾಗತನುಡಿಯನ್ನು ಗೋಣಿಬಸವರಾಜು ಪ್ರಾಸ್ತವಿಕ ನುಡಿಯನ್ನು ತಿಮ್ಮಪ್ಪನವರು ಮಾಡಿದರು. ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಯ ಮಾರುತೇಶ್ ವಹಿಸಿದ್ದರು, ಮಹದೇವಪ್ಪ ದಿದ್ದಿಗೆ ಹಾಗು ಸ್ನೇಹಿತರು ಎಲ್ಲಾ ಗುರುಗಳನ್ನು ಸನ್ಮಾನಿಸಿ ಗೌರವಿಸಿದರು. ಎಸ್ . ಡಿ. ಎಂ. ಸಿ ಅಧ್ಯಕ್ಷರಾದ ನಾಗರಾಜು ಉಪಸ್ಥಿತರಿದ್ದರು, ನಿರೂಪಣೆಯನ್ನು ಶಿವಗಂಗಮ್ಮ ವಂದನಾಪ೯ಣೆಯನ್ನು ಮಹೇಶ್ವರಪ್ಪ. ಆರ್. ಹೆಚ್. ಮಾಡಿದರು.

Leave a Reply

Your email address will not be published. Required fields are marked *

error: Content is protected !!