“ನವಶಕ್ತಿ ನಮನ” ನಮನ ಅಕಾಡೆಮಿಯ ನೃತ್ಯ ರೂಪಕ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿಯ ಬ್ರಹ್ಮ ಕಳಶೋತ್ಸವದಲ್ಲಿ .

"ನವಶಕ್ತಿ ನಮನ" ನಮನ ಅಕಾಡೆಮಿಯ ನೃತ್ಯ ರೂಪಕ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿಯ ಬ್ರಹ್ಮ ಕಳಶೋತ್ಸವದಲ್ಲಿ .

ದಾವಣಗೆರೆ :ದಾವಣಗೆರೆಯ ಪ್ರತಿಷ್ಠಿತ ನಮನ ಅಕಾಡೆಮಿಯು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಅಷ್ಟಬಂಧ ಬ್ರಹ್ಮಕಲಶೋತ್ಸವ ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ “ನವಶಕ್ತಿ ನಮನ” ಎಂಬ ನೃತ್ಯ ರೂಪಕವನ್ನು ಪ್ರಸ್ತುತಪಡಿಸಿದರು. ನವ ದುರ್ಗೆಯರ ಅವತಾರಗಳನ್ನು ವರ್ಣಿಸುವ ಹಾಡುಗಳಿಗೆ ಶಾಸ್ತ್ರೀಯ ನೃತ್ಯದ ಮೂಲಕ ಅವತಾರದ ಉದ್ದೇಶ, ಸಾರ್ಥಕತೆಯ ಕಥೆಯನ್ನು ಹೆಣೆಯಲಾಗಿತ್ತು. ಅಂತ್ಯದಲ್ಲಿ ನವದುರ್ಗೆಯ ರ ಸಮ್ಮಿಲನದ ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನಮನ ಅಕಾಡೆಮಿಯ ನೃತ್ಯ ಗುರುಗಳಾದ ಗುರು ವಿದುಷಿ ಶ್ರೀಮತಿ ಮಾಧವಿ ಡಿ ಕೆ ಅವರ ಪರಿಕಲ್ಪನೆ, ನಿರ್ದೇಶನ ಹಾಗೂ ನೃತ್ಯ ಸಂಯೋಜನೆ ಎಲ್ಲರ ಮನಸ್ಸಿನಲ್ಲಿ ಭಕ್ತಿ ಭಾವವನ್ನು ಮೂಡಿಸಿತು. ನಮನ ಅಕಾಡೆಮಿ ಶಿಷ್ಯಂದಿರಾದ ಮಾನ್ವಿ. ಜಿ. ಎಂ., ಸಿಂಚನ ಜಿ ಪಿ, ಭವಾನಿ. ಡಿ .ಎಸ್, ಸಂಸ್ಕೃತಿ ಜೆ ಆಚಾರ್, ಸಹನ ಗೌಳಿ, ಯುಕ್ತಾ ಶ್ಯಾ೦ ಕಠಾರೆ, ಭೂಮಿಕಾ ಶ್ಯಾ೦ ಕಠಾರೆ, ಪರಿಣಿಕಾ ಕೆ .ವಿ, ಸಿಂಚನ.ಎಸ್, ತನುಶ್ರೀ ಎಂ., ಋತು ಹಿರೇಮಠ್, ಮನ್ವಿತ ಎ ವಿ, ನೀಲು ಅರೋರ್ ಎಸ್, ಸ್ಪೂರ್ತಿ. ಎಸ್. ಬಿ, ಜಾಹ್ನವಿ ಎಮ್, ಪೂಜಾ. ಆರ್.ಢಗೆ ನೃತ್ಯರೂಪಕದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದರು. ನೃತ್ಯ ರೂಪಕದ ನಿರೂಪಣೆಯನ್ನು ನಮನ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಅವರು ನಡೆಸಿಕೊಟ್ಟರು. ಸುಮಾರು 2 ಗಂಟೆಗಳ ಕಾಲ ಪ್ರೇಕ್ಷಕರು ನವಶಕ್ತಿ ನಮನವನ್ನು ಆಸ್ವಾದಿಸಿದರು.

"ನವಶಕ್ತಿ ನಮನ" ನಮನ ಅಕಾಡೆಮಿಯ ನೃತ್ಯ ರೂಪಕ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿಯ ಬ್ರಹ್ಮ ಕಳಶೋತ್ಸವದಲ್ಲಿ .

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!