ಉಕ್ರೇನ್‌ನಲ್ಲಿ ಸಾವನ್ನಪ್ಪಿದ ನವೀನ್ ದೇಹದಾನ ಪತ್ರದಲ್ಲಿ ಏನಿದೆ ಗೊತ್ತಾ? ಕುಟುಂಬಸ್ಥರಿಗೆ ಎಸ್‌ಎಸ್ ಆಸ್ಪತ್ರೆ ನೀಡಿದ “ಮರಣೋತ್ತರ ದೇಹದಾನ ಮೃತ್ಯು ಪತ್ರ” ಗರುಡ ವಾಯ್ಸ್ ನಲ್ಲಿ

ssims

ದಾವಣಗೆರೆ : ಉಕ್ರೇನ್ ಮತ್ತು ರಷ್ಯಾದ ನಡುವಿನ ಕದನದಲ್ಲಿ ತಾಯ್ನಾಡಿನ ಮಗ ನವೀನ್ ದುರದೃಷ್ಟವೆಂಬಂತೆ ಸಾವನ್ನಪ್ಪಿದ. ಇಂದು ಆತನ ಮೃತದೇಹವನ್ನು ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮಕ್ಕೆ ತಂದು ಪೂಜಾ ಕೈಂಕರ್ಯ ಕುಟುಂಬಸ್ಥರಿಂದ ನೆರವೇರಿಸಲಾಯಿತು. ಮಗನನ್ನು ವೈದ್ಯನಾಗಿ ನೋಡಬೇಕೆಂಬ ಪೋಷಕರ ಕನಸು ಭಗ್ನವಾಗಿದೆ. ಕೊನೆಗೂ ಮಗನ ಮುಖವನ್ನು ಕೊನೆ ಬಾರಿ ನೋಡಿದ್ದೇವೆ ಎಂಬ ತೃಪ್ತಿಯಲ್ಲಿರುವ ಪೋಷಕರು ಮಗನ ಮೃತ್ಯು ದೇಹವನ್ನು ದಾವಣಗೆರೆಯ ಶಾಮನೂರು ಶಿವಶಂಕರಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರಕ್ಕೆ ದಾನವಾಗಿ ನೀಡಿದ್ದು, ಪೂಜೆ ಕೈಕಂರ್ಯದ ನಂತರ ಇಂದು ಕಳುಹಿಸಲಾಗುತ್ತದೆ ಎನ್ನಲಾಗಿತ್ತು. ಇನ್ನು ನವೀನ್ ದೇಹದಾನ ಮಾಡಿರುವ ಕುರಿತು “ಮರಣೋತ್ತರ ದೇಹದಾನ ಮೃತ್ಯು ಪತ್ರ”ವನ್ನು ಶಾಮನೂರು ಶಿವಶಂಕರಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋ ಧನಾ ಕೇಂದ್ರ ನೀಡಿದೆ.


ನವೀನ್ ದೇಹದಾನ ಪತ್ರದಲ್ಲಿ ಏನಿದೆ ಗೊತ್ತಾ?
ನನ್ನ ಎಲ್ಲ ಕಾನೂನು ಬದ್ದವಾರಸುದಾರರು ನನ್ನ ಮರಣದ ಸಮಯದಲ್ಲಿ ಉಪಸ್ಥಿತರಿರುವವರು ಹಾಗೂ ನನ್ನ ಆಪ್ತೇಷ್ಠರು, ಬಂಧು-ಮಿತ್ರರು ಮತ್ತು ಮಿಕ್ಕ ಉಳಿದವರು, ಇವರೆಲ್ಲರಿಗೆ, “ ನಾನು ನವೀನ್ ಶೇಖರಪ್ಪ ಗ್ಯಾನಗೌಡ್ರು ಆದ ನಾನು ಪರೋಪಕಾರರ್ಥವಿದಂ ಶರೀರಂ ಎಂದು ನಂಬಿರುವ ನಾನು ಮರಣ ನಂತರ ಈ ನನ್ನ ದೇಹ ಬೇರೊಬ್ಬರಿಗೆ ಉಪಯೋಗವಾಗುವುದಾದರೆ ಅದಕ್ಕಿಂತ ಆಗುವ ಸಂತೋಷ ಬೇರೊಂದಿಲ್ಲ, ಇದರಿಂದ ಮತ್ತಷ್ಟು ಕಾಲ ನನ್ನ ದೇಹ ಸಾರ್ಥಕವಾಗಿ ಬದುಕಿದಂತೆ ಎಂದು ಅನಿಸುತ್ತದೆ. ಮರಣದ ನಂತರ ಈ ದೇಹಕ್ಕೆ ಮಾಡುವ ಸಂಸ್ಕಾರಕಿಂತಲೂ ದೇಹದಾನದಿಂದ ಮಾನವ ಕೋಟಿಗೆ ಆಗುವ ಸಂಶೋಧನೆಯ ಲಾಭ ಅತಿ ಶ್ರೇಷ್ಟ ಎಂದು ನನ್ನ ಮನಸ್ಸಿಗೆ ಪೂರ್ಣ ಮನವರಿಕೆಯಾಗಿದೆ. ಆದ್ದರಿಂದ ಮರಣದ ನಂತರ ಈ ನನ್ನ ದೇಹವನ್ನು ಪ್ರಾಂಶುಪಾಲರಾದ ಎಸ್.ಎಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ದಾವಣಗೆರೆ,. ಇವರಿಗೆ ಸ್ವೀಕರಿಸಲು ಸಂಪೂರ್ಣ ಅಧಿಕಾರ ಕೊಟ್ಟಿರುತ್ತೇನೆ. ಅವರು ಯಾವುದೇ ವೈದ್ಯಕೀಯ ಮಹಾವಿದ್ಯಾಲಯದಲ್ಲಿ, ವೈದ್ಯಕೀಯ ಉದ್ದೇಶಕ್ಕಾಗಿ ಯಾವ ರೀತಿಯಿಂದಾದರೂ ಸಂಪೂರ್ಣವಾಗಿ ಈ ದೇಹದ ಉಪಯೋಗ ಮಾಡಬಹುದು. ನನ್ನ ದೇಹವನ್ನು ಸ್ವೀಕರಿಸುವಾಗ, ಅದನ್ನು ಉಪಯೋಗಿಸುವಾಗ ಯಾರೂ ಯಾವುದೇ ರೀತಿಯ ತೊಂದರೆ, ಅಡಚಣೆ ಮಾಡಕೂಡದು, ಇದು ನನ್ನ ಆತ್ಮ ಸಂತೋಷದ ವಿಷಯವಾಗಿದೆ ಎಂದು ನಾನು ಸ್ವಿಚ್ಚೆಯಿಂದ ಸಂಪೂರ್ಣ ಮಾನಸಿಕ ಸ್ವಾಸ್ಥ್ಯದಿಂದ ಇರುವಾಗಲೇ ಬರೆದಿಟ್ಟ ಮರಣ ಪತ್ರ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!