ಅಗತ್ಯ ಔಷಧ ಬೆಲೆ ಶೇ. 10.7 ರಷ್ಟು ಏರಿಕೆ

ನವದೆಹಲಿ: ಪ್ಯಾರೆಸಿಟಮಾಲ್, ಅಜಿಥ್ರೊಮೈಸಿನ್ ಇತರೆ ಅಗತ್ಯ ಔಷಧಗಳ ಬೆಲೆಗಳು ಏಪ್ರಿಲ್‌ನಿಂದ 10.7% ರಷ್ಟು ಏರಿಕೆಯಾಗಲಿವೆ. ಭಾರತದ ರಾಷ್ಟಿಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ಶುಕ್ರವಾರ ರಾಷ್ಟಿಯ ಅಗತ್ಯ ಔಷಧಿಗಳ ಪಟ್ಟಿಯ ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲುಪಿಐ) 10.7% ರಷ್ಟು ಬೆಲೆ ಏರಿಕೆಯನ್ನು ಘೋಷಿಸಿರುವುದ ರಿಂದ ಗ್ರಾಹಕರು ಕೆಲವು ಅಗತ್ಯ ಔಷಧಿಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.

ಜ್ವರ, ಸೋಂಕುಗಳು, ಚರ್ಮ ರೋಗಗಳು, ಅಧಿಕ ರಕ್ತದೊತ್ತಡ, ರಕ್ತಹೀನತೆ ಮತ್ತು ಹೃದಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಓಐಇಒ ನಲ್ಲಿ ಸುಮಾರು 800 ನಿಗದಿತ ಔಷಧಿಗಳ ದರಗಳು ಏಪ್ರಿಲ್ 1 ರಿಂದ 10.7 ರಷ್ಟು ಏರಿಕೆಯಾಗುತ್ತವೆ. ಔಷಧಗಳ(ಬೆಲೆ ನಿಯಂತ್ರಣ) ಆದೇಶ, 2013 ರ ನಿಬಂಧನೆಗಳ ಪ್ರಕಾರ ಮುಂದಿನ ಕ್ರಮಕ್ಕಾಗಿ ಇದನ್ನು ಸಂಬAಧಪಟ್ಟ ಎಲ್ಲರ ಗಮನಕ್ಕೆ ತರಲಾಗಿದೆ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.  ಪ್ಯಾರೆಸಿಟಮಾಲ್, ಅಜಿಥ್ರೊಮೈಸಿನ್, ಫೆನೋಬಾರ್ಬಿಟೋನ್, ಸಿಪ್ರೊಫ್ಲೋಕ್ಸಾಸಿನ್ ಹೈಡ್ರೋಕ್ಲೋರೈಡ್, ಫೆನಿಟೋಯಿನ್ ಸೋಡಿಯಂ ಮತ್ತು ಮೆಟ್ರೋನಿಡಜೋಲ್ನಂತಹ ಅಗತ್ಯ ಔಷಧಗಳನ್ನು ಒಳಗೊಂಡಿದೆ.

Leave a Reply

Your email address will not be published. Required fields are marked *

error: Content is protected !!