tennis; ಅ. 22 ರಿಂದ 29 ರವರೆಗೆ ಅಂತರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿ
ದಾವಣಗೆರೆ, ಅ. 19: ದಾವಣಗೆರೆಯಲ್ಲಿ ಅಕ್ಟೋಬರ್ 22 ರಿಂದ 29 ರವರೆಗೆ ಅಂತರಾಷ್ಟ್ರೀಯ ಟೆನ್ನಿಸ್ (Tennis) ಪಂದ್ಯಾವಳಿಗಳು ನಡೆಯಲಿದ್ದು, ವಿವಿಧ ದೇಶದ ಆಟಗಾರರು ಈ ಪಂದ್ಯಾವಳಿಗಳಲ್ಲಿ ಭಾಗವಹಿಸುವರು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.
ಗುರುವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್ ಆಶ್ರಯದಲ್ಲಿ ನಗರದ ಹೈಸ್ಕೂಲ್ ಮೈದಾನದಲ್ಲಿರುವ ಟೆನ್ನಿಸ್ ಕ್ಲಬ್ ಆಶಯದಲ್ಲಿ ದಾವಣಗೆರೆ ಟೆನ್ನಿಸ್ ಕೋರ್ಟ್ ನಡೆಯಲಿರುವ ಅಂತರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಟೆನ್ನಿಸ್ ಪಂದ್ಯಾವಳಿ ದಾವಣಗೆರೆ ಇದು ಮೂರನೇ ಬಾರಿ ನಡೆಯುತ್ತಿರುವ ಅಂತರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿಯಾಗಿದೆ. ಈ ಪಂದ್ಯಾವಳಿಯಲ್ಲಿ ಅಮೇರಿಕಾ, ಸ್ವಿಡ್ಜರ್‍ಲ್ಯಾಂಡ್, ಸ್ವೀಡನ್ ಹಾಗೂ ಆಸ್ಟ್ರೇಲಿಯಾ ಒಳಗೊಂಡಂತೆ ವಿಶ್ವದ 16 ರಿಂದ 19 ದೇಶದ ಆಟಗಾರರು ಭಾಗವಹಿಸಲಿದ್ದಾರೆ.
ಚನ್ನಗಿರಿ ಶಾಸಕರೇ, ನಿಮಗೆ ಮತ ಹಾಕಿ ಜೂಜಾಟ ಆಡಲು ಬಿಟ್ಟಿಲ್ಲ: ಹೊದಿಗೆರೆ ರಮೇಶ್ ಆರೋಪ
ಅಕ್ಟೋಬರ್ 22 ಮತ್ತು 23 ರಂದು ನಡೆಯುವ ಅರ್ಹತಾ ಸುತ್ತಿನ ಪಂದ್ಯದಲ್ಲಿ 32 ಜನ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು ಇಲ್ಲಿ ವಿಜಯಶಾಲಿಯಾದ 8 ಜನರನ್ನು ಮುಖ್ಯ ಪಂದ್ಯಾವಳಿಗೆ ಆಯ್ಕೆ ಮಾಡಲಾಗುತ್ತದೆ. ಮುಖ್ಯ ಪಂದ್ಯಾವಳಿಗೆ ನೇರವಾಗಿ 20 ಸ್ಪರ್ಧಿಗಳು ಹಾಗೂ ಅರ್ಹತಾ ಸುತ್ತಿನಿಂದ 8 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
ಅಕ್ಟೋಬರ್ 24 ರಂದು ಬೆಳಿಗ್ಗೆ 9 ಗಂಟೆಗೆ ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಅಂತರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿಯ ಉದ್ಘಾಟನೆಯನ್ನು ನೆರವೇರಿಸುವರು.
ಅಂತರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ 15 ಲಕ್ಷ ನಗದು ಬಹುಮಾನವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಉಮಾ ಪ್ರಶಾಂತ್, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಆರ್ ಜಯಲಕ್ಷ್ಮಿಬಾಯಿ, ಟೆನ್ನಿಸ್ ಕ್ಲಬ್ ಅಧ್ಯಕ್ಷೆ ಡಾ.ಶ್ರೀಶೈಲ ಬ್ಯಾಡಗಿ, ಹಿರಿಯ ಟೆನ್ನಿಸ್ ತರಬೇತುದಾರ ಕೆ.ಪಿ ಚಂದ್ರಪ್ಪ, ರಘುನಾಥ್, ನಿಂಗಪ್ಪ, ಮೂರ್ತಿ ಉಪಸ್ಥಿತರಿದ್ದರು.